25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ಭಜನಾ ಮಂಡಳಿ ಭಜನಾ ಸಪ್ತಾಹದ ಧಾರ್ಮಿಕ ಸಭೆ

ಮಚ್ಚಿನ: ಶ್ರೀ ಅನಂತೇಶ್ವರ ಸ್ವಾಮಿ ಭಜನಾ ಮಂಡಳಿ ಬಳ್ಳಮಂಜ ಇದರ 47ನೇ ವರ್ಷದ ಭಜನಾ ಸಪ್ತಾಹದ ಧಾರ್ಮಿಕ ಸಭಾ ಕಾರ್ಯಕ್ರಮ ನ 13ರಂದು ನಡೆಯಿತು.

ಧಾರ್ಮಿಕ ಉಪನ್ಯಾಸಕರಾಗಿ ಸುವರ್ಣ ಪ್ರತಿಷ್ಠಾನ ಬೆಳ್ತಂಗಡಿ ಇದರ ಅಧ್ಯಕ್ಷ ಬಿ ಸಂಪತ್ ಸುವರ್ಣ ಮಾತನಾಡಿ. ಭಕ್ತಿಯಿಂದ ದೇವರನ್ನು ಬಜಿಸಿದರೆ ಭಗವಂತ ಒಳಿಯಲು ಸಾಧ್ಯ. ಭಗವಂತ ಭಜನೆಗೆ ಮಾತ್ರ ಒಳಿಯಲು ಸಾಧ್ಯ. ಭಾವ ರಾಗ ತಾಳ ಅದೇ ಭಾರತ ಭಾರತ ಎಂದರೆ ದೇವರು ಹಿಂದೂ ಧರ್ಮದ ಪುಣ್ಯದ ಭೂಮಿ ನಮ್ಮದು ಎಂದರು. 47 ವರ್ಷ ಸುದೀರ್ಘ ಸೇವೆ ಸಲ್ಲಿಸಿದ ಅನಂತೇಶ್ವರ ಭಜನಾ ಮಂಡಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಶರರಾದ ಡಾ| ಹರ್ಷ ಸಂಪಿಗೆತ್ತಾಯ, ಮಂಡಳಿಯ ಅಧ್ಯಕ್ಷ ಪುಷ್ಪಕ್ ರಾವ್ ಉಪಸ್ಥಿತರಿದ್ದರು.

ಭಜನಾ ಮಂಡಳಿಯ ಕಾರ್ಯದರ್ಶಿ ಯುವರಾಜ್ ಬರಮೇಲು ವಾರ್ಷಿಕ ವರದಿ ಮಂಡಿಸಿದರು. ಬಾಲಕೃಷ್ಣ ಭಟ್ ಸ್ವಾಗತಿಸಿದರು. ಹರ್ಷಬಳ್ಳಮಂಜ ಕಾರ್ಯಕ್ರಮ ನಿರೂಪಿಸಿದರು. ಮಚ್ಚಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ಪ್ರೌಢಶಾಲಾ ವಿದ್ಯಾರ್ಥಿ ಹಾಗೂ ವಿದ್ಯಾಸಾಗರ ಸಿ ಬಿ ಯಸ್ ಇ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು

ನ.16 ರ ವರೆಗೆ ಭಜನೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು 48 ಗಂಟೆಗಳ ಅಖಂಡ ಭಜನಾ ಸೇವೆಯೊಂದಿಗೆ ದೇವರಿಗೆ ರಂಗಪೂಜೆ ದೀಪೋತ್ಸವದೊಂದಿಗೆ ನಡೆಯಲಿದೆ.

ವರದಿ: ಹರ್ಷ ಬಳ್ಳಮಂಜ

Related posts

ಅಳದಂಗಡಿ ವಲಯ ಅರಣ್ಯದಲ್ಲಿ ಹಣ್ಣು ಹಂಪಲುಗಳ ಗಿಡ ನಾಟಿ ಕಾರ್ಯಕ್ರಮ

Suddi Udaya

ಮೇಲಂತಬೆಟ್ಟು ಗ್ರಾ.ಪಂ. ವ್ಯಾಪ್ತಿಯಲ್ಲಿ ಉಚಿತ ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಶಿಬಿರ

Suddi Udaya

ಕುವೆಟ್ಟು ಸ.ಉ. ಹಿ.ಪ್ರಾ. ಶಾಲೆಯಲ್ಲಿ ಮಕ್ಕಳ ದಿನಾಚರಣೆ

Suddi Udaya

ಮಾ.10 ಮೂಲ್ಕಿಯಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ “ಬೆಳ್ಳಿ ಹಬ್ಬ ಸಂಭ್ರಮ”: ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದಲ್ಲಿ ಕಾರ್ಯಕ್ರಮದ ಯಶಸ್ವಿಗೆ ಪೂರ್ವಾಭಾವಿ ಸಭೆ

Suddi Udaya

ಇಂದಬೆಟ್ಟು ವಲಯದ ಭಜನಾ ಮಂಡಳಿಗಳ ಪದಾಧಿಕಾರಿಗಳ ಸಭೆ

Suddi Udaya

ಡಿ.4-5: ಪಜಿರಡ್ಕ ಸಂಗಮ ಕ್ಷೇತ್ರ ಶ್ರೀ ಸದಾಶಿವೇಶ್ವರ ದೇವಸ್ಥಾನಕ್ಕೆ ನೂತನ ಶಿಲಾಮಯ ಧ್ವಜಸ್ತಂಭ ಸ್ಥಾಪನೆ ಮತ್ತು ಶೋಭಾಯಾತ್ರೆ

Suddi Udaya
error: Content is protected !!