ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗರ್ಡಾಡಿ ವಲಯದ ಮಹಿಳಾ ಜ್ಞಾನವಿಕಾಸದ ವಾರ್ಷಿಕೋತ್ಸವ

ಬೆಳ್ತಂಗಡಿ: ಕಳೆದ ನಲುವತ್ತು ವರ್ಷಗಳ ಹಿಂದಿನ ಅನೇಕ ಕುಟುಂಬದ ಜೀವನ ನಿರ್ವಹಣೆ, ಇಂದಿನ ಆ ಕುಟುಂಬದ ಆರ್ಥಿಕ ಅಭಿವೃದ್ಧಿ ಕಂಡಾಗ ಅಜಗಜಾಂತರ ವ್ಯತ್ಯಾಸ ಕಾಣುತ್ತಿದ್ದು ಅದೆಷ್ಟೋ ಕುಟುಂಬಗಳು ಆರ್ಥಿಕ ಸ್ವಾವಲಂಬಿಯಾಗಿದೆ ಅಲ್ಲದೆ. ಸ್ವ ಉದ್ಯೋಗ, ಸಾಮಾಜಿಕ ಕ್ಷೇತ್ರಗಳಲ್ಲಿ, ರಾಜಕೀಯ ಕ್ಷೇತ್ರದಲ್ಲಿ ಗ್ರಾಮೀಣ ಭಾಗದ ಸಾವಿರಾರು ಕುಟುಂಬಗಳು ಸಾಧನೆ ಮಾಡಿದ್ದಾರೆ ಎಂದರೆ ಇದಕ್ಕೆ ಶ್ರಿಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಾರಣ ಎಂದು ವೇಣೂರು ಠಾಣಾ ಸಬ್ ಇನ್ಸ್ಪೆಕ್ಟರ್ ಒಮನ ಎನ್ ಕೆ ಹೇಳಿದರು.

ಅವರು ಕುಕ್ಕೇಡಿ ಅಂಬೇಡ್ಕರ್ ಭವನದಲ್ಲಿ ಶ್ರಿಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ ಸಿ ಟ್ರಸ್ಟ್ ಗುರುವಾಯನಕೆರೆ ಇದರ ಗರ್ಡಾಡಿ ವಲಯದ ಮಹಿಳಾ ಜ್ಞಾನವಿಕಾಸದ ವಾರ್ಷಿಕೋತ್ಸವ ಮತ್ತು ತಾಲೂಕಿನ ಸ್ವಸಹಾಯ ಸಂಘ ,ಪ್ರಗತಿ ಬಂಧು ತಂಡಕ್ಕೆ 2002 ಹೊಸ ಸದಸ್ಯರ ಸೇರ್ಪಡೆ ಕಾರ್ಯಕ್ರಮ ಉದ್ದಾಟಿಸಿ ಮಾತನಾಡಿ ಆರ್ಥಿಕ ಸಂಪಾದನೆಯ ಒತ್ತಡದ ಮದ್ಯೆ ಕುಟುಂಬ ಸದಸ್ಯರ, ಮಕ್ಕಳ ಕಾಳಜಿಗೆ ಸಮಯ ಇಡುವ ಅಗತ್ಯವಿದೆ ಎಂದರು.

ದ.ಕ ಜಿಲ್ಲಾ ಧ.ಗ್ರಾ ಯೋಜನೆಯ ನಿರ್ದೇಶಕ ದಿನೀಶ್ ಡಿ ಮಾತನಾಡಿ ಬಡವರ ಮೇಲಿನ ಕಾಳಜಿ, ಬಡತನ ನಿರ್ಮೂಲನೆಗೆ ಕಳೆದ 40 ವರ್ಷಗಳ ಹಿಂದೆ ಡಾ ಡಿ ವೀರೇಂದ್ರ ಹೆಗ್ಗಡೆಯವರು ಯೋಜನೆ ಪ್ರಾರಂಭಿಸಿ ದಿನ ಬಳಕೆಯ ವಸ್ತುಗಳನ್ನು ಉಚಿತವಾಗಿ ನೀಡಿದ್ದಲ್ಲದೆ ಕೃಷಿ ಮುಖಾಂತರ ಆರ್ಥಿಕ ಸ್ವಾವಲಂಬನೆ ಆಗಬೇಕು ಎಂದು ತೆಂಗು, ಅಡಿಕೆ ಗಿಡಗಳನ್ನು ನೀಡುತ್ತಿದ್ದರು. ಬಳಿಕ ಪ್ರಗತಿ ಬಂಧು ಸ್ವಸಹಾಯ ಸಂಘ, ಜ್ಞಾನ ವಿಕಾಸ ಕೇಂದ್ರಗಳನ್ನು ಪ್ರಾರಂಭಿಸಿ ಇಂದು ಲಕ್ಷಾಂತರ ಕುಟುಂಬಗಳು ಬೆಳಕನ್ನು ಕಂಡಿದ್ದೇವೆ. ಕುಟುಂಬಕ್ಕೆ ವಿಮಾ ಭದ್ರತೆ, ಆರೋಗ್ಯ ರಕ್ಷಣೆಗೆ ಸಂಪೂರ್ಣ ಸುರಕ್ಷ, ಉಳಿತಾಯ ಮನೋಭಾವನೆ ,ಸ್ವಉದ್ಯೋಗಕ್ಕೆ ಪ್ರೋತ್ಸಾಹ ಇನ್ನಿತರ ಹತ್ತು ಹಲವಾರು ಕಾರ್ಯಕ್ರಮ ಮೂಲಕ ಜನರಿಗೆ ನೆಮ್ಮದಿ ಸಿಗುವಂತೆ ಮಾಡಿದ್ದಾರೆ ಎಂದರು.

ಬೆಳ್ತಂಗಡಿ ಕಾರ್ಯನಿರತ ಪತ್ರಕರ್ತರ ಸಂಘದ ಪ್ರದಾನ ಕಾರ್ಯದರ್ಶಿ ಮನೋಹರ್ ಬಳಂಜ, ವಕೀಲರಾದ ಅಶ್ವಿನಿ ಮೂಡಬಿದ್ರೆ ಮಾತನಾಡಿ ಶುಭಹಾರೈಸಿದರು. ಕುಕ್ಕೇಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಅನಿತಾ ಅಧ್ಯಕ್ಷತೆ ವಹಿಸಿದ್ದರು. ವೇಣೂರು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಅಶೋಕ್ ಪಾಣೂರು ,ಗರ್ಡಾಡಿ ವಲಯ ಪ್ರಗತಿ ಸ್ವಸಹಾಯ ಸಂಘ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ವರದರಾಜ್ ಉಪಸ್ಥಿತರಿದ್ದರು. ಯೋಜನೆಯ ಗುರುವಾಯನಕೆರೆ ವಲಯ ಯೋಜನಾಧಿಕಾರಿ ಅಶೋಕ್ ಬಿ ಸ್ವಾಗತಿಸಿದರು. ವಲಯ ಮೇಲ್ವಿಚಾರಕಿ ಹೇಮಾವತಿ ವಂದಿಸಿದರು. ಜಗನ್ನಾಥ್ ಮತ್ತು ಜ್ಞಾನ ವಿಕಾಸ ತಾಲೂಕು ಸಮನ್ವಯಧಿಕಾರಿ ಸುಗುಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಪ್ರಗತಿ ಬಂದು ಒಕ್ಕೂಟದ ಸದಸ್ಯರನ್ನು ಅಭಿನಂದಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸದಸ್ಯರಿಗೆ ಬಹುಮಾನ ನೀಡಲಾಯಿತು. ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

Related posts

ರಾಜಕೇಸರಿ ಸಂಘಟನೆಯ ನೇತೃತ್ವದಲ್ಲಿ ಬೃಹತ್ ಉಚಿತ ನೇತ್ರ ತಪಾಸಣೆ ಶಿಬಿರ

Suddi Udaya

ಬೆಳ್ತಂಗಡಿ: ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ : ರೂ. 164.75 ಕೋಟಿ ವ್ಯವಹಾರ, ರೂ.72.70 ಲಕ್ಷ ನಿವ್ವಳ ಲಾಭ, ಶೇ.16 ಡಿವಿಡೆಂಟ್ ಘೋಷಣೆ

Suddi Udaya

ಉಜಿರೆ ಶ್ರೀ ಧ.ಮಂ ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ವಿಜ್ಞಾನ ವಿಚಾರ ಸಂಕಿರಣ ಮತ್ತು ವಿಜ್ಞಾನ ನಾಟಕ ಸ್ಪರ್ಧೆ

Suddi Udaya

ಕೇಂದ್ರ ಸಚಿವರಾಗಿ ಮೊದಲ ಬಾರಿಗೆ ಬೆಳ್ತಂಗಡಿಗೆ ಆಗಮಿಸಿದ ವಿ.ಸೋಮಣ್ಣರವರಿಗೆ ಬಿಜೆಪಿಯಿಂದ ಅದ್ದೂರಿ ಸ್ವಾಗತ:

Suddi Udaya

ಬಡಗಕಾರಂದೂರು ಸ.ಉ.ಹಿ.ಪ್ರಾ ಶಾಲೆಯಲ್ಲಿ ಶಾಲಾಭಿವೃದ್ಧಿ-ಮೇಲುಸ್ತುವಾರಿ ಸಮಿತಿಯ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ

Suddi Udaya

ಫೆ.7-10: ಶಿಶಿಲ ಒಟ್ಲ ಶ್ರೀ ಧರ್ಮರಸು ಉಳ್ಳಾಕ್ಲು ಬ್ರಹ್ಮಬೈದೇರುಗಳ ಗರಡಿ ಹಾಗೂ ಪರಿವಾರ ದೈವಗಳ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ

Suddi Udaya
error: Content is protected !!