29 C
ಪುತ್ತೂರು, ಬೆಳ್ತಂಗಡಿ
April 10, 2025
Uncategorized

ನಿಟ್ಟಡೆ: ಗೋಳಿಯಂಗಡಿಯಲ್ಲಿ ಬೈಕ್ ಗೆ ಡಿಕ್ಕಿಯೊಡೆದ ಆಟೋ ರಿಕ್ಷಾ

ನಿಟ್ಟಡೆ ಗ್ರಾಮದ ಗೋಳಿಯಂಗಡಿ ಎಂಬಲ್ಲಿ ಆಟೋ ರಿಕ್ಷಾವು ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾದ ಘಟನೆ ನ.7 ರಂದು ವರದಿಯಾಗಿದೆ.

ನಿಟ್ಟಡೆ ನಿವಾಸಿ ನಿರಂಜನ್ ರವರ ದೂರಿನಂತೆ ಗೋಳಿಯಂಗಡಿ ಎಂಬಲ್ಲಿ ಗುರುವಾಯನಕೆರೆ-ಮೂಡಬಿದ್ರೆ ಸಾರ್ವಜನಿಕ ರಸ್ತೆಯಲ್ಲಿ ನೈನಾಡು ಕಡೆಯಿಂದ ಅಟೋ ರಿಕ್ಷಾ ಚಾಲಕ ಅಬ್ದುಲ್‌ ಖಾದರ್‌ ರವರು ದುಡುಕುತನ ಹಾಗೂ ನಿರ್ಲಕ್ಷ ತನದಿಂದ ಚಲಾಯಿಸಿಕೊಂಡು ಗುರುವಾಯನಕೆರೆ- ವೇಣೂರು ಮುಖ್ಯ ರಸ್ತೆಗೆ ಒಮ್ಮೆಲೇ ಚಲಾಯಿಸಿ ಗುರುವಾಯನಕೆರೆ ಕಡೆಯಿಂದ ಬರುತ್ತಿದ್ದ ದ್ವಿಚಕ್ರ ಕ್ಕೆ ರಭಸದಿಂದ ಡಿಕ್ಕಿ ಹೊಡೆದ ಪರಿಣಾಮ ವಾಹನಗಳೆರಡೂ ಜಖಂಗೊಂಡು ದ್ವಿಚಕ್ರ ವಾಹನ ಸವಾರ ಸುದೀಪ್ ರವರು ದ್ವಿಚಕ್ರದೊಂದಿಗೆ ರಸ್ತೆಗೆ ಬಿದ್ದು ಮುಖಕ್ಕೆ ಕೈಕಾಲುಗಳಿಗೆ ರಕ್ತ ಗಾಯ ಹಾಗೂ ಗುದ್ದಿದ ಗಾಯಗಳಾಗಿ ಬಂಟ್ವಾಳ ಸರಕಾರಿ ಆಸ್ಪತೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಫಾಧರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ,. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

Suddi Udaya

ಕೊಡಗು ವಿಶ್ವವಿದ್ಯಾನಿಲಯ ಉಪಕುಲಪತಿ ಡಾ ಅಶೋಕ್ ಆಲೂರ್ ಸಿರಿ ಸಂಸ್ಥೆಗೆ ಭೇಟಿ

Suddi Udaya

ಮೊಗ್ರು ಶ್ರೀರಾಮ್ ಫ್ರೆಂಡ್ಸ್ ಕ್ಲಬ್ (ರಿ.) ಹಾಗೂ ಶ್ರೀರಾಮ್ ಶಿಶುಮಂದಿರ ಅಲೆಕ್ಕಿ – ಮುಗೇರಡ್ಕ ಇದರ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ರಂಗೋಲಿ ಸ್ಪರ್ಧೆ

Suddi Udaya

ಅನೀಶ್‌ ನಿರ್ದೇಶನದ ದಸ್ಕತ್‌ ತುಳು ಸಿನಿಮಾಕ್ಕೆ ಪ್ರಶಸ್ತಿಯ ಗೌರವ

Suddi Udaya

ಮುಂಡೂರು ಪಾವನನಡೆ ಪ್ರತಿಷ್ಠಾನ ಪಾಪಿನಡೆ ಗುತ್ತು : ನಾಲ್ಕು ಗುತ್ತು, ಬರ್ಕೆ, ಗ್ರಾಮಗಳ ಜುಮ್ರ ಜುಮಾದಿ ದೈವಸ್ಥಾನಕ್ಕೆ ಶಿಲಾನ್ಯಾಸ

Suddi Udaya

ದ.ಕ ಜಿಲ್ಲಾ ದ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಸಂಘದ ವಾರ್ಷಿಕ ಮಹಾಸಭೆ: ಸಮಿತಿ ರಚನೆ

Suddi Udaya
error: Content is protected !!