25.7 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳಾಲು ಅನಂತೇಶ್ವರ ಫ್ರೆಂಡ್ಸ್ ಅನಂತೋಡಿ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಕೆಸರುಗದ್ದೆ ಕ್ರೀಡಾಕೂಟ

ಬೆಳಾಲು : ಅನಂತೇಶ್ವರ ಫ್ರೆಂಡ್ಸ್ ಅನಂತೋಡಿ ಬೆಳಾಲು ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ 14 ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟವು ನ.10 ರಂದು ಅನಂತೋಡಿಯ ಗದ್ದೆಯಲ್ಲಿ ಜರಗಿತು.

ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿ ಭಜನೆಯ ಮೆರವಣಿಗೆಯ ಮೂಲಕ ಸಾಗಿ ವೇದಿಕೆಯಲ್ಲಿ ದೀಪ ಪ್ರಜ್ವಲನೆ ಮೂಲಕ ಶ್ರೀ ಅನಂತಪದ್ಮನಾಭ ದೇವಸ್ಥಾನ ಅನಂತೋಡಿ ಇದರ ದೇವಳದ ಅರ್ಚಕರಾದ ಸಂಪತ್ ಕುಮಾರ್ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ವೇದಿಕೆಯಲ್ಲಿ ಅನಂತೇಶ್ವರ ಫ್ರೆಂಡ್ಸ್ ಇದರ ಗೌರವಾಧ್ಯಕ್ಷ ಸುಮಿತ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಲಿಂಗಪ್ಪ ಪೂಜಾರಿ ಮಾಗಣೆಗುತ್ತು ಬನಂದೂರು, ಹೇಮಾ ಮೋಹನ್ ಅನರ್ಘ್ಯ ವಚ್ಛ, ಸುಂದರ ನೀರಕಟ್ಟೆ, ಶ್ರೀ ಅನಂತಪದ್ಮನಾಭ ದೇವಸ್ಥಾನ ಅನಂತೋಡಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಗೌಡ , ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ , ಬೆಳಾಲು ಅನಂತೇಶ್ವರ ಫ್ರೆಂಡ್ಸ್ ಅಧ್ಯಕ್ಷ ವಿಶ್ವನಾಥ ಪೂಜಾರಿ ಬಾಯ್ತರಡ್ದ, ಕಾರ್ಯದರ್ಶಿ ಪದ್ಮನಾಭ ಅನಂತೋಡಿ, ವಿಘ್ನೇಶ್ ಅನಂತೋಡಿ ಉಪಸ್ಥಿತರಿದ್ದರು.

ಕಿರಣ್ ಸುವರ್ಣ ಸ್ವಾಗತಿಸಿ, ನವನೀತ್ ಏರ್ದೊಟ್ಟು ಧನ್ಯವಾದವಿತ್ತರು, ಗಿರೀಶ್ ಮಂಜೊತ್ತು ಇವರು ಕಾರ್ಯಕ್ರಮ ನಿರೂಪಿಸಿದರು.

Related posts

ಧರ್ಮಸ್ಥಳದ ವಿರುದ್ಧ ಬುರುಡೆ ಷಡ್ಯಂತ್ರ ಪ್ರಕರಣ: ಬೆಳ್ತಂಗಡಿ ಕೋರ್ಟ್ ಗೆ ಆಗಮಿಸಿದ ಖ್ಯಾತ ವಕೀಲ ಸಿ.ವಿ.ನಾಗೇಶ್

Suddi Udaya

ಭಾರತ್ ಕೋ ಆಪರೇಟಿವ್ ಬ್ಯಾಂಕ್ ಮುಂಬೈ ಲಿಮಿಟೆಡ್ ಇದರ ನೂತನ ನಿರ್ದೇಶಕರಾಗಿ ಮುಂಬಯಿ ಉದ್ಯಮಿ ನಾರಾಯಣ ಸುವರ್ಣ ಮರೋಡಿ ಆಯ್ಕೆ

Suddi Udaya

ಬಡವರಿಗೆ ವಸತಿ, ನಿವೇಶನ ಕಲ್ಪಿಸಲು ವಿಫಲ: ಲಾಯಿಲ ಗ್ರಾ.ಪಂ. ವಿರುದ್ಧ ಗ್ರಾಮಸ್ಥರ ಆಕ್ರೋಶ

Suddi Udaya

ಅಳದಂಗಡಿ ಸೊಸೈಟಿಯಿಂದ ಸಂಘ ಸಂಸ್ಥೆಗಳಿಗೆ ದೇಣಿಗೆ ಹಸ್ತಾಂತರ

Suddi Udaya

ಕರಾಯ: ಡಾಕ್ಯೂಮೆಂಟ್ ರೈಟರ್‌ಗೆ ಜೀವ ಬೆದರಿಕೆ : ಪ್ರಕರಣ ದಾಖಲು

Suddi Udaya

ಶ್ರೀ ನಾಳ ಕ್ಷೇತ್ರದಲ್ಲಿ ನವರಾತ್ರಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ

Suddi Udaya
error: Content is protected !!