
ಬೆಳ್ತಂಗಡಿ:ಧಕ್ಷಿಣ ಕನ್ನಡ ಆರ್ಟ್ ಮತ್ತು ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ವತಿಯಿಂದ ಪುತ್ತೂರಿನಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್- 2024ರ ಕಟಾ ಮತ್ತು ಕುಮಿಟೆ ವಿಭಾಗದಲ್ಲಿ ಇಶಿತ ಬೆಳ್ತಂಗಡಿಯವರು ಪ್ರಥಮ ಹಾಗೂ ದ್ವೀತಿಯ ಸ್ಥಾನವನ್ನು ಪಡೆದಿದ್ದಾರೆ.
ಉಜಿರೆ ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ 6ನೇ ತರಗತಿ ವಿಧ್ಯಾರ್ಥಿನಿಯಾಗಿರುವ ಇವರಿಗೆ ಅಶೋಕ್ ಆಚಾರ್ಯ ಕರಾಟೆ ತರಭೇತಿ ನೀಡುತ್ತಿದ್ದಾರೆ.ಇವರು ಬೆಳ್ತಂಗಡಿ ಮೈತ್ರಿ ಎಂಟರ್ ಪ್ರೈಸಸ್ ಪ್ರೀತಿ ಮತ್ತು ರತೀಶ್ ರಾವ್ ದಂಪತಿ ಪುತ್ರಿ.