38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಮಚ್ಚಿನದಲ್ಲಿ ಗ್ರಾಮಮಟ್ಟದ ಬಾಲ ಮೇಳ ಕಾರ್ಯಕ್ರಮ

ಮಚ್ಚಿನ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಬೆಳ್ತಂಗಡಿ ಶಿಶು ಅಭಿವೃದ್ಧಿ ಯೋಜನೆ ಬೆಳ್ತಂಗಡಿ, ಗ್ರಾಮ ಪಂಚಾಯತ್ ಮಚ್ಚಿನ, ಸ್ತ್ರೀ ಶಕ್ತಿ ಗೊಂಚಲು ಮಚ್ಚಿನ ಇದರ ಆಶ್ರಯದಲ್ಲಿ ಗ್ರಾಮಮಟ್ಟದ ಬಾಲ ಮೇಳ ಕಾರ್ಯಕ್ರಮವು ಸಮುದಾಯ ಭವನ ಬಳ್ಳಮಂಜದಲ್ಲಿ ನ.21 ರಂದು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ನಾಯಕಿ ತನ್ವಿ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು. ಕರಾಯ ವಲಯದ ಮೇಲ್ವಿಚಾರಕಿ ಸುಮನ ಮಾತನಾಡಿ ಭಾರತದ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರು ಇವರ ಜನ್ಮ ದಿನದ ಅಂಗವಾಗಿ ಮಕ್ಕಳ ದಿನಾಚರಣೆ ಬಾಳ ಮೇಳ ಕಾರ್ಯಕ್ರಮ ಅವರ ಹುಟ್ಟು ಹಬ್ಬದ ನೆನಪಿಗಾಗಿ ಪ್ರತಿ ವರ್ಷ ನಡೆಸುತ್ತಾ ಬರುತ್ತಿದ್ದು. ಮಕ್ಕಳ ಪ್ರತಿಭೆಗಳನ್ನು ಹೊರ ತರಲು ಇಂತಹ ಸುವರ್ಣ ಅವಕಾಶವನ್ನು ಮಚ್ಚಿನ ಗ್ರಾಮ ಮಟ್ಟದ ಬಾಲ ಮೇಳ ಕಾರ್ಯಕ್ರಮದಲ್ಲಿ ದೊರಕಿರುವುದು ತುಂಬ ಸಂತೋಷದ ವಿಷಯ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಉತ್ತಮವಾಗಿ ಬೆಳೆಯಲು ಇಂತಹ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಲಿ ಸದಸ್ಯ ಪ್ರಮೋದ್ ಕುಮಾರ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗೌರಿಶಂಕರ್ , ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಸೋಮಾವತಿ, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ವಸಂತಿ ಲಕ್ಷ್ಮಣ್, ಮಚ್ಚಿನ ಪ್ರಾಥಮಿಕ ಆರೋಗ್ಯ ಲೋಲಾಕ್ಷಿ, ಜಯಲಕ್ಷ್ಮಿ, ಮೊರಾರ್ಜಿ ಶಾಲಾ ಶಿಕ್ಷಕಿ ಆಶಾ, ಮಚ್ಚಿನ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿ ಅಮಿತಾ ಪಾಲಡ್ಕ, ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಉಮಾದೇವಿ ಉಪಸ್ಥಿತರಿದ್ದರು.

ಮಚ್ಚಿನ ಗ್ರಾಮದ 8 ಅಂಗನವಾಡಿ ಕೇಂದ್ರಗಳ ಮಕ್ಕಳ ಛದ್ಮವೇಷ ಸ್ಪರ್ಧೆ, ಡ್ಯಾನ್ಸ್ ಹಾಗೂ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು, ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಅಂಗನವಾಡಿ ಕೇಂದ್ರಗಳಲ್ಲಿ ಸಮಗ್ರ ಬಹುಮಾನವನ್ನು ಪ್ರಥಮ ನೆತ್ತರ ಅಂಗನವಾಡಿ ಕೇಂದ್ರ ಹಾಗೂ ದ್ವಿತೀಯ ತಾರೆಮಾರು ಅಂಗನವಾಡಿ ಕೇಂದ್ರ ಪಡೆದುಕೊಂಡಿತ್ತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಚ್ಚಿನ ಅಂಗನವಾಡಿ ಶಾಲಾ ನಾಯಕಿ ತನ್ವಿ ಶೆಟ್ಟಿ ಮಾತನಾಡಿ ಭಾಗವಹಿಸಿದ ಮೈಟ್ ಅಂಗನವಾಡಿ ಪುಟಾನಿಗಳಿಗೆ ಶುಭ ಹಾರೈಸಿದರು.

ನೆತ್ತರ ಅಂಗನವಾಡಿ ಶಿಕ್ಷಕಿ ಗೀತಲತಾ ಸ್ವಾಗತಿಸಿದರು. ಸದಾಶಿವ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ತಾರೆಮಾರ್ ಅಂಗನವಾಡಿ ಶಿಕ್ಷಕಿ ಪುಷ್ಪ ವಂದಿಸಿದರು. ಅಂಗನವಾಡಿ ಕೇಂದ್ರಗಳ ಶಿಕ್ಷಕಿಯರಾದ ಪದ್ಮಪ್ರಿಯ ಮಚ್ಚಿನ, ಪುಷ್ಪ ತಾರೆಮಾರ್, ನವನೀತ ಕುತ್ತಿನ, ಮೀನಾ ಕಲ್ಲಗುಡ್ಡೆ , ರಚಿತಾ ಮುಡಿಪಿರೆ, ವೇದಾವತಿ ಪಲಡ್ಕ, ಶ್ರೀಮತಿ ಕುದ್ರಕ್ಕ ಹಾಗೂ ಅಂಗನವಾಡಿ ಸಹಾಯಕಿಯರು , ಮಕ್ಕಳ ಪೋಷಕರು ಸಹಕರಿಸಿದರು.

ವರದಿ. ಹರ್ಷ ಬಳ್ಳಮಂಜ

Related posts

ವಿದ್ವತ್ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ನೇತ್ರಾ ತಪಾಸಣಾ ಶಿಬಿರ

Suddi Udaya

ನಿಡ್ಲೆ , ಬೂಡುಜಾಲು ಗ್ರಾಮಸ್ಥರಿಂದ ರಸ್ತೆ ದುರಸ್ತಿ

Suddi Udaya

ಮುಂಡಾಜೆ: ಕೊಂಬಿನಡ್ಕ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

Suddi Udaya

ಪಡಂಗಡಿ ಕಾರ್ಯನ ಮುಟ್ಟಿಯವರಿಗೆ ಸಂತೋಷ್ ಕುಮಾರ್ ಜೈನ್ ರವರ ನೇತೃತ್ವದಲ್ಲಿ ದಿನಸಿ ಸಾಮಾಗ್ರಿ ವಿತರಣೆ

Suddi Udaya

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸ್ವಚ್ಚತಾ ಕಾರ್ಯ

Suddi Udaya

ಕರಾಡ ಬ್ರಾಹ್ಮಣ ಸಮಾಜದಿಂದ ಸಂಸ್ಕರಣೆ ಹಾಗೂ ನುಡಿನಮನ ಕಾರ್ಯಕ್ರಮ

Suddi Udaya
error: Content is protected !!