ಕಲ್ಮಂಜ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ

Suddi Udaya

ಕಲ್ಮಂಜ : ಇತರ ಪ್ರಾಣಿಗಳಿಗೆ ಹೋಲಿಸಿದಲ್ಲಿ ಮಾನವರಲ್ಲಿ ಬಾಲ್ಯವು ದೀರ್ಘಕಾಲದ್ದಾಗಿದ್ದು ಬಾಲ್ಯದಲ್ಲಿ ಕಣ್ಣಲ್ಲಿ ಕಣ್ಣಿಟ್ಟು ಬೆಳೆಸಿದ ತಂದೆ ತಾಯಿಯರನ್ನು ಹಿರಿಯರನ್ನು ಗೌರವಿಸುವುದನ್ನು ಮಕ್ಕಳು ಕಲಿಯಬೇಕು ಎಂದು ಕಲ್ಮಂಜ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಪೂರ್ಣಿಮಾ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಅವರು ಕಲ್ಮಂಜ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆಯಂದು ನೆಹರೂ ಭಾವಚಿತ್ರಕ್ಕೆ ಪುಷ್ಪ ನಮನ ಮಾಡಿ ದೀಪ ಪ್ರಜ್ವಲಿಸಿ ಮಾತನಾಡಿದರು.

ಮಕ್ಕಳ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ಏರ್ಪಡಿಸಿ ಬಹುಮಾನ ನೀಡಲಾಯಿತು. ಬಿ ಎಡ್ ಪ್ರಶಿಕ್ಷಣಾರ್ಥಿ ರಕ್ಷಿತಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಹರಿಣಾಕ್ಷಿ ಸ್ವಾಗತಿಸಿ ಶಶಿಕಲಾ ಧನ್ಯವಾದವಿತ್ತರು. ಸಂತೋಷ್ ವಿಜೇತರ ಪಟ್ಟಿ ವಾಚಿಸಿದರು. ಶಾಲಾ ಶಿಕ್ಷಕಿಯರಾದ ಮಾಲಿನಿ ಹೆಗಡೆˌ ಹೇಮಲತಾˌ ಪ್ರೇಮಲತಾˌ ಸವಿತಾˌ ಸಾವಿತ್ರಿ ಸಿ ಡಿ ˌವಸಂತಿ ಎಂ ಸುಧೀಂದ್ರ ಪ್ರೇಮಾ ಯಚ್ ವಿ ಸಹಕರಿಸಿದರು.

Leave a Comment

error: Content is protected !!