ಉಜಿರೆ: ಕಳೆದ 35 ವರ್ಷಗಳಿಂದ ಉಜಿರೆ ಸಂತೆಕಟ್ಟೆಯಲ್ಲಿ ಕಾರ್ಯಚರಿಸುತ್ತಿರುವ ಉದಯ ಚಿಕನ್ ಇದರ ನವೀಕೃತ ಕಟ್ಟಡದ ಉದ್ಘಾಟನೆ ಹಾಗೂ ತಾಲೂಕಿನ ಮೊದಲ ಹೈಜೀನಿಕ್ ಚಿಕನ್ ಮಳಿಗೆ ಉದಯ ಚಿಕನ್ ಇದರ ಶುಭಾರಂಭವು ಅ. 30 ರಂದು ನಡೆಯಿತು.
ವಿಧಾನ ಪರಿಷತ್ ಶಾಸಕ ಕೆ.ಪ್ರತಾಪ ಸಿಂಹ ನಾಯಕ್ ಉದಯ ಚಿಕನ್ ನವೀಕೃತ ಕಟ್ಟಡದ ಉದ್ಘಾಟನೆಯನ್ನು ನೇರವೇರಿಸಿ ಶುಭ ಕೋರಿದರು.
ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ ಉದಯ ಚಿಕನ್ ಮಳಿಗೆಯನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಶುಭ ಕೋರಿದರು.
ಉಜಿರೆ ಕಾಲಬೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ರಂಜನ್ ಜಿ ಗೌಡರವರು ಡೋರ್ ಡೆಲಿವರಿ ವಾಹನ ಕೀ ಹಸ್ತಾಂತರ ಮಾಡಿದರು.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಮಾಜಿ ಶಾಸಕ ಕೆ.ಹರೀಶ್ ಕುಮಾರ್,ಲಕ್ಷ್ಮಿ ಇಂಡಸ್ಟ್ರೀಸ್ ಕನಸಿನ ಮನೆ ಮಾಲಕ ಮೋಹನ್ ಕುಮಾರ್,ಉಜಿರೆ ಗ್ರಾ.ಪಂ ಅಧ್ಯಕ್ಷೆ ಉಷಾ ಕಿರಣ್ ಕಾರಂತ್, ಉಜಿರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ, ಉಜಿರೆ ಶಾರದಾ ಸೇವಾ ಟ್ರಸ್ಟ್ ಅದ್ಯಕ್ಷ ಭರತ್ ಕುಮಾರ್ ಭಾಗವಹಿಸಿ ನೂತನ ಸಂಸ್ಥೆಗೆ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಉಜಿರೆ ಗ್ರಾ.ಪಂ ಉಪಾಧ್ಯಕ್ಷ ರವಿ ಕುಮಾರ್ ಬರಮೇಲು, ಬಾಲಕೃಷ್ಣ ಶೆಟ್ಟಿ ಉಜಿರೆ, ಲ| ಉಮೇಶ್ ಶೆಟ್ಟಿ ಉಜಿರೆ, ಸಂಜೀವ ಶೆಟ್ಟಿ ಕುಂಠಿನಿ, ಪ್ರೀತಮ್ ಡಿ ಧರ್ಮಸ್ಥಳ, ರಘರಾಮ ಶೆಟ್ಟಿ ಸಾಧಾನ,ದಿಶಾ ಪುಢ್ ಕಾರ್ನರ್ ಅರುಣ್ ಕುಮಾರ್, ಪಂಅ.ಅಧಿಕಾರಿ ಗಾಯತ್ರಿ, ಕಾಲಬೈರವೇಶ್ವರ ಸಹಕಾರಿ ಸಂಘದ ಸಿಇಓ ದಿನೇಶ್, ರವೀಂದ್ರ ಶೆಟ್ಟಿ ಬಳಂಜ, ಭರತ್ ಕುಮಾರ್ ಇಂದಬೆಟ್ಟು, ರವಿ ಚಕ್ಕಿತ್ತಾಯ ಹಾಗೂ ಸಂಸ್ಥೆಯ ಮಾಲಕರ ಬಂಧುಗಳು, ಸ್ನೇಹಿತರು ಉಪಸ್ಥಿತರಿದ್ದರು.
ಆಗಮಿಸಿದ ಅತಿಥಿ ಗಣ್ಯರನ್ನು ಸಂಸ್ಥೆಯ ಮಾಲಕರಾದ ಕೆ.ರಾಮಚಂದ್ರ ಶೆಟ್ಟಿ, ಅಜಯ್ ಶೆಟ್ಟಿ ಮತ್ತು ಮನೆಯವರು ಸ್ವಾಗತಿಸಿ,ಸತ್ಕರಿಸಿದರು.