April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಎಸ್‌ಡಿಪಿಐ ವತಿಯಿಂದ ಗ್ರಾ.ಪಂ. ಉಪಚುನಾವಣೆ ಪೂರ್ವತಯಾರಿ ಸಭೆ

ಬೆಳ್ತಂಗಡಿ : ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಮುಂಬರುವ ಗ್ರಾಮ ಪಂಚಾಯತ್ ಉಪಚುನಾವಣೆ ಪೂರ್ವತಯಾರಿ ಸಭೆಯು ಕ್ಷೇತ್ರಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ ನೇತೃತ್ವದಲ್ಲಿ ಭಾನುವಾರ ಪಕ್ಷದ ಕಚೇರಿಯಲ್ಲಿ ನಡೆಯಿತು.


ಎಸ್‌ಡಿಪಿಐ ಜಿಲ್ಲಾ ಚುನಾವಣೆ ಉಸ್ತುವಾರಿಯಾದ ಬಂಟ್ವಾಳ ಪುರಸಭೆ ಉಪಾಧ್ಯಕ್ಷರಾದ ಮೂನಿಷ್ ಆಲಿ ಹಾಗೂ ಜಿಲ್ಲಾ ಸಮಿತಿ ಸದಸ್ಯರಾದ ನವಾಝ್ ಕಟ್ಟೆ ಆಗಮಿಸಿದ್ದರು.


ಉಜಿರೆ ಹಾಗೂ ಕುವೆಟ್ಟು ಗ್ರಾಮ ಪಂಚಾಯಿತಿಗೆ ನಡೆಯುವ ಉಪಚುನಾವಣೆಯಲ್ಲಿ ಕುವೆಟ್ಟು ಎಸ್‌ಡಿಪಿಐ ಅಭ್ಯರ್ಥಿಗಳ ಪಟ್ಟಿ ಈಗಾಗಲೇ ಅಂತಿಮವಾಗಿದ್ದು, ಉಜಿರೆ ಪಂಚಾಯತ್ ಗೆ ಅಭ್ಯರ್ಥಿ ಇನ್ನೆರಡು ದಿನಗಳಲ್ಲಿ ಅಂತಿಮಗೊಳ್ಳಲಿದ್ದು, ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗುವುದು ಎಂದು ಮೂನಿಷ್ ಆಲಿ ತಿಳಿಸಿದರು.


ಈ ಸಂದರ್ಭದಲ್ಲಿ ಕ್ಷೇತ್ರ ಕಾರ್ಯದರ್ಶಿ ಅಶ್ಫಾಕ್ ಪುಂಜಾಲಕಟ್ಟೆ, ಉಜಿರೆ ಹಾಗೂ ವೇಣೂರು ಬ್ಲಾಕ್ ನಾಯಕರು, ಪಂಚಾಯತ್ ಸದಸ್ಯರು ಪೂರ್ವತಯಾರಿ ಸಭೆಯಲ್ಲಿ ಪಾಲ್ಗೊಂಡಿದ್ದರು.

Related posts

ಸಿನಿಮಾ ರಂಗದ ಸಂಗೀತ ಕ್ಷೇತ್ರದಲ್ಲಿ ಮಿಂಚುತ್ತಿರುವ ಬಾರ್ಯದ ಕಲ್ಲಾಜೆಯ ನಿವಾಸಿ ಯುವ ಸಂಗೀತ ನಿರ್ದೇಶಕ ಪ್ರಸಾದ್ ಕೆ ಶೆಟ್ಟಿ

Suddi Udaya

ವೇಣೂರಿನ ನಡ್ತಿಕಲ್ ನಿವಾಸಿ ಕೆ. ಬಿ. ಅಬ್ದುಲ್ ಖಾದರ್ ನಿಧನ

Suddi Udaya

ಧರ್ಮಸ್ಥಳ: ದ್ವಿಚಕ್ರ ವಾಹನಕ್ಕೆ ಅಪರಿಚಿತ ವಾಹನ ಡಿಕ್ಕಿ

Suddi Udaya

ಶ್ರಿ ಕ್ಷೇತ್ರ ಸೌತಡ್ಕ ಮಹಾಗಣಪತಿ ಕ್ಷೇತ್ರಕ್ಕೆ ಕೃಷಿ ಸಚಿವ ಚೆಲುವರಾಯಸ್ವಾಮಿ ಭೇಟಿ

Suddi Udaya

ಕೊಕ್ಕಡ: ಹೊಸೊಕ್ಲುವಿನಲ್ಲಿ ಬೃಹತ್ ಗಾತ್ರದ ಶಂಖಪಾಲ ಹಾವು ಪತ್ತೆ

Suddi Udaya

ಚಾರ್ಮಾಡಿ ಕುಂಜಿರ ಗುರುಸ್ವಾಮಿ ರವರಿಗೆ ಅಯ್ಯಪ್ಪ ಭಕ್ತಬೃಂದ ಸಮಿತಿಯಿಂದ ತಾಂಬೂಲ ಕಾಣಿಕೆ

Suddi Udaya
error: Content is protected !!