March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮುಂಡಾಜೆ: ಕೀರ್ತನಾ ಕಲಾತಂಡದಿಂದ ಕನಕ ಜಯಂತಿ ಆಚರಣೆ

ಮುಂಡಾಜೆ: ಕೀರ್ತನಾ ಕಲಾತಂಡ ಮುಂಡಾಜೆ ಇದರ ಆಶ್ರಯದಲ್ಲಿ ಕನಕ ಜಯಂತಿಯನ್ನು ಮುಂಡಾಜೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಆಚರಿಸಲಾಯಿತು.

ವೇದಿಕೆಯಲ್ಲಿ ತಂಡದ ಅಧ್ಯಕ್ಷ ಸದಾನಂದ ಬಿ.ರವರು ಮಾತನಾಡಿ ನಮ್ಮ ಮಹಾಪುರುಷರ ಜೀವನ ಚರಿತ್ರೆಯನ್ನು ಮುಂದಿನ ತಲೆಮಾರಿಗೆ ದಾಟಿಸುವ ಉದ್ದೇಶದಿಂದ ಇಂತಹ ಕಾರ್‍ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ್ ಬಂಗೇರ, ಅರ್ಚಕ ಸತ್ಯನಾರಾಯಣ ಹೊಳ್ಳ, ಪ್ರದೀಪ್ ಶೆಟ್ಟಿ, ಮನೋಹರ ನಾಯ್ಕ, ಲೀಲಾವತಿ ನಾಯ್ಕ, ಹಾಗೂ ಪುರುಷೋತ್ತಮ ಶೆಟ್ಟಿಯವರು ಕನಕ ಜಯಂತಿಯ ಬಗ್ಗೆ ಮಾತನಾಡಿದರು.

ತಂಡದ ಪುಟಾಣಿ ಕಲಾವಿದರಿಂದ “ಕನಕನಿಗೊಲಿದ ಗೋವಿಂದ” ಕಿರುನಾಟಕ ಪ್ರದರ್ಶನ ಹಾಗೂ ಸದಸ್ಯರಿಂದ ನೃತ್ಯ ಕಾರ್ಯಕ್ರಮ ನಡೆಯಿತು.

ಕು| ಸ್ಮಿತಾ ಸ್ವಾಗತಿಸಿ, ಕು|ಜಿತೀಕ್ಷ ನಿರೂಪಿಸಿ ಧನ್ಯವಾದವಿತ್ತರು.

Related posts

ಶ್ರೀ.ಕ್ಷೇ.ಧ.ಗ್ರಾ. ಯೋಜನೆಯ ಕಳೆಂಜ ಬಿ ಕಾರ್ಯಕ್ಷೇತ್ರದ ಸ್ಪಂದನ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ

Suddi Udaya

ಉಜಿರೆ :”ಸಮಾ‍ಜದಲ್ಲಿ ಮನಶ್ಶಾಸ್ತ್ರಜ್ಞರ ಪಾತ್ರ ಮತ್ತು ಸಾಮಾಜಿಕ ಕಾಳಜಿ” ವಿಷಯದ ಕುರಿತು ಸೆಮಿನಾರ್

Suddi Udaya

ಬೆಳ್ತಂಗಡಿ ಎಸ್‌ಡಿಪಿಐ ವತಿಯಿಂದ ಗ್ರಾ.ಪಂ. ಉಪಚುನಾವಣೆ ಪೂರ್ವತಯಾರಿ ಸಭೆ

Suddi Udaya

ಕೇಂದ್ರ ಸಚಿವರಾಗಿ ಮೊದಲ ಬಾರಿಗೆ ಬೆಳ್ತಂಗಡಿಗೆ ಆಗಮಿಸಿದ ವಿ.ಸೋಮಣ್ಣರವರಿಗೆ ಬಿಜೆಪಿಯಿಂದ ಅದ್ದೂರಿ ಸ್ವಾಗತ:

Suddi Udaya

ಧರ್ಮಸ್ಥಳ “ರಂಗಶಿವ”ಬಳಗದಿಂದ ಮಕ್ಕಳ ರಂಗ ಶಿಬಿರ “ನಲಿಯೋಣ ಬಾ- 2023”

Suddi Udaya

ಶಿಶಿಲ ಶಿವಕೀರ್ತಿ ನಿಲಯದಲ್ಲಿ ಹನುಮ ಜಯಂತಿ

Suddi Udaya
error: Content is protected !!