28.3 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ನಾರಾವಿ ಸಂತ ಅಂತೋನಿ ಶಿಕ್ಷಣ ಸಂಸ್ಥೆಯಿಂದ ‘ಮಕ್ಕಳ ದಿನ -ಕ್ರೀಡಾಸಂಗಮ 2024’ ಆಚರಣೆ

ನಾರಾವಿ : ಸಂತ ಅಂತೋನಿ ಶಿಕ್ಷಣ ಸಂಸ್ಥೆಗಳು ನಾರಾವಿ ಒಟ್ಟು ಸೇರಿ ನ. 14ರಂದು ‘ಮಕ್ಕಳ ದಿನ -ಕ್ರೀಡಾಸಂಗಮ 2024’ ಎಂಬ ವಿಶಿಷ್ಟ ರೀತಿಯ ಕಾರ್ಯಕ್ರಮವನ್ನು ತುಂಬಾ ಅದ್ದೂರಿಯಿಂದ ಆಚರಿಸಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತಾಡಿದ ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮವಾದ ಡ್ರಾಮಾ ಜೂನಿಯರ್ಸ್ ನ ಫೈನಲಿಸ್ಟ್ ಪುಟಾಣಿ ಅಪೂರ್ವ ಮಾಳ ಇವರು “ಮಕ್ಕಳು ನಿಂತ ನೀರಾಗಬಾರದು. ತಂದೆ ತಾಯಿಗಳು ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ನನ್ನ ಸಾಧನೆಗೆ ನನ್ನ ಹೆತ್ತವರೇ ಸಂಪೂರ್ಣ ಕಾರಣಕರ್ತರು” ಎಂದರು.


ಅಧ್ಯಕ್ಷತೆಯನ್ನು ವಹಿಸಿದ್ದ ನಾರಾವಿ ಸಂತ ಅಂತೋನಿ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂ| ಸ್ವಾ ಜೆರೋಮ್ ಡಿ’ಸೋಜಾ “ಕ್ರೀಡೆಯಿಂದ ಮಾತ್ರ ಒಗ್ಗಟ್ಟು ಮೂಡಲು ಸಾಧ್ಯವಿದೆ” ಎಂದರು.


ವೇದಿಕೆಯಲ್ಲಿ ಸಂತ ಅಂತೋನಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ. ಆಲ್ವಿನ್ ಸೆರಾವೋ, ನಾರಾವಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಸಂಜಯ್ ಮಿರಾಂದ ಹಾಗೂ ಕಾರ್ಯದರ್ಶಿಯಾದ ಶ್ರೀಮತಿ ಎವ್ಜಿನ್ ರೋಡ್ರಿಗಸ್, ನಾರಾವಿ ಪ್ರೌಢಶಾಲೆ ನಾರಾವಿ ಇಲ್ಲಿನ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲಿಲ್ಲಿ ಪಾಯ್ಸ್, ಸಂತ ಪಾವ್ಲರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸೋಫಿಯಾ ಫೆರ್ನಾಂಡಿಸ್, ಸಂತ ಪಾವ್ಲರ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯನಿ ಸಿಸ್ಟರ್ ಸುಪ್ರಿತಾ ಕ್ರಾಸ್ತಾ ಉಪಸ್ಥಿತರಿದ್ದರು. ಸಂತ ಅಂತೋನಿ ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಅವಿಲ್ ಮೋರಸ್ ತಮ್ಮ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿದರು.


ಸಂತ ಅಂತೋನಿ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರದೀಪ್ ಬಿ ಇವರ ನಿರ್ದೇಶನದಲ್ಲಿ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳಿಗೆ ವಿಶೇಷ ರೀತಿಯ ಬೇರೆ ಬೇರೆ ಆಟೋಟ ಸ್ಪರ್ಧೆಗಳು ನಡೆದವು. ಪ್ರೊ. ಕಬಡ್ಡಿ ಮಾದರಿಯಲ್ಲಿ ನಡೆದ ಕಬ್ಬಡಿ ಪಂದ್ಯಾಟ ಹಾಗೂ ತ್ರೋಬಾಲ್ ಪಂದ್ಯಾಟವು ಎಲ್ಲರ ಗಮನವನ್ನು ಸೆಳೆಯಿತು. ಸಂತ ಪಾವ್ಲರ ಆಂಗ್ಲ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಮಹೇಶ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಪ್ರದೀಪ್ ಬಿ ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದವಿತ್ತರು.

Related posts

ವೇಣೂರು: ಅನಾಥರಾಗಿ ತಿರುಗಾಡುತ್ತಿರುವ ವಯೋವೃದ್ಧ: ವಾರಸುದಾರರ ಪತ್ತೆಗಾಗಿ ಮನವಿ

Suddi Udaya

ಮರೋಡಿ: ನ್ಯುಮೋನಿಯದಿಂದ 7ವರ್ಷದ ಬಾಲಕಿ ನಿಧನ

Suddi Udaya

ರೆಖ್ಯ: ಕಾಂಗ್ರೆಸ್ ಮುಖಂಡ ಸುನಿಲ್ ಕೋಟಿಮಾರ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆ

Suddi Udaya

ಸಾಂಸ್ಕೃತಿಕ ಸ್ಪರ್ಧೆ: ಬೆಳ್ತಂಗಡಿ ವಾಣಿ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳಾದ ತೇಜಸ್ ಮತ್ತು ಸಾತ್ವಿಕ್ ಯಂ ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ಹೈದರಬಾದ್ ನಲ್ಲಿ ನಡೆದ ಕ್ಷೇತ್ರೀಯ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ: ಸುಲ್ಕೇರಿ ಶ್ರೀರಾಮ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ

Suddi Udaya

ಉಜಿರೆ: ಶ್ರೀ ವನದುರ್ಗಾ, ಶ್ರೀ ನಾಗಬ್ರಹ್ಮ ರಕ್ತೇಶ್ವರಿ ದೈವ ಮತ್ತು ಪರಿವಾರ ದೇವತೆಗಳ ವಾರ್ಷಿಕ ಆರಾಧನೆ, ನೂರಾರು ಭಕ್ತರು ಭಾಗಿ

Suddi Udaya
error: Content is protected !!