April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಾನರ್ಪ ಕೋಡಿಯಾಲ್ ಬೈಲ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಕಾನರ್ಪ ಪ್ರೀಮಿಯರ್ ಲೀಗ್ – 2024 ಕ್ರಿಕೇಟ್ ಪಂದ್ಯಾಟ

ಕಡಿರುದ್ಯಾವರ: ಕಾನರ್ಪ ಕೋಡಿಯಾಲ್ ಬೈಲ್ ಶಾಲಾ ಮೈದಾನದಲ್ಲಿ ಗ್ರಾಮದ ಯುವಕರ ಒಗ್ಗೂಡುವಿಕೆಯಲ್ಲಿ ಕಾನರ್ಪ ಪ್ರೀಮಿಯರ್ ಲೀಗ್-2024 ಕ್ರಿಕೇಟ್ ಪಂದ್ಯಾಟವು ನಡೆಯಿತು.


ಈ ಪಂದ್ಯಾಟದ ಉದ್ಘಾಟನೆಯನ್ನು ಹಿರಿಯ ಸದಸ್ಯರಾದ ಉಮೇಶ್ ಪ್ರಗತಿ ನೆರೆವೇರಿಸಿದರು.
ಈ ಸಂದರ್ಭ ಕ್ರೀಡೋತ್ಸವದ ಸಂಚಾಲಕರಾದ ಆದರ್ಶ ಉದ್ದದಪಲಿಕೆ, ಬಾಲಕೃಷ್ಣ ಉದ್ದದಪಲಿಕೆ, ನವೀನ್ ಕಾನರ್ಪ, ರಾಮಚಂದ್ರ ಕಾನರ್ಪ, ಜನಾರ್ಧನ ಕಾನರ್ಪ, ರಾಮಚಂದ್ರ ಹೇಡ್ಯ ಉಪಸ್ಥಿತರಿದ್ದರು.
8 ತಂಡಗಳು ಪಂದ್ಯಾಟದಲ್ಲಿ ಪಾಲ್ಗೊಂಡಿದ್ದವು. ಕ್ರೀಡಾಳುಗಳಿಗೆ ಹಾಗೂ ನೆರೆದ ಸಾರ್ವಜನಿಕರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ನಂತರ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
ಪ್ರಥಮ ಚಂದ್ರಕಾಂತ ಕನಪ್ಪಾಡಿ, ದ್ವಿತೀಯ ಹನೀಫ್, ತೃತೀಯ ವಿನ್ಯಾಸ್ ಹಾಗೂ ಚತುರ್ಥ ಶ್ರೇಯಸ್ ತಂಡ ಬಹುಮಾನ ಪಡೆದುಕೊಂಡರು.


ಈ ಸಂಧರ್ಭ ಉಜಿರೆ ದಿಶಾನ್ ಹೋಟೆಲ್ ಮಾಲಕರಾದ ದಿನೇಶ್ ಪೂಜಾರಿ ಕಾನರ್ಪ, ಭಾರತೀಯ ಭೂ ಸೇನೆ ಯೋಧರಾದ ಕಮಲಾಕ್ಷ ಗೌಡ ಕಾನರ್ಪ, ಚೆನ್ನಕೇಶವ ಕಾನರ್ಪ, ಕಮಲಾಕ್ಷ ಕೋಡಿ, ಶೀನಪ್ಪ ಗೌಡ ಕನಪ್ಪಾಡಿ, ಚಂದ್ರಕಾಂತ ಗೌಡ ಬೆಟ್ಟು, ಉಮೇಶ್ ಕೌಡಂಗೆ, ರಾಜೇಶ್ ಕೆ. ಉಪಸ್ಥಿತರಿದ್ದರು.

Related posts

ಮುಂಡ್ರುಪ್ಪಾಡಿ ಸ. ಕಿ ಪ್ರಾ. ಶಾಲಾ ಪ್ರಾರಂಭೋತ್ಸವ

Suddi Udaya

ಕನ್ಯಾಡಿ ಶ್ರೀ ಗುರುದೇವ ಮಠಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ

Suddi Udaya

ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ನಾಗಬನದಲ್ಲಿ ನಾಗದೇವರಿಗೆ ಕ್ಷೀರಾಭಿಷೇಕ, ವಿಶೇಷ ಪೂಜೆ

Suddi Udaya

ಮದ್ದಡ್ಕ ತಾಯಿ ಪಿಲಿಚಾಮುಂಡಿ ದೈವದ ವರ್ಷಾವಧಿ ನೇಮೋತ್ಸವ

Suddi Udaya

ಬಿಸಿಯೂಟ ಸಿಬ್ಬಂದಿಗಳ ಮುಷ್ಕರದ ಹಿನ್ನಲೆ: ವಿದ್ಯಾರ್ಥಿಗಳಿಗೆ ಮನೆಯಿಂದಲೇ ಊಟದ ವ್ಯವಸ್ಥೆ ಕಲ್ಪಿಸಿದ ಸಮಾಜಸೇವಕ ಸಂತೋಷ್ ನಿನ್ನಿಕಲ್ಲು

Suddi Udaya

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ರಿಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೀಕ್ಷಣೆ: ಅಸಮಪ೯ಕ ಕಾಮಗಾರಿ ನಿರ್ವಹಣೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ

Suddi Udaya
error: Content is protected !!