
ಧಮ೯ಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನ.16 ರ ವರೆಗೆ ಮೊಕ್ಕಾಂ ಹೂಡಲಿರುವ ಕಂಚಿ ಕಾಮಕೋಟಿ ಪೀಠಾಧಿಪತಿ ಪೂಜ್ಯ ಶಂಕರ ವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮೀಜಿಯವರು ನ.09 ಶನಿವಾರ ಸಂಜೆ
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪುರ ಪ್ರವೇಶ ಮಾಡಿದರು.

ಶ್ರೀ ಕ್ಷೇತ್ರಕ್ಕೆ ಆಗಮಿಸಿದ ಸ್ವಾಮೀಜಿ ಅವರನ್ನು
ಧರ್ಮಸ್ಥಳದ ಮಹಾದ್ವಾರ ಬಳಿ ಶ್ರೀ ಕ್ಷೇತ್ರದ ವತಿಯಿಂದ ಧಮಾ೯ಧಿಕಾರಿ ಪೂಜ್ಯ ಡಾ. ವೀರೇಂದ್ರ ಹೆಗ್ಗಡೆ ಅವರು ಗೌರವಾಪ೯ಣೆ ಸಲ್ಲಿಸಿ ಬರಮಾಡಿಕೊಂಡರು.


ಡಿ.ಹಷೇ೯ಂದ್ರಕುಮಾರ್, ವೀರೂ ಶೆಟ್ಟಿ, ಡಾ.ಸತೀಶ್ಚಂದ್ರ ಸುಯ೯ಗುತ್ತು, ಪೂರಣ್ ವಮ೯, ಲಕ್ಷ್ಮೀನಾರಾಯಣ ರಾವ್, ಸೀತಾರಾಮ ತೋಳ್ಪಾಡಿತ್ತಾಯ, ಕ್ಷೇತ್ರದ ಸಿಬಂದಿಗಳು, ಗಣ್ಯರು, ಊರಿನ ನಾಗರಿಕರು ಉಪಸ್ಥಿತರಿದ್ದರು.

ಅಲ್ಲಿಂದ ಪೂರ್ಣಕುಂಭದೊಂದಿಗೆ
ಭವ್ಯ ಮೆರವಣಿಗೆಯಲ್ಲಿ ಕ್ಷೇತ್ರಕ್ಕೆ ಸ್ವಾಗತಿಸಲಾಯಿತು.











