September 6, 2026
ಆಯ್ಕೆಗ್ರಾಮಾಂತರ ಸುದ್ದಿತಾಲೂಕು ಸುದ್ದಿವರದಿ

ಲಾಯಿಲ ವಲಯದ ಭಜನಾ ಪರಿಷತ್ ಅಧ್ಯಕ್ಷರಾಗಿ ಜನಾರ್ಧನ ಆಯ್ಕೆ

ಲಾಯಿಲ : ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಲಾಯಿಲ ವಲಯದ ಅಧ್ಯಕ್ಷರಾಗಿದ್ದ ಪಿ ಚಂದ್ರಶೇಖರ ಸಾಲ್ಯಾನ್ ಕೊಯ್ಯೂರು ಇವರು ಇತ್ತೀಚೆಗೆ ಇದರ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಕಾರಣ ವಲಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಆದುದರಿಂದ ಅವರ ಸ್ಥಾನಕ್ಕೆ ಹೊಸದಾಗಿ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆಯೂ ನ.18 ರಂದು ನೂತನ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಲಾಯಿಲದ ಸಿಆರ್ ಪಿ ಸಭಾಭವನದಲ್ಲಿ ವಲಯದ ಎಲ್ಲಾ ಭಜನಾ ಮಂಡಳಿಗಳ ಸಹಕಾರದೊಂದಿಗೆ ನಡೆಯಿತು.


ಈ ಸಭೆಯಲ್ಲಿ ಮುಂದಿನ ಅವಧಿಗೆ ವಲಯದ ಅಧ್ಯಕ್ಷರಾಗಿ ಶ್ರೀ ಸರಸ್ವತಿ ಭಜನಾ ಮಂಡಳಿ ವಿವೇಕಾನಂದ ನಗರ ಇದರ ಅಧ್ಯಕ್ಷ ಜನಾರ್ಧನ ಸರ್ವಾನುಮತದಿಂದ ಆಯ್ಕೆಯಾದರು.


ಸಭೆಯಲ್ಲಿ ಮಂಜುನಾಥೇಶ್ವರ ಭಜನಾ ಪರಿಷತ್ತಿನ ರಾಜ್ಯಾಧ್ಯಕ್ಷ ಪಿ ಚಂದ್ರಶೇಖರ ಸಾಲ್ಯಾನ್ ಕೊಯ್ಯೂರು, ವಲಯ ಭಜನಾ ಪರಿಷತ್ತಿನ ಕಾರ್ಯದರ್ಶಿ ಅಖಿಲೇಶ್, ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರಾದ ಸುಶಾಂತ್, ಭಜನಾ ಪರಿಷತ್ತಿನ ವಲಯದ ಪದಾಧಿಕಾರಿಗಳು, ವಿವಿಧ ಭಜನಾ ಮಂಡಳಿಗಳ ಅಧ್ಯಕ್ಷರುಗಳು, ಕಾರ್ಯದರ್ಶಿಗಳು, ಪದಾಧಿಕಾರಿಗಳು, ಯೋಜನೆಯ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

Related posts

ಹರೇಕಳ ಹಾಜಬ್ಬರಿಂದ ವಿದ್ವತ್ ಕಾಲೇಜಿನಲ್ಲಿ ವಾಕ್ ಇನ್ ಟು ವಿದ್ವತ್ ನಾಮಫಲಕ ಅನಾವರಣ: ಕಾಲೇಜಿನ ಭೌತಶಾಸ್ತ್ರ, ರಸಾಯನಶಾಸ್ತ್ರ,ಜೀವಶಾಸ್ತ್ರ ವಿಭಾಗದ ಲ್ಯಾಬ್ ಉದ್ಘಾಟನೆ:

Suddi Udaya

ನಾರಾವಿ: ಬಸದಿಯಲ್ಲಿ ಧಾಮ ಸಂಪ್ರೋಕ್ಷಣಾಪೂರ್ವಕ ಪ್ರತಿಷ್ಠಾ ಮಹೋತ್ಸವ

Suddi Udaya

ಕಡಿರುದ್ಯಾವರ ಗ್ರಾ.ಪಂ. ನ ಪ್ರಥಮ ಸುತ್ತಿನ ಗ್ರಾಮಸಭೆ

Suddi Udaya

ಧರ್ಮಸ್ಥಳ ಪೋಸೋಲಿಕೆ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಕೊಕ್ಕಡ ವಲಯದಲ್ಲಿ ಸಿದ್ಧಿವಿನಾಯಕ ಹೊಸ ಸಂಘ ರಚನೆ

Suddi Udaya

ಕಲ್ಮಂಜ: ಗರ್ಭಿಣಿ ಮಹಿಳೆ ಹೃದಯಾಘಾತದಿಂದ ನಿಧನ

Suddi Udaya
error: Content is protected !!