ಉಜಿರೆ: ಇಲ್ಲಿನ ಸಾಯಿರಾಂ ಕಾಂಪ್ಲೆಕ್ಸ್ ನಲ್ಲಿ ಸ್ಕಿನ್ ಮತ್ತು ಹೇರ್ ಗೆ ಸಂಬಂಧಿಸಿದ ಕಾಸ್ಮೆಟಾಲಜಿ ಮತ್ತು ಟ್ರೈಕಾಲಜಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮವು ನ.11 ರಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್.ಪಿ ಸಂಸ್ಥೆಗಳ ಉದ್ಯಮಿ ಶ್ರೀಮತಿ ಅಪರ್ಣಾ ಶಿವಕಾಂತ್ ನೇರವೇರಿಸಿ ಶುಭಕೋರಿದರು. ಎಸ್.ಡಿ.ಎಂ ಕಾಲೇಜಿನ ರಸಾಯನಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಸಂಗೀತ ಹರ್ಷ ದೀಪ ಬೆಳಗಿಸಿ ಶುಭಹಾರೈಸಿದರು.
ಸಂಸ್ಥೆಯ ಮಾಲಕಿ ಶ್ರೀಮತಿ ಸಾರಿಕಾ ಶ್ರೇಯಸ್ ಬೊಳ್ಮ ಬೆಂಗಳೂರಿನ ವಂಡರ್ ಅಕಾಡೆಮಿ ಕಾಸ್ಮೆಟಾಲಜಿ ಮತ್ತು ಟ್ರೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ.
ಕಾರ್ಯಕ್ರಮದಲ್ಲಿ ಕಮಲೇಶ ರೆಸಿಡೆನ್ಸಿ ಮಾಲಕರಾದ ಉಷಾ ಮತ್ತು ಶ್ರೀನಿವಾಸ ಗೌಡ, ನಿವೃತ್ತ ಯೋಧರಾದ ಡಿ.ಕೆ ಸದಾಶಿವ ಗೌಡ, ಪ್ರಭಾಕರ ಗೌಡ, ಸಿವಿಲ್ ಎಂಜಿನಿಯರ್ ಮತ್ತು CEng ಶ್ರೇಯಸ್ ಬಿ ಎಸ್ , ಮೆರೈನ್ ಇಂಜಿನಿಯರ್ ಯಶಸ್ ಬಿ ಎಸ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕಿಸಾನ್ ಕಾಂಗ್ರೆಸ್ ಸಮಿತಿ ಸದಸ್ಯರಾದ ಯತೀಶ್ ಕುಮಾರ್ ಬಾನಡ್ಕ, ಅಬ್ಯಾಸ್ ಕಾಲೇಜಿನ ಉಪ ಪ್ರಾಂಶುಪಾಲರು ಚಂದ್ರಶೇಖರ್ ಗೌಡ, ಉಜಿರೆ ಪಂಚಾಯತ್ ಮಾಜಿ ಅಧ್ಯಕ್ಷ, ಬಾಲಕೃಷ್ಣ ಗೌಡ ಉಪಸ್ಥಿತರಿದ್ದು ಶುಭಹಾರೈಸಿದರು.