April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬಂದಾರು : ಪೆರ್ಲ – ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಮಹಿಳಾ ಸಮಿತಿಯ ವತಿಯಿಂದ ಮಹಿಳಾ ಸಿರಿ ಕಾರ್ಯಕ್ರಮ

ಬಂದಾರು : ಬಂದಾರು ಗ್ರಾಮ ಪೆರ್ಲ -ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ನ. 11 ರಂದು ಶ್ರೀ ಕ್ಷೇತ್ರ ವಠಾರದಲ್ಲಿ ಮಹಿಳಾ ಸಮಿತಿ ವತಿಯಿಂದ ಮಹಿಳಾ ಸೇವಾ ಸಿರಿ ಕಾರ್ಯಕ್ರಮ ನಡೆಯಿತು.


ಶ್ರೀ ಕ್ಷೇತ್ರದಲ್ಲಿ ಜನವರಿ 07 ರಿಂದ 12 ರ ವರೆಗೆ ನಡೆಯುವ ಬ್ರಹ್ಮಕಲಶೋತ್ಸವ ತಯಾರಿ ಬಗ್ಗೆ ದಿಕ್ಸೂಚಿ ಭಾಷಣಗೈದ ಶ್ರೀ ಕ್ಷೇತ್ರ ಧರ್ಮಸ್ಥಳ ಕೃಷಿ ವಿಭಾಗ ಮುಖ್ಯಸ್ಥರಾದ ಬಜಗುತ್ತು ಬಾಲಕೃಷ್ಣ ಪೂಜಾರಿಯವರು ಮಾತನಾಡುತ್ತ ಬ್ರಹ್ಮಕಲಶೋತ್ಸವದ ತಯಾರಿಯಲ್ಲಿ ಮಹಿಳಾ ಸಮಿತಿಯ ಎಲ್ಲಾ ಸದಸ್ಯರು ಸಂಘಟನಾತ್ಮಕವಾಗಿ ತೊಡಗಿಸಿಕೊಂಡು ದೇವರ ಪುಣ್ಯ ದ ಕಾರ್ಯದಲ್ಲಿ ಭಾಗಿಯಾಗುವುದು ಮುಖ್ಯ. ದೇವಸ್ಥಾನದಲ್ಲಿ ಇನ್ನೂ ಅನೇಕ ಕಾರ್ಯಗಳು ನಡೆಯಬೇಕಿದ್ದು ಇದರಲ್ಲಿ ಮಹಿಳೆಯರ ಜವಾಬ್ದಾರಿಯು ಪ್ರಮುಖವಾಗಿರುತ್ತದೆ. ಅಡಗಿಸಿಕೊಳ್ಳಬೇಡಿ ತೊಡಗಿಸಿಕೊಳ್ಳಿ ಎಂದು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.


ಉಜಿರೆ ಸಂಧ್ಯಾ ಟ್ರೇಡರ್ಸ್ ನ ಉದ್ಯಮಿಗಳಾದ ಅರ್ಚನಾ ರಾಜೇಶ್ ಪೈ ಯವರು ಮಾತನಾಡುತ್ತ ಒಬ್ಬ ಮಹಿಳೆಯಿಂದ ಎಲ್ಲಾ ಕೆಲಸವೂ ಸಾಧ್ಯ. ನಾಯಕತ್ವ ವಹಿಸುವಲ್ಲಿ ಮಹಿಳೆಯರು ಮಂಚೂಣಿಯಲ್ಲಿರುತ್ತಾರೆ. ನಾಯಕತ್ವವನ್ನು ಸರಿಯಾಗಿ ನಿಭಾಯಿಸಿಕೊಂಡು ಹೋದಲ್ಲಿ ಯಶಸ್ಸು ಖಂಡಿತ ಸಾಧ್ಯ. ದೇವಸ್ಥಾನ ಅಭಿವೃದ್ಧಿಯಾದಲ್ಲಿ ಊರು, ಮನೆ ಅಭಿವೃದ್ಧಿಯಾಗುತ್ತದೆ. ಎಲ್ಲರ ಸೇವೆ ಸಹಕಾರ ಅಮೂಲ್ಯವಾಗಿರುತ್ತದೆ. ಎಲ್ಲರೂ ಸಮಾನ ಮನಸ್ಕರಾಗಿ ದೇವರ ಸೇವೆಯಲ್ಲಿ ಪಾಲ್ಗೊಳ್ಳಿ ಎಂದು ಮಾರ್ಗದರ್ಶನ ನೀಡಿದರು.


ಸಭಾಧ್ಯಕ್ಷತೆಯನ್ನು ಮಹಿಳಾ ಸಮಿತಿಯ ಅಧ್ಯಕ್ಷೆ ಶ್ವೇತಾ ಮಾತನಾಡಿ, ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದ್ದು ಸಹಕರಿಸಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ರಮೇಶ್ ಗೌಡ ಅಡ್ಡಾರು, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಮಹಾಬಲ ಗೌಡ ನಾಗಂದೋಡಿ ಬ್ರಹ್ಮಕಲಶೋತ್ಸವ ಸಮಿತಿಯ ಮಹಿಳಾ ಸಂಚಾಲಕರಾದ ಯಮುನಾ ಕುರುಡಂಗೆ, ಮಹಿಳಾ ಸಮಿತಿಯ ಕಾರ್ಯದರ್ಶಿ ಮೌನಶ್ರೀ, ಬ್ರಹ್ಮಕಲಶೋತ್ಸವ ಹಾಗೂ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರುಗಳು ಉಪಸ್ಥಿತರಿದ್ದರು.

ಶ್ರೇಯ ಕೆ.ಜೆ ಯವರು ಕಾರ್ಯಕ್ರಮ ನಿರೂಪಿಸಿ, ರಾಜೀವಿ ತಾರಕೆರೆ ಸ್ವಾಗತಿಸಿ, ಯಶೋಧ ಅಡ್ಡಾರು ವಂದಿಸಿದರು.

Related posts

ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ ಪ್ರಭು ಸೇವಾ ನಿವೃತ್ತಿ

Suddi Udaya

ಮಾಜಿ ಸಚಿವ ಗಂಗಾಧರ ಗೌಡರವರ ಕಚೇರಿಯಲ್ಲಿ ಇಂದಿರಾ ಗಾಂಧಿ ಯವರ ಪುಣ್ಯಸ್ಮರಣೆ ಆಚರಣೆ

Suddi Udaya

ಶಾಸಕ ಹರೀಶ್ ಪೂಂಜಾ ವಿರುದ್ಧದ ಕೇಸ್ ಗೆ ಹೈಕೋರ್ಟ್ ತಡೆ

Suddi Udaya

ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ ಪ್ರಾಣಪ್ರತಿಷ್ಠೆ, ವೀರಕೇಸರಿ ಹಿಂದೂಪುರ ಸಂಘಟನೆಯಿಂದ ಬಳಂಜ ಪೇಟೆಯಲ್ಲಿ ಶ್ರೀರಾಮದೇವರ ಶೃಂಗಾರ ಮಂಟಪ

Suddi Udaya

ಸಾರ್ವಜನಿಕ ಶ್ರೀ ಗಣೇಶೋತ್ಸವ: ನೃತ್ಯ ಸ್ಪರ್ಧೆಯಲ್ಲಿ ಬೀಟ್ ರಾಕರ್ಸ್ ತಂಡಕ್ಕೆ ಹಲವು ಪ್ರಶಸ್ತಿ

Suddi Udaya

ಶಿಶಿಲ: ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಪದ್ಮಪ್ಪ ಆಯ್ಕೆ

Suddi Udaya
error: Content is protected !!