April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಗ್ರಂಥಾಲಯ ಮೇಲ್ವಿಚಾರಕರಿಗೆ ಡಿಜಿಟಲ್ ಕೌಶಲ್ಯ, ನಾಯಕತ್ವ ಮತ್ತು ಸಹಭಾಗಿತ್ವ ಚಟುವಟಿಕೆಯ ತರಬೇತಿ ಕಾರ್ಯಕ್ರಮ

ಬೆಳ್ತಂಗಡಿ: ಶಿಕ್ಷಣ ಫೌಂಡೇಶನ್ ಹಾಗೂ ಡೆಲ್ ಸಂಸ್ಥೆಯ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದಡಿಯಲ್ಲಿ ಬೆಳ್ತಂಗಡಿ ತಾಲೂಕಿನ ಗ್ರಂಥಾಲಯ ಮೇಲ್ವಿಚಾರಕರಿಗೆ ಒಂದು ದಿನದ ಡಿಜಿಟಲ್ ಕೌಶಲ್ಯ ಹಾಗೂ ನಾಯಕತ್ವ ಮತ್ತು ಸಹಭಾಗಿತ್ವ ಚಟುವಟಿಕೆಗಳನ್ನೊಳಗೊಂಡ ತರಬೇತಿಯನ್ನು ಬೆಳ್ತಂಗಡಿ ತಾಲೂಕು ಪಂಚಾಯಿತ್ ನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ಪ್ರಸ್ತುತ ದಿನಗಳಲ್ಲಿ ಡಿಜಿಟಲ್ ಸಾಕ್ಷರತೆಯ ಅಗತ್ಯತೆಯ ಬಗ್ಗೆ ಹಾಗೂ ಈ ತರಬೇತಿಯಿಂದಾಗುವ ಸಕಾರತ್ಮಕ ಪರಿಣಾಮಗಳ ಬಗ್ಗೆ ತಿಳಿಸಿದರು. ಶಿಕ್ಷಣ ಫೌಂಡೇಶನ್ ವತಿಯಿಂದ ಗ್ರಾಮ ಪಂಚಾಯತ್ ಅರಿವು ಕೇಂದ್ರಗಳಿಗೆ ಅನೇಕ ರೀತಿಯ ಡಿಜಿಟಲ್ ಸಾಧನಗಳನ್ನು ಒದಗಿಸಿದ್ದು, ಅವುಗಳ ಸಹಾಯದಿಂದ ಗ್ರಾಮೀಣ ಭಾಗದ ಸಮುದಾಯದ ಜನರು ಹಾಗೂ ಸ್ವ ಸಹಾಯ ಮಹಿಳೆಯರು ಡಿಜಿಟಲ್ ಸಾಕ್ಷರರಾಗಬೇಕು, ಇದರ ಮೂಲಕ ತಮ್ಮ ದೈನಂದಿನ ಉದ್ಯೋಗ, ವ್ಯವಹಾರಗಳಲ್ಲಿ, ಸದೃಢರಾಗಬೇಕು ಎಂಬ ಕಿವಿಮಾತು ತಿಳಿಸಿದರು.

ಇನ್ನೋರ್ವ ಅತಿಥಿ ಸಹಾಯಕ ನಿರ್ದೇಶಕ ಪ್ರಶಾಂತ್ ಶುಭ ಹಾರೈಸಿದರು. ಶಿಕ್ಷಣ ಫೌಂಡೇಶನ್ ಉಡುಪಿ ಜಿಲ್ಲಾ ಸಂಯೋಜಕರಾದ ರೀನಾ ಹೆಗಡೆಯವರು ಡಿಜಿಟಲ್ ಕೌಶಲ್ಯ ಮತ್ತು ನಾಯಕತ್ವ ತರಬೇತಿಯನ್ನು ನಡೆಸಿಕೊಟ್ಟರು. 42 ಅರಿವು ಕೇಂದ್ರಗಳ ಮೇಲ್ವಿಚಾರಕರು ಈ ತರಬೇತಿಯ ಸದುಪಯೋಗ ಪಡೆದುಕೊಂಡರು.
ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಣ ಫೌಂಡೇಶನ್ ಜಿಲ್ಲಾ ಸಂಯೋಜಕ ಲವಿಶ್ ನಿರ್ವಹಿಸಿದರು. ಗ್ರಾಮ ಪಂಚಾಯಿತಿ ಅರಿವು ಕೇಂದ್ರ ಮೇಲ್ವಿಚಾರಕರಾದ ಶ್ರೀಮತಿ ಡೀಕಯ್ಯ ಗೌಡ ಧನ್ಯವಾದವಿತ್ತರು.

Related posts

ಎ.9: ಉಜಿರೆಯಲ್ಲಿ ಕೇರಳ ಸಂಪ್ರದಾಯ ವಿಷು ಕಣಿ ಉತ್ಸವ

Suddi Udaya

ಚಾರ್ಮಾಡಿ ಘಾಟ್ ವಿಸ್ತರಣೆಗೆ ರೂ. 343.73 ಕೋಟಿ ಬಿಡುಗಡೆ- ನಿತಿನ್ ಗಡ್ಕರಿ

Suddi Udaya

ತುಳುವಿಗೆ ಎರಡನೇ ಅಧಿಕೃತ ಭಾಷೆಯ ಸ್ಥಾನ ನೀಡುವಂತೆ ವಿಧಾನಸಭೆಯಲ್ಲಿ ಆಗ್ರಹ

Suddi Udaya

ಕೊಯ್ಯೂರು: ಜೀಪು ಮತ್ತು ಸರಕಾರಿ ಬಸ್ ನಡುವೆ ಅಪಘಾತ

Suddi Udaya

ಮಾಲಾಡಿ ಅಂಬೇಡ್ಕರ್ ಜನ್ಮ‌ದಿನಾಚರಣಾ ಸಮಿತಿ ಆಶ್ರಯದಲ್ಲಿ ಬುದ್ದ, ಬಸವ, ಮತ್ತು ಅಂಬೇಡ್ಕರ್ ಜನ್ಮ‌ದಿನಾಚರಣೆ

Suddi Udaya

ಧರ್ಮಸ್ಥಳ: ಕಾರನ್ನು ಅಡ್ಡಗಟ್ಟಿ ಚಾಲಕ ಹಾಗೂ ಕಾರಿನಲ್ಲಿದ್ದ ಮಹಿಳೆಯರ ಮೇಲೆ ಹಲ್ಲೆ: ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya
error: Content is protected !!