25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ: ಎಸ್‌ಡಿಎಂ ತಾಂತ್ರಿಕ ಶಿಕ್ಷಣ ಸಂಸ್ಥೆಯ ಪ್ರಥಮ ವರ್ಷದ ಬಿಇ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ

ಉಜಿರೆ: ಎಸ್‌ಡಿಎಂ ತಾಂತ್ರಿಕ ಶಿಕ್ಷಣ ಸಂಸ್ಥೆಯ ಪ್ರಥಮ ವರ್ಷದ ಬಿಇ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವು ನ.20 ರಂದು ಇಂದ್ರಪ್ರಸ್ಥ ಆಡಿಟೋರಿಯಂ ನಲ್ಲಿ ನಡೆಯಿತು.

ಎಸ್ ಡಿ ಎಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ದೀಪ ಪ್ರಜ್ವಲನೆಯನ್ನು ನೆರವೇರಿಸಿ ಮಾತನಾಡಿ, ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳು ನಿಮ್ಮ ಹಿನ್ನೆಲೆಯನ್ನು ಬಿಟ್ಟು, ಏಕ ಮನಸ್ಕರಾಗಿ, ಏಕ ಸಂಸ್ಕಾರವನ್ನು ಹೊಂದಿ, ಈ ಸಂಸ್ಥೆಗೆ ಹೊಂದಿಕೊಂಡು ಹೋಗುವಂತಹ ಅನಿವಾರ್ಯತೆ ಇದೆ. ಇಂಜಿನಿಯರಿಂಗ್ ಬಹಳ ಬೆಲೆ ಬಾಳುವಂತಹ ಕೋರ್ಸ್ ಆಗಿದ್ದು, ಕಷ್ಟ ಪಟ್ಟು ಓದುವಂತಹ ಜವಾಬ್ದಾರಿ ವಿದ್ಯಾರ್ಥಿಗಳಲ್ಲಿದೆ. ಸಂಸ್ಥೆಯಲ್ಲಿರುವಂತಹ ಪ್ರಯೋಗಾಲಯ ಹಾಗೂ ಗ್ರಂಥಾಲಯವನ್ನು ಸದುಪಯೋಗ ಪಡಿಸಿಕೊಳ್ಳುವುದರ ಮೂಲಕ ಪ್ರಾಯೋಗಿಕ ಕೌಶಲ್ಯವನ್ನು ಹಾಗೂ ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳಿ ಎಂದು ನೂತನ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಪ್ರಾಂಶುಪಾಲರಾದ ಡಾ. ಅಶೋಕ್ ಕುಮಾರ್ ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

ಡಾ. ವಿದ್ಯಾ ಕೆ. ಹಾಗೂ ನಿಶ್ಮಿತಾ ಎಂ. ನಿರೂಪಿಸಿದರು. ಗೌತಮಿ, ಕೀರ್ತನಾ ಪ್ರಾರ್ಥಿಸಿದರು. ಪ್ರಥಮ ವರ್ಷದ ಸಂಯೋಜಕ ಡಾ. ರವೀಶ್ ಪಡುಮಲೆ ವಂದಿಸಿದರು.

Related posts

ಯುವ ವೈಭವ: ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಯುವವಾಹಿನಿ ಬೆಳ್ತಂಗಡಿ ಘಟಕಕ್ಕೆ ಸಮಗ್ರ ಪ್ರಶಸ್ತಿ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಹಾಗೂ ಧಾರ್ಮಿಕ ಪರಿಷತ್ ರಾಜ್ಯ ಸದಸ್ಯೆ ಶ್ರೀಮತಿ ಮಲ್ಲಿಕಾ ಪ್ರಶಾಂತ್ ಪಕ್ಕಳ ಭೇಟಿ

Suddi Udaya

ಲಯನ್ ಎಂ. ಜಿ. ಶೆಟ್ಟಿಯವರಿಗೆ ಪ್ರತಿಷ್ಠಿತ ಎಮ್.ಜೆ.ಎಫ್ ಗೌರವ

Suddi Udaya

ಶಿಶಿಲದ ಜಿನ ಮಂದಿರದಲ್ಲಿ ಪಂಚಕಲ್ಯಾಣ : ಬಿಂಬವನ್ನು ತರುವಲ್ಲಿ ಸಹಕರಿಸಿದವರಿಗೆ ಅಭಿನಂದನೆ

Suddi Udaya

ಬೆಳ್ತಂಗಡಿ: ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೇಸಿಗೆ ಹಾಗೂ ಕ್ರೀಡಾ ಶಿಬಿರ ಉದ್ಘಾಟನೆ

Suddi Udaya

ಕಿಟ್ ಹಂಚುವ ವಿಚಾರದಲ್ಲಿ ಹೊಡೆದಾಟ: ಎರಡು ತಂಡಗಳಿಂದ ಪೊಲೀಸರಿಗೆ ದೂರು

Suddi Udaya
error: Content is protected !!