ಬೆಳ್ತಂಗಡಿ: ದೇಶದಲ್ಲಿ ಹೊಸ ಇತಿಹಾಸ ಸೃಷ್ಟಿ ಹಾಗೂ ದೇಶದ ಆರ್ಥಿಕತೆ ಸುಧಾರಣೆಯಾಗುವಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕಾರಣ. ಇಂದಿರಾ ಗಾಂಧಿ ನಾಲ್ಕು ದಶಕಗಳ ಹಿಂದೆ ಜಾರಿಗೆ ತಂದ ಯೋಜನೆಗಳಿಂದ ಇಂದಿಗೂ ಈ ದೇಶದ ಬೆಸ್ಟ್ ಪ್ರಧಾನಿ ಎಂದು ಜಗತ್ತೇ ಹೇಳುತ್ತದೆ. . ಭೂ ಸುಧಾರಣೆ ಕಾಯ್ದೆ ಈ ದೇಶದ ಜನರಿಗೆ ಒಳಿತನ್ನು ಮಾಡಿದ ಕಾರ್ಯಕ್ರಮ.
,ದೇಶದಲ್ಲಿ ಬ್ಯಾಂಕ್ಗಳ ವಿಲೀನದಿಂದ ಆರ್ಥಿಕ ಸ್ಥಿರತೆಗೆ ಕಾರಣರಾದರು. ಇವರ ಇಡೀ ಕುಟುಂಬವೇ ಮಹಾತ್ಯಾಗಕ್ಕೆ ಹೆಸರಾಗಿದೆ. ಇಂದಿರಾ ಗಾಂಧಿ ಮಾಡಿದ ಕೆಲಸ ಇಂದಿಗು ಜೀವಂತವಾಗಿದೆ. ಬಡವರನ್ನು ಮೇಲೆತ್ತಲು ಅವರು ಕೈಗೊಂಡ ಯೋಜನೆಗಳು ಮಹತ್ವದ್ದು ಎಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಸಭಾಂಗಣದಲ್ಲಿ ನಡೆದ ಇಂದಿರಾಗಾಂಧಿ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಇಂದಿರಾಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕೆಪಿಸಿಸಿ ಪ್ರಧಾನ ರಕ್ಷಿತ್ ಶಿವರಾಂ ಮಾತನಾಡಿದರು.
ಈ ಸಂದರ್ಭದಲ್ಲಿ 59 ಸಾವಿರ ರೂಪಾಯಿ ವಿದ್ಯಾರ್ಥಿ ವೇತನ ಮತ್ತು ವೈದ್ಯಕೀಯ ನಿಧಿ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿಯ ಅಧ್ಯಕ್ಷ ಕೆ ಎಮ್ ನಾಗೇಶ್ ಕುಮಾರ್ ಗೌಡ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಪದ್ಮನಾಭ ಸಾಲಿಯಾನ್ ಮಾಲಾಡಿ, ಜಿಲ್ಲಾ ಕೆಡಿಪಿ ಸದಸ್ಯರಾದ ಸಂತೋಷ್ ಕುಮಾರ್ ಲಾಯಿಲ, ಕಾಂಗ್ರೆಸ್ ಸೇವಾದಳದ ಅಧ್ಯಕ್ಷರಾದ ಪ್ರದೀಪ್ ಕೆ ಸಿ ,ತಾಲೂಕು ಎಸ್ ಸಿ ಘಟಕದ ಅಧ್ಯಕ್ಷರಾದ ನೇಮಿರಾಜ್ ಕಿಲ್ಲೂರು, ಭೂ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕರಾದ ಈಶ್ವರ ಭಟ್ ಮಯ್ತಿಲೊಡಿ ,ಜಿಲ್ಲಾ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾದ ಮಹಮ್ಮದ್ ಹನೀಫ್ ಉಜಿರೆ, ಬಂಗಾಡಿ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಎನ್ ಲಕ್ಷಣ ಗೌಡ ,ಹಾಗೂ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ,ನಾಮನಿರ್ದೇಶಿತ ಸದಸ್ಯರು ಹಾಗೂ ಪಕ್ಷದ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.