April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಉಜಿರೆ ಶ್ರೀ ಧ.ಮಂ. ಪಿಯು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಶೈಕ್ಷಣಿಕ ಕಾರ್ಯಕ್ರಮ

ಉಜಿರೆ ಶ್ರೀ ಧ.ಮಂ. ಪಿಯು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಶೈಕ್ಷಣಿಕ ಕಾರ್ಯಕ್ರಮವು ನ. 08 ರಂದು ಕಿಲ್ಲೂರು ಶಾಲೆಯಲ್ಲಿ ನಡೆಯಿತು.

ಗ್ರಾಮೀಣ ಆಟಗಳು ಗ್ರಾಮೀಣ ಕ್ರೀಡೆಗಳ ಬಗ್ಗೆ ಒಂದಷ್ಟು ಮಹತ್ವದ ಮಾಹಿತಿಯನ್ನು ನೀಡಿ ಗ್ರಾಮೀಣ ಕ್ರೀಡೆಗಳನ್ನು ನೆನಪು ಮಾಡುವ ಮೂಲಕ ಒಂದಷ್ಟು ಕ್ರೀಡೆಗಳನ್ನು ನಡೆಸಿ, ಇಂದಿನ ಆಟಗಳ ಬಗ್ಗೆ ನೆನಪು ಮಾಡಲಾಯಿತು, ಗ್ರಾಮೀಣ ಕ್ರೀಡೆಗೆ ಆಸಕ್ತಿ ನೀಡುವಂತೆ, ಸಂಪನ್ಮೂಲ ವ್ಯಕ್ತಿಗಳಾದ ಮಹಾವೀರ ಜೈನ್ ಕನ್ನಡ ಭಾಷಾ ಉಪನ್ಯಾಸಕರು ಶ್ರೀ. ಧ.ಮo ಪ.ಪೂ ಕಾಲೇಜು ಉಜಿರೆ ಇವರು ಶಿಬಿರಾರ್ಥಿಗಳಿಗೆ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೀಕ್ಷಿತ್ ಕೆ ಕಲ್ಬೆಟ್ಟು ತಾಲೂಕು ಸಂಯೋಜಕರು, ನೆಹರು ಯುವ ಕೇಂದ್ರ ಮಂಗಳೂರು.
ರಾಷ್ಟ್ರೀಯ ಸೇವಾ ಯೋಜನೆಯ ಕೆಲಸ ಕಾರ್ಯಗಳಲ್ಲಿ ಒಳ್ಳೆಯ ಅಂಶಗಳನ್ನು ತೆಗೆದುಕೊಂಡು ತನ್ನನ್ನು ತಾನು ತೊಡಗಿಸಿಕೊಂಡು ಸಮಯ ಪಾಲನೆ ಹಾಗೂ ಶಿಸ್ತು ವೈಯಕ್ತಿಕ ವೃತ್ತಿ ಜೀವನ ಜೊತೆಗೆ ಸ್ವಲ್ಪ ಸಮಯವನ್ನು ರಾಷ್ಟ್ರೀಯ ಕಾರ್ಯದಲ್ಲಿ ಕೂಡ ಕೈಜೋಡಿಸುವoತೆ ಶಿಬಿರಾರ್ಥಿಗಳಿಗೆ ತಿಳಿಸಿದರು.

ಗ್ರಾಮೀಣ ಕ್ರೀಡಾಕೂಟದ ಭಿತ್ತಿಪತ್ರಿಕೆ ಅನಾವರಣ ಮೋಹನ ಕಿಲ್ಲೂರು ಇವರು ನೆರವೇರಿಸಿದರು. ಕಿಲ್ಲೂರು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಜಯಶ್ರೀ , ಕಿಲ್ಲೂರು ಎಸ್ ಡಿ ಎಂ ಸಿ ಸದಸ್ಯರಾದ ಗಿರೀಶ್ ಗೌಡ ಜಾರಿಗೆ, ಚಂದ್ರಶೇಖರ ಮಾಲೂರು,
ಯೋಜನಾಧಿಕಾರಿಗಳಾದ ಡಾ. ಪ್ರಸನ್ನಕುಮಾರ್ ಐತಾಲ್ ಮತ್ತು ಸಹಯೋಜನಾಧಿಕಾರಿಗಳಾದ ಶ್ರೀಮತಿ ಪದ್ಮಶ್ರೀ ರಕ್ಷಿತ್ ಉಪಸ್ಥಿತರಿದ್ದರು.

Related posts

ಉಪ್ಪಾರಪಳಿಕೆ ವಿಶ್ವ ಜ್ಯೋತಿ ಜ್ಞಾನವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಕ್ರಮ

Suddi Udaya

ಜೂನ್ 7: ರಾಷ್ಟ್ರೀಯ ತುಳು ಗುಡಿಗಾರ ಸಂಘ ದಕ್ಷಿಣ ಕನ್ನಡ-ಉಡುಪಿ ಇವರ ನೇತೃತ್ವದಲ್ಲಿ ಬೃಹತ್ ರಕ್ತದಾನ ಶಿಬಿರ

Suddi Udaya

ತಾರತಮ್ಯವಿಲ್ಲದೆ ಎಲ್ಲಾ ಅರ್ಹರಿಗೂ ಸರಕಾರದ ಸೌಲಭ್ಯ ತಲುಪಬೇಕು ಎಂಬುದು ಕೇಂದ್ರದ ಬಜೆಟ್‌ನಲ್ಲಿರುವುದು ಸುಸ್ಪಷ್ಟ: ಪ್ರತಾಪಸಿಂಹ ನಾಯಕ್

Suddi Udaya

ಎಸ್ ಎಸ್ ಎಲ್ ಸಿ ಫಲಿತಾಂಶ : ಉಜಿರೆ ಎಸ್ ಡಿ ಎಂ ಅನುದಾನಿತ ಸೆಕೆಂಡರಿ ಶಾಲೆ ಶೇ.99.34 ಫಲಿತಾಂಶ

Suddi Udaya

ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಅ.ಹಿ. ಪ್ರಾ. ಶಾಲೆಗೆ ಗಡಿಯಾರ ಕೊಡುಗೆ

Suddi Udaya

ಬೆಳ್ತಂಗಡಿ ಬಿರುವೆರ್ ಕುಡ್ಲ ಸಂಘದ 49 ಹಾಗೂ 50ನೇ ಸೇವಾ ಯೋಜನೆ ದೇಣಿಗೆ ಹಸ್ತಾಂತರ

Suddi Udaya
error: Content is protected !!