24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಶಿಶಿಲ ಆರೋಗ್ಯ ಉಪಕೇಂದ್ರದ ಆವರಣದಲ್ಲಿ ಶಿಶಿಲ-ಅರಸಿನಮಕ್ಕಿ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರಿಂದ ಸ್ವಚ್ಚತಾ ಕಾರ್ಯ

ಶಿಶಿಲ: ಇಲ್ಲಿಯ ಆರೋಗ್ಯ ಉಪಕೇಂದ್ರದ ಆವರಣದಲ್ಲಿ ಶಿಶಿಲ ಅರಸಿನಮಕ್ಕಿ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರಿಂದ ಸ್ವಚ್ಚತಾ ಕಾರ್ಯವು ನ.11 ರಂದು ನಡೆಸಲಾಯಿತು.

ಶ್ರಮದಾನದ ಸಂದರ್ಭದಲ್ಲಿ ಭೇಟಿ ನೀಡಿದ ಬೆಂಗಳೂರಿನ ನಿವೃತ್ತ ಬ್ಯಾಂಕ್ ಉದ್ಯೋಗಿ ಪದ್ಮನಾಭ ಗೋಖಲೆ ತಂಡದ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ತನ್ನಿಂದಾದ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.


ಬಳಿಕ ಶಿಶಿಲ ಗ್ರಾಮಕ್ಕೆ ಬಂದಿದ್ದ ತಾಲ್ಲೂಕು ಯೋಜನಾಧಿಕಾರಿ ಸುರೇಂದ್ರ ಶ್ರಮದಾನದ ಸ್ಥಳಕ್ಕೆ ಭೇಟಿ ನೀಡಿ ಘಟಕದ ಸೇವಾ ಚಟುವಟಿಕೆಗಳನ್ನು ಗಮನಿಸುತ್ತಿದ್ದು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಸ್ವಯಂಸೇವಕರಾದ ಉಮೇಶ್ ಗೌಡ ದೇನೋಡಿ, ಶೀನಪ್ಪ ನಾಯ್ಕ್ ಮುಚ್ಚಿರಡ್ಕ, ಕೃಷ್ಣಪ್ಪ ಗೌಡ ಮುಚ್ಚಿರಡ್ಕ,
ಅವಿನಾಶ್ ಭಿಡೆ, ರಾಧಾಕೃಷ್ಣ ಗುತ್ತು, ರಶ್ಮಿತಾ, ಕಿರಣ್ ಸಂಕೇಶ, ರಮೇಶ ಬೈರಕಟ್ಟ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದರು.


ಆಶಾ ಕಾರ್ಯಕರ್ತೆಯರಾದ ಶ್ರೀಮತಿ ರೂಪಾ ಹಾಗೂ ಶ್ರೀಮತಿ ಭಾಗೀರಥಿ, ಶ್ರೀಮತಿ ರಮಾ ಗೋಖಲೆ ಹಾಗೂ ಮನೆಯವರು ಸಹಕರಿಸಿದರು..

Related posts

ಮೂರು ಜನ ವಿಶೇಷ ಚೇತನರನ್ನು ಒಳಗೊಂಡ ಬಡ ಕುಟುಂಬಕ್ಕೆ ಧರ್ಮಸ್ಥಳ ಗ್ರಾಮ ಪಂಚಾಯತ್ ನಿಂದ ನೆರವು

Suddi Udaya

ಉಜಿರೆ: ಎಸ್.ಡಿ.ಎಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಘಟಿಕೋತ್ಸವ ಹಾಗೂ ವಿದ್ಯಾರ್ಥಿನಿಯರ ಸ್ವಾಗತ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಡಾ|| ವೀರೇoದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ವರ್ಧoತಿ ಪ್ರಯುಕ್ತ ಗೌರವಾರ್ಪಣೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ಬೆಳಾಲಿನ ಪ್ರಗತಿಪರ ಕೃಷಿಕ ಶಿವಪ್ಪಗೌಡರಿಗೆ ಸೆಲ್ಯೂಟ್ ದ ಸೈಲೆಂಟ್ ಸ್ಟಾರ್ ಅವಾರ್ಡ್

Suddi Udaya

ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ: ವಾರೀಸುದಾರರ ಪತ್ತೆಗೆ ಮನವಿ

Suddi Udaya

ಶ್ರೀ ಧ.ಮಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

Suddi Udaya
error: Content is protected !!