ವೇಣೂರಿನಲ್ಲಿ ನಗರವು ಹಿಂದೆಂದಿಗಿಂತಲೂ ಹೆಚ್ಚಾಗಿ ಕಂಗೊಳಿಸಿತ್ತು. ಪ್ರತೀ ವರ್ಷ ವೇಣೂರು ನಗರದ ಅಂಗಡಿ ಮುಂಗಟ್ಟುಗಳನ್ನು ಕೆಲವೊಂದಷ್ಟು ಜನ ವರ್ತಕರು ಮಾತ್ರ ವಿದ್ಯುದೀಪಾಲಂಕಾರ ಮಾಡುವ ಮೂಲಕ ಶೋಭಿಸುವಂತೆ ಮಾಡುತ್ತಿದರು. ಆದ್ರೆ ಈ ಬಾರಿ ಪಂಚಾಯತ್ ನ ವತಿಯಿಂದ ಉಪಾಧ್ಯಕ್ಷರು ಎಲ್ಲ ವರ್ತಕರು, ಉದ್ಯಮಿಗಳು, ಕಟ್ಟಡ ಮಾಲಿಕರು, ಸರಕಾರಿ ಇಲಾಖೆಗಳನ್ನು ಸಂಪರ್ಕಿಸಿ ನಗರದ ದೀಪಾಲಂಕಾರವನ್ನು ಸ್ವ ಇಚ್ಛೆ ಯಿಂದಲೇ ನಡೆಸಿಕೊಟ್ಟು ನಗರದ ಶೋಭೆಯನ್ನು ಹೆಚ್ಚಿಸಬೇಕೆಂದು ಮನವಿ ಮಾಡಿಕೊಂಡಿದ್ದರು. ಇದನ್ನು ಸಂತೋಷದಿಂದ ದಲೇ ಒಪ್ಪಿ ನಗರವನ್ನು ಸುಂದರವಾಗಿ ಕಂಗೊಳಿಸುವಂತೆ ದೀಪಾಲಂಕಾರ ನಡೆಸಿದ್ದು ಎಲ್ಲರ ಪ್ರಶಂಶೆಗೆ ಕಾರಣವಾಗಿತ್ತು.
ಇದಕ್ಕಾಗಿ ಗ್ರಾಮ ಪಂಚಾಯತ್ ವೇಣೂರು ಕೃತಜ್ಞತೆ ಯನ್ನು ವ್ಯಕ್ತಪಡಿಸಿ ಎಲ್ಲರಿಗೂ ಶುಭ ಹಾರೈಸಿ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಕಳುಸಿತ್ತು