ಗುರುವಾಯನಕೆರೆ: ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಹಾಯಕದೊಂದಿಗೆ ಹಾಗೂ ಬೆಳ್ತಂಗಡಿ ತಾಲೂಕಿನ ಮಾಜಿ ಸೈನಿಕರ ಸಂಘದ ಆಶ್ರಯದಲ್ಲಿ ಸ್ವಚ್ಛತಾ ಅಭಿಯಾನವು ನಡೆಯಿತು.
ಬೆಳ್ತಂಗಡಿ ಮುಖ್ಯ ಪೇಟೆಯ ರಾಜಮಾರ್ಗದ ಎರಡು ಇಕ್ಕೆಲಗಳಲ್ಲಿ ಸೈನಿಕರೊಡಗೂಡಿ ಎಕ್ಸೆಲ್ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯವನ್ನು ಆರಂಭಿಸಿದರು. ಇದೊಂದು ಕೇವಲ ಅಭಿಯಾನ ಮಾತ್ರವಲ್ಲದೆ ಜಾಗೃತಿ ಕಾರ್ಯಕ್ರಮವೂ ಆಗಿತ್ತು. ಅಯ್ಯಪ್ಪ ಭಜನಾ ಮಂದಿರದ ಎದುರುಗಡೆಯಿಂದ ಮೊದಲುಗೊಂಡು ತಾಲೂಕು ಆಸ್ಪತ್ರೆಯ ತನಕ ಸ್ವಚ್ಛತೆಯನ್ನು ನಡೆಸಿದರು. ಬಿರು ಬಿಸಿಲಿನಲ್ಲಿಯೂ ಎಕ್ಸೆಲ್ ವಿದ್ಯಾರ್ಥಿಗಳಲ್ಲಿನ ಸಾಮಾಜಿಕ ಕಾಳಜಿಯನ್ನು ಹಾಗೂ ಅಭಿಯಾನದಲ್ಲಿನ ಉತ್ಸಾಹದಾಯಕ ಪಾಲ್ಗೊಳ್ಳುವಿಕೆಯನ್ನು ಕಂಡು ಸಾರ್ವಜನಿಕರಿಂದ ಹೆಚ್ಚಿನ ಪ್ರಶಂಸೆಗೆ ಪಾತ್ರರಾದರು.
ಮಾಜಿ ಸೈನಿಕರು ಮಕ್ಕಳಿಗೆ ತಂಪು ಪಾನೀಯ ಮತ್ತು ಹಣ್ಣು ಹಂಪಲುಗಳನ್ನು ನೀಡಿದರು. ಬೆಳ್ತಂಗಡಿಯ ಪಟ್ಟಣ ಪಂಚಾಯತ್ ವತಿಯಿಂದ ಕಸ ವಿಲೇವಾರಿಗಾಗಿ ತ್ಯಾಜ್ಯ ಸಂಗ್ರಹ ವಾಹನದ ವ್ಯವಸ್ಥೆಯನ್ನು ಮಾಡಲಾಗಿತ್ತು.