38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಾಲ್ಕೂರು: ನಿಟ್ಟಡ್ಕದಲ್ಲಿ ಪಂಚಶ್ರೀ ಮಕ್ಕಳ ಕುಣಿತಾ ಭಜನಾ ತಂಡ ರಚನೆ

ನಾಲ್ಕೂರು: ಸನಾತನ ಹಿಂದೂ ಧರ್ಮದ ಸಂಸ್ಕೃತಿ ,ಆಚಾರ ವಿಚಾರ ಅತ್ಯಂತ ಶ್ರೀಮಂತವಾದುದು.ಭಜನಾ ತಂಡಗಳ ರಚನೆಯಿಂದ ಪರಿಸರದಲ್ಲಿ ಸಾತ್ವಿಕ ಭಾವ ಮೂಡುವುದರೊಂದಿಗೆ ಸಮಾಜ ಗಟ್ಟಿಗೊಳ್ಳುತ್ತದೆ ಎಂದು ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಹೇಳಿದರು.

ಅವರು ಅ.27 ರಂದು ನಾಲ್ಕೂರು ಗ್ರಾಮದ ನಿಟ್ಟಡ್ಕದಲ್ಲಿ ಪಂಚಶ್ರೀ ಮಕ್ಕಳ ಕುಣಿತಾ ಭಜನಾ ತಂಡ ರಚನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಮಕ್ಕಳ ಕುಣಿತಾ ಭಜನಾ ತಂಡದ ಉದ್ಘಾಟನೆಯನ್ನು ಪ್ರಗತಿಪರ ಕೃಷಿಕ ರಮನಾಥ ಶೆಟ್ಟಿ ಪಂಬಾಜೆ ಉದ್ಘಾಟಿಸಿ ಮಾತನಾಡಿ ಭಜನೆಯಿಂದ ವಿಭಜನೆಯಾಗದು. ಶ್ರದ್ದೆ ಭಕ್ತಿ ಭಾವದ ಭಜನೆಯಿಂದ ದೆರವರ ಅನುಗ್ರಹ ಪಡೆಯಬಹುದು ಎಂದರು.

ವೇದಿಕೆಯಲ್ಲಿ ಬಳಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ ಕುಲಾಲ್, ಧರ್ಮಸ್ಥಳ ಭಜನಾ ಪರಿಷತ್ ಜಿಲ್ಲಾ ಸಮನ್ವಯಧಿಕಾರಿ ಸಂತೋಷ್ ಪಿ ಅಳಿಯೂರು,ಯಕ್ಷ ಸಮಿತಿ ಅಧ್ಯಕ್ಷ ಸಂಜೀವ ಶೆಟ್ಟಿ, ಪಂಚಶ್ರೀ ಮಹಿಳಾ ಭಜನಾ ಮಂಡಳಿ‌ ಅಧ್ಯಕ್ಷೆ ಪುಷ್ಪಾ ಗೀರೀಶ್,ಪ್ರಮೋದ್ ಪೂಜಾರಿ ಸೂಳಬೆಟ್ಟು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.

ರಾಜ್ಯಮಟ್ಟದ ಭಜನಾ ತರಬೇತುದಾರ ಸಂದೇಶ್ ಮದ್ದಡ್ಕ ಭಜನೆಯ ಕುರಿತು ಮಾಹಿತಿ ನೀಡಿದರು. ಪ್ರಮುಖರಾದ ಸುನೀಲ್ ಶೆಟ್ಟಿ ವಿಲ್ಲು,ಶರತ್ ಅಂಚನ್, ನಂದೇಶ್ ಶೆಟ್ಟಿ, ಸೀತರಾಮ ಪೂಜಾರಿ,ಗೀರೀಶ್ ಬಂಗೇರ ನಿಟ್ಟಡ್ಕ ಹರೀಶ್ ನಂದ್ರಟ್ಟ ಮೊದಲಾದವರು ಉಪಸ್ಥಿತರಿದ್ದರು.

ಸೇವಾ ಪ್ರತಿನಿಥಿ ಸರಸ್ವತಿ ಕಾರ್ಯಕ್ರಮ ನಿರೂಪಿಸಿದರು. ಸಮಾಜ ಸೇವಕ ಅಶೋಕ್ ತೋಟದಪಲ್ಕೆ ಸ್ವಾಗತಿಸಿ, ವಂದಿಸಿದರು.

Related posts

ಟಿಪ್ಪರ್ ಬಾಡಿಗೆ ವಿಚಾರದಲ್ಲಿ ಕೊಲೆ ಯತ್ನ ಆರೋಪ : ಇಬ್ಬರ ವಿರುದ್ಧ ಪ್ರತಿದೂರು ದಾಖಲು

Suddi Udaya

ಉಜಿರೆ: ಸರಳ ಸಂಸ್ಕೃತ ವ್ಯಾಕರಣ ಪುಸ್ತಕ ಬಿಡುಗಡೆ

Suddi Udaya

ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಮಹಾದ್ವಾರ ಲೋಕಾರ್ಪಣೆ: ರೂ 11 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಮಹಾದ್ವಾರ, ಶಾಸಕ ಹರೀಶ್ ಪೂಂಜರವರಿಂದ ಉದ್ಘಾಟನೆ

Suddi Udaya

ಉಜಿರೆ ಶೀತಲ್ ಗಾರ್ಡನ್ ನಲ್ಲಿ ಸುಸಜ್ಜಿತವಾದ ವಿಜಯ ಸಭಾಭವನ ಉದ್ಘಾಟನೆ

Suddi Udaya

ಸಿದ್ದಕಟ್ಟೆ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಮಾಜ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಯುವ ಉದ್ಯಮಿ, ಪ್ರಗತಿಪರ ಕೃಷಿಕ ಕಿರಣ್ ಕುಮಾರ್ ಮಂಜಿಲ ಆಯ್ಕೆ

Suddi Udaya

ಬಿಜೆಪಿ ಶಿಶಿಲ ಶಕ್ತಿಕೇಂದ್ರದ ಕಾರ್ಯಕರ್ತರ ಸಭೆ

Suddi Udaya
error: Content is protected !!