24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಇಳಂತಿಲ ಗ್ರಾಮ ಪಂಚಾಯತ್ ಉಪ ಚುನಾವಣೆ: ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಯಾಗಿ ಕುಸುಮ ಈಶ್ವರ ಗೌಡ ಕಣಕ್ಕೆ

ಇಳಂತಿಲ : ಇಳಂತಿಲ ಗ್ರಾಮ ಪಂಚಾಯತ್ ನ 1ನೇ ವಾರ್ಡ್ ನ ಬಿ ಜೆ ಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯೆ ರೇಖಾ ರವರ ಅಕಾಲಿಕ ಮರಣದಿಂದ ತೆರವಾದ ಸ್ಥಾನಕ್ಕೆ ನವಂಬರ್ 23 ರಂದು ನಡೆಯಲಿರುವ ಉಪ ಚುನಾವಣೆಗೆ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಯಾಗಿ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಈಶ್ವರ ಗೌಡ ರವರ ಪತ್ನಿ ಕುಸುಮ ಈಶ್ವರ ಗೌಡ ಇಂದು ನಾಮಪತ್ರ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯ ಈಶ್ವರ ಭಟ್, ಮಾಹಿತೋಡಿ, ಪುತ್ತೂರು ವಿಟ್ಲ ಬ್ಲಾಕ್ ಕಾಂಗ್ರೇಸ್ ಮಾಜಿ ಅಧ್ಯಕ್ಷರಾದ ಡಾ. ರಾಜಾರಾಮ್ ಕೆ ಬಿ, ಉಪ ಚುನಾವಣೆಯ ಪಕ್ಷದ ಉಸ್ತುವಾರಿಗಳಾದ ಜಯವಿಕ್ರಮ್ ಕಲ್ಲಾಪು, ಸಹ ಉಸ್ತುವಾರಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ, ಹಾಲಿ ಸದಸ್ಯ ಯು ಕೆ ಇಸುಬು, ಹಿರಿಯರಾದ ಜಿನ್ನಪ್ಪ ಪೂಜಾರಿ, ಆಟಾಲು,ಮಾಜಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಈಶ್ವರ ಗೌಡ, ಬಾರಿಕೆ, ಸವಿತಾ ಮೋಹನ ನಾಯ್ಕ, ಕಾಂಗ್ರೇಸ್ ಗ್ರಾಮ ಸಮಿತಿ ಅಧ್ಯಕ್ಷ ಜನಾರ್ಧನ ಪೂಜಾರಿ, ನೂಜ, ಮಾಜಿ ಅಧ್ಯಕ್ಷ ನಾರಾಯಣ ಗೌಡ, ಇಳಂತಿಲ ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷ ಅಬ್ದುಲ್ ಲತೀಫ್, ಕನ್ಯಾರಕೋಡಿ, ಡೋನ್ ಬೋಸ್ಕೊ ಲೋಬೋ, ಗ್ರೇಸಿ ಲೋಬೋ ಮುಂತಾದವರು ಉಪಸ್ಥಿತರಿದ್ದರು.

Related posts

ಕೊಕ್ಕಡ ಜೇಸಿ ಕಪಿಲಾ ಘಟಕದ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ

Suddi Udaya

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ವಿವಿಧ ಪಕ್ಷಗಳು ಪಡೆದುಕೊಂಡ ಬೂತುವಾರು ಮತಗಳ ವಿವರ

Suddi Udaya

ವೇಣೂರು ಠಾಣಾ ಪೊಲೀಸ್ ಉಪ ನಿರೀಕ್ಷಕರಾಗಿ ಶ್ರೀಶೈಲ ಡಿ. ಮುರುಗೋಡು

Suddi Udaya

ಬೆಳ್ತಂಗಡಿ: ವಿಶೇಷ ವಿಕಲಚೇತನರ ಗುರುತಿನ ಚೀಟಿ ನವೀಕರಣ ಮತ್ತು ಹೊಸ ಗುರುತಿಸುವಿಕೆಯ ಶಿಬಿರ

Suddi Udaya

ಮಾಲಾಡಿ ಶಾಲಾ ವಿದ್ಯಾರ್ಥಿಗಳಿಗೆ ದಾನಿ ಹಾಜಿ ಲತೀಫ್ ಸಾಹೇಬ್‌ ಕೊಡುಗೆಯಾಗಿ ನೀಡಿದ ಉಚಿತ ನೋಟ್ ಪುಸ್ತಕಗಳ ವಿತರಣೆ

Suddi Udaya

ಮಹಿಳೆಯರ ಬಗ್ಗೆ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಅವಹೇಳನಕಾರಿ ಹೇಳಿಕೆ ಖಂಡನೀಯ : ಸುಧೀರ್ ಆರ್ ಸುವರ್ಣ

Suddi Udaya
error: Content is protected !!