37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮೊಗ್ರು: ಅಲೆಕ್ಕಿ ಜೈರಾಮ ಸೇವಾ ಟ್ರಸ್ಟ್ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಗೋಪೂಜೆ, ತುಳಸಿಪೂಜೆ, ಭಜನೆ, ಹಣತೆಗಳ ದೀಪ ಪ್ರಜ್ವಲನೆ

ಮೊಗ್ರು :ಮೊಗ್ರು ಗ್ರಾಮದ ಮುಗೇರಡ್ಕ ಜೈ ಶ್ರೀ ರಾಮ ಸೇವಾ ಟ್ರಸ್ಟ್ (ರಿ.)ಅಲೆಕ್ಕಿ ಇದರ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ನ. 13 ರಂದು ಶ್ರೀ ರಾಮ ಶಿಶುಮಂದಿರದಲ್ಲಿ ಮೂರನೇ ವರ್ಷದ ಗೋಪೂಜೆ ,ಭಜನೆ, ತುಳಸಿ ಪೂಜೆ, ಹಣತೆಗಳ ದೀಪ ಪ್ರಜ್ವಲನೆ ಕಾರ್ಯಕ್ರಮ ನೆರವೇರಿತು.

ಶ್ರೀ ರಾಮ ಶಿಶುಮಂದಿರದ ಮಕ್ಕಳು, ಪೋಷಕರು , ಮಾತಾಜಿಯವರು, ಮಾತೃ ಮಂಡಳಿ ಹಾಗೂ ಜೈ ಶ್ರೀರಾಮ್ ಮಹಿಳಾ ಸಂಘ ಅಲೆಕ್ಕಿ- ಮುಗೇರಡ್ಕ್ ಇದರ ಸದಸ್ಯರು ಹಾಗೂ ಊರವರೆಲ್ಲಲರೂ ಸೇರಿ ಭಜನೆ, ತುಳಸಿ ಪೂಜೆ, ಗೋಪೂಜೆ, ಹಣತೆಗಳಿಗೆ ದೀಪ ಪ್ರಜ್ವಲನೆ ಜೊತೆಗೆ ಪಟಾಕಿ ಹಚ್ಚಿ ಸಂಭ್ರಮಿಸಲಾಯಿತು.


ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಕ್ಷಿತ್ ಪಣೆಕ್ಕರ ಪ್ರಯೋಜಕತ್ವದಲ್ಲಿ ಅನ್ನದಾನದ ವ್ಯವಸ್ಥೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರು, ಟ್ರಸ್ಟ್ ನ ಪದಾಧಿಕಾರಿಗಳು ಮಾತಾಜಿಯವರು, ಪೋಷಕರು, ಊರಿನವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

Related posts

ಉಡುಪಿ-ಉಜಿರೆ ರಸ್ತೆಯುದ್ದಕ್ಕೂ ಮಹೇಶ್ ಶೆಟ್ಟಿ ತಿಮರೋಡಿಗೆ ಅಭಿಮಾನಿಗಳಿಂದ ಭವ್ಯ ಸ್ವಾಗತ

Suddi Udaya

ಬೆಳ್ತಂಗಡಿ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ

Suddi Udaya

ಲಾಯಿಲ: ರಬ್ಬರ್ ತೋಟಕ್ಕೆ ಬೆಂಕಿ: 75 ರಷ್ಟು ಮರಕ್ಕೆ ಹಾನಿ

Suddi Udaya

ರೆಖ್ಯ: ಜಿ.ಪಂ. ಮಾಜಿ ಸದಸ್ಯ ಟಿ.ಕೆ ಮಹೇಂದ್ರನ್ ನಿಧನ

Suddi Udaya

ಶಿರ್ಲಾಲು ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಹಾಗೂ ಜಂಟಿ ಸಂಘಟನೆ ವತಿಯಿಂದ ಆಟಿದ ಅಟೀಲ್ ಕಾರ್ಯಕ್ರಮ

Suddi Udaya

ಕಸ್ತೂರಿ ರಂಗನ್ ವರದಿಯ ವಿರುದ್ಧ ನಡೆಯಲಿರುವ ಪ್ರತಿಭಟನೆಗೆ ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಹರೀಶ್ ಸಾಲಿಯಾನ್ ಬೆಂಬಲ

Suddi Udaya
error: Content is protected !!