37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಬೆಳ್ತಂಗಡಿ: ವಾಣಿ ಕಾಲೇಜಿನಲ್ಲಿ ಪ್ರೆಸೆಂಟೇಶನ್ ಸ್ಕಿಲ್ಸ್ ಕಾರ್ಯಕ್ರಮ

ಬೆಳ್ತಂಗಡಿ: ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡು ಉತ್ತಮ ಮಾತುಕತೆ ನಡೆಸುವ ಕೌಶಲ್ಯವನ್ನು ರೂಢಿಸಿಕೊಳ್ಳಬೇಕು ಎಂದು ಮೂಡಬಿದ್ರೆ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥರಾದ ವಿಕ್ರಮ್ ನಾಯಕ್. ಕೆ ಹೇಳಿದರು.


ಅವರು ವಾಣಿ ಪದವಿಪೂರ್ವ ಕಾಲೇಜಿನ ಸಾಹಿತ್ಯ ಸಂಘದ ವತಿಯಿಂದ ಆಯ್ದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಪ್ರೆಸೆಂಟೇಶನ್ ಸ್ಕಿಲ್ಸ್ ವಿಷಯದ ಕುರಿತು ಮಾತನಾಡುತ್ತಾ, ವಿದ್ಯಾರ್ಥಿಗಳು ಎಲ್ಲಾ ವಿಷಯದಲ್ಲಿ ಅಪಾರ ಜ್ಞಾನವನ್ನು ಗಳಿಸಿಕೊಂಡು ಅತ್ಯುತ್ತಮ ರೀತಿಯಲ್ಲಿ ವ್ಯಕ್ತಪಡಿಸುವ ಸಾಮರ್ಥ್ಯವನ್ನು ಗಳಿಸಿಕೊಳ್ಳಬೇಕು ಎಂದರು.


ಕಾಲೇಜಿನ ಪ್ರಾಂಶುಪಾಲರಾದ ಯದುಪತಿ ಗೌಡ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲ ವಿಷ್ಣು ಪ್ರಕಾಶ್ ಎಂ, ಸಾಹಿತ್ಯ ಸಂಘದ ಸಂಯೋಜಕ ವಿನೀಶ್ ಉಪಸ್ಥಿತರಿದ್ದರು.


ಸಾಹಿತ್ಯ ಸಂಘದ ಸಂಯೋಜಕಿ ಶ್ರೀಮತಿ ಸಿಧ್ಧಿ. ಆರ್ ಪ್ರಭು ಸ್ವಾಗತಿಸಿದರು. ಶಿವಾನಿ ಧನ್ಯವಾದವಿತ್ತರು. ವಿಭಾ ಕಾರ್ಯಕ್ರಮ ನಿರೂಪಿಸಿದರು.

Related posts

ಬಂದಾರು: ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಸೇವಾ ಟ್ರಸ್ಟ್ ಮತ್ತು ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಪೆಲತ್ತಿಮಾರು ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವ, ಭಜನೆ ಹಾಗೂ ವಿವಿಧ ಆಟೋಟ ಸ್ಪರ್ಧೆ

Suddi Udaya

ಮದ್ದಡ್ಕ ಪೇಟೆಯಲ್ಲಿ 2 ತಿಂಗಳಿಂದ ಉರಿಯುತ್ತಿಲ್ಲ ದಾರಿ ದೀಪ: ದುರಸ್ತಿಗೊಳಿಸುವಂತೆ ಸ್ಥಳೀಯರ ಒತ್ತಾಯ

Suddi Udaya

ಬೆಳ್ತಂಗಡಿ ಶ್ರೀ ಧ. ಮಂ.ಆಂ.ಮಾ. ಶಾಲೆಯಲ್ಲಿ ಆಟಿದ ಕೂಟ

Suddi Udaya

ವಿ.ಹಿಂ.ಪ. ಮತ್ತು ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಇಂದಬೆಟ್ಟು-ನಾವೂರು ವತಿಯಿಂದ ವಿಜಯರತ್ನ ಪ್ರಶಸ್ತಿ ಪುರಸ್ಕೃತ ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರಿಗೆ ಗೌರವಾರ್ಪಣೆ

Suddi Udaya

ಮಡಂತ್ಯಾರು: ಚಾಲಕನ ನಿಯಂತ್ರಣ ತಪ್ಪಿ ಲಾರಿ ವಿದ್ಯುತ್ ಕಂಬಕ್ಕೆ ಡಿಕ್ಕಿ

Suddi Udaya

ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ರಂಜನ್ ಜಿ ಗೌಡ, ಹಾಗೂ ಕಾರ್ಯದರ್ಶಿಯಾಗಿ ಅಭಿನಂದನ್ ಹರೀಶ್ ಕುಮಾರ್ ನೇಮಕ

Suddi Udaya
error: Content is protected !!