March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ತಾಲೂಕು ಆಡಳಿತ ಸೌಧದಲ್ಲಿ ಕನಕದಾಸ ಜಯಂತಿ ಆಚರಣೆ

ಬೆಳ್ತಂಗಡಿ : ತಾಲೂಕು ಆಡಳಿತ ಸೌಧದಲ್ಲಿ ಕನಕದಾಸ ಜಯಂತಿಯನ್ನು ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ನ.18 ರಂದು ಆಚರಿಸಲಾಯಿತು.

ಮುಖ್ಯ ಅತಿಥಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ “ನಾನು” ಎಂಬ ಅಹಂ ನಮ್ಮಿಂದ ಹೋದಾಗ ಮಾತ್ರ ಭಗವಂತನನ್ನು ಕಂಡುಕೊಳ್ಳುವುದಕ್ಕೆ ಸಾಧ್ಯ. ಸಾತ್ವಿಕ ಬದುಕನ್ನು ಪೂರೈಸಿದರೆ ಮೋಕ್ಷವನ್ನು ಕಾಣಲು ಸಾಧ್ಯ. ಮೋಕ್ಷವನ್ನು ಕಾಣುವುದೇ ಮಾನವ ಜನ್ಮದ ಉದ್ದೇಶ. ಜನನ ಮರಣದ ಚಕ್ರದಿಂದ ಹೊರಗೆ ಬರುವುದಕ್ಕೆ ಕನಕದಾಸರಂತಹ ಸಂತರುಗಳು ದಾರಿ ತೋರಿಸಿದ್ದಾರೆ. ಭಕ್ತಿ ಪರಂಪರೆಯ ಶ್ರೇಷ್ಠರು ಕನಕದಾಸರು.

ಕಂದಾಯ ನಿರೀಕ್ಷಕ ಪಾವಡಪ್ಪ ದೊಡ್ಡಮನಿ ಕನಕದಾಸರ ಜೀವನ ಚರಿತ್ರೆಯ ಬಗ್ಗೆ ತಿಳಿಸಿದರು. ವೇದಿಕೆಯಲ್ಲಿ ಉಪ ತಹಸೀಲ್ದಾರ್ ಮಲ್ಲಪ್ಪ ನಡುಗಟ್ಟಿ, ಎ ಎಸ್ ಐ ದುರ್ಗಾಪ್ರಸಾದ್ ಉಪಸ್ಥಿತರಿದ್ದರು.

ಗೃಹರಕ್ಷಕ ದಳದ ಘಟಕಾಧಿಕಾರಿ ಜಯಾನಂದ ನಿರೂಪಿಸಿದರು. ಪರಮೇಶ್ ವಂದಿಸಿದರು. ಶಾಲಾ ವಿದ್ಯಾರ್ಥಿನಿಯರು ನಾಡ ಗೀತೆ ಹಾಗೂ ರಾಷ್ಟ್ರ ಗೀತೆಯನ್ನು ಹಾಡಿದರು.

Related posts

ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನಿಂದ ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸಾಧನ ಪ್ರಶಸ್ತಿ

Suddi Udaya

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಶೇ. 46 ಮತದಾನ

Suddi Udaya

ಬಜಿರೆ: ಹೊಸಪಟ್ಣ ಪರಿಸರದಲ್ಲಿ ಚಿರತೆ ಓಡಾಟ-ಜನರಲ್ಲಿ ಆತಂಕ: ಬೋನ್ ಅಳವಡಿಸಲು ಗ್ರಾಮಸ್ಥರ ಆಗ್ರಹ

Suddi Udaya

ಕುಕ್ಕೇಡಿ ಗ್ರಾಮ ಪಂಚಾಯತ್ ನಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ

Suddi Udaya

ಉಜಿರೆ: ಹಳೆಪೇಟೆ ಎಸ್.ಡಿ.ಟಿ.ಯು ಆಟೋ ಯೂನಿಯನ್ ವಾರ್ಷಿಕ ಮಹಾಸಭೆ

Suddi Udaya

ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಸಿಬ್ಬಂದಿ ಕೊರತೆ: ಕಂದಾಯ ಸಚಿವರಿಗೆ ರಕ್ಷಿತ್ ಶಿವರಾಂ ಮನವಿ

Suddi Udaya
error: Content is protected !!