25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರತಿಭಟನಾ ಸಭೆ; ಸಾವಿರಾರು ಮಂದಿ ಭಾಗಿ

ನೆಲ್ಯಾಡಿ : ದಕ್ಷಿಣ ಕನ್ನಡ ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ಕಡಬ, ಸುಳ್ಯ, ಬೆಳ್ತಂಗಡಿ ತಾಲೂಕಿನ ಬಾಧಿತ ಗ್ರಾಮಸ್ಥರಿಂದ ಕಸ್ತೂರಿ ರಂಗನ್ ವರದಿ ವಿರುದ್ಧ ಬೃಹತ್ ಪ್ರತಿಭಟನೆ ಸಭೆಯು ಕಡಬ ತಾಲೂಕಿನ ಗುಂಡ್ಯದಲ್ಲಿ ಆರಂಭಗೊಂಡಿದೆ.

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಪ್ರತಿಭಟನಾ ಸಭೆ ಉದ್ಘಾಟಿಸಿದರು. ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಪ್ರಮುಖರಾದ ವಂ.ಫಾ. ಆದರ್ಶ್ ಗುತ್ತಿಗಾರು, ವಂ.ಫಾ.ಶಿಬಿ ಮುಂಡಾಜೆ, ವಂ.ಫಾ.ಜೋಸೆಫ್ ಶಿರಾಡಿ, ಫಾ. ವರ್ಗೀಸ್ ಕೈಪನಡ್ಕ, ವೆಂಕಪ್ಪ ಗೌಡ ಸುಳ್ಯ, ಸಂಜೀವ ಮಠಂದೂರು, ಸಕಲೇಶಪುರ ಶಾಸಕ ಮಂಜು, ಸಾಮಾಜಿಕ ಮುಂದಾಳು ರಘು, ಎ.ವಿ.ತೀರ್ಥರಾಮ, ಸಯ್ಯದ್ ಮೀರಾ ಸಾಹೇಬ್ ಕಡಬ, ಕೃಷ್ಣ ಶೆಟ್ಟಿ ಕಡಬ, ಪಿ.ಪಿ.ವರ್ಗೀಸ್ ಕಡಬ, ಸರ್ವೋತ್ತಮ ಗೌಡ ನೆಲ್ಯಾಡಿ, ಹರೀಶ್ ಕಂಜಿಪಿಲಿ, ವೆಂಕಟ್ ದಂಬೆಕೋಡಿ, ಆಶಾ ತಿಮ್ಮಪ್ಪ, ಮಹಮ್ಮದ್ ಆಲಿ ಹೊಸಮಠ, ಸುಧೀರ್ ಕುಮಾರ್, ವೆಂಕಟ್ ವಳಲಂಬೆ, ಪಿ. ಪಿ.ವರ್ಗೀಸ್, ಬಾಸ್ಕರ ಗೌಡ ಇಚಿಲಂಪಾಡಿ, ಬಾಲಕೃಷ್ಣ ಬಾಣಜಾಲು ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಧನಂಜಯ ಕೋಡಂಗೆ ಸ್ವಾಗತಿಸಿದರು. ಪ್ರತಿಭಟನಾ ಸಭೆಯಲ್ಲಿ ಮೂರು ತಾಲೂಕುಗಳ ಬಾಧಿತಗಳ ಸಾವಿರಾರು ಗ್ರಾಮಸ್ಥರು ಭಾಗವಹಿಸಿದ್ದರು. ಪೊಲೀಸ್ ಬಂದೋ ಬಸ್ತ್ ಒದಗಿಸಲಾಗಿತ್ತು.

Related posts

ಚಾರ್ಮಾಡಿ: ಚಲಿಸುತ್ತಿದ್ದ ಕೆಎಸ್​ಆರ್​ಟಿಸಿ ಬಸ್ಸಿನ ಸ್ಟೇರಿಂಗ್ ಜಾಯಿಂಟ್ ಕಟ್

Suddi Udaya

ಜ.2: ಧರ್ಮಸ್ಥಳ ಶಾಂತಿವನ ಟ್ರಸ್ಟ್ ವತಿಯಿಂದ 31ನೇ ವರ್ಷದ “ಜ್ಞಾನರಥ” ಮತ್ತು “ಜ್ಞಾನಪಥ” ಮೌಲ್ಯಧಾರಿತ ಪುಸ್ತಕಗಳ ರಾಜ್ಯಮಟ್ಟದ ವಿವಿಧ ಸ್ಪರ್ಧೆ ಹಾಗೂ ಪುರಸ್ಕಾರ ಸಮಾರಂಭ

Suddi Udaya

ಭಾರಿ ಬಿರುಗಾಳಿ ಮಳೆ: ನಾರ್ಯ ಅರಿಕೋಡಿ ವಿಮಲಾಕ್ಷ ಗೌಡರ ಮನೆಯ ಮೇಲ್ಛಾವಣಿ ಶೀಟ್ ಗಾಳಿಗೆ ಹಾರಿ ರೂ. 1 ಲಕ್ಷ ನಷ್ಟ

Suddi Udaya

ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ವತಿಯಿಂದ 20ನೇ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ

Suddi Udaya

ದ್ವಿತೀಯ ಪಿಯುಸಿ ಫಲಿತಾಂಶ: ಸರಕಾರಿ ಪದವಿಪೂರ್ವ ಕಾಲೇಜಿಗೆ ಶೇ.97.32% ಫಲಿತಾಂಶ

Suddi Udaya

ರಾಷ್ಟೋತ್ಥಾನ ಪರಿಷತ್ತಿನ ಮಾಸಪತ್ರಿಕೆ ಉತ್ಥಾನ ಬಿಡುಗಡೆ

Suddi Udaya
error: Content is protected !!