April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಶ್ರೀ ಕ್ಷೇ.ಧ.ಗ್ರಾ. ಯೋಜನೆ; ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಉಜಿರೆ ವಲಯ ಹಾಗೂ ಧರ್ಮಸ್ಥಳ ವಲಯದ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ

ಉಜಿರೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಬೆಳ್ತಂಗಡಿ ತಾಲೂಕು , ಉಜಿರೆ ವಲಯ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಉಜಿರೆ, ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ ಉಜಿರೆ, ಪ್ರಗತಿ ಬಂಧು ಒಕ್ಕೂಟಗಳು ಉಜಿರೆ ವಲಯದ ಸಂಯುಕ್ತ ಆಶ್ರಯದಲ್ಲಿ, 40ನೇ ವಷ೯ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಉಜಿರೆ ವಲಯ ಹಾಗೂ ಧರ್ಮಸ್ಥಳ ವಲಯ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮವು ನ.22 ರಂದು ಉಜಿರೆ ಎಸ್.ಡಿ.ಎಂ. ಕಾಲೇಜು ಇಂದ್ರಪ್ರಸ್ಥ ಆಡಿಟೋರಿಯಂ ನಲ್ಲಿ ಜರುಗಿತು.

ಅಧ್ಯಕ್ಷತೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ವಹಿಸಿದರು. ಕಾರ್ಯಕ್ರಮವನ್ನು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರರು ಶರತ್ ಕೃಷ್ಣ ಪಡುವೆಟ್ನಾಯರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ರವರು ಮಂಜೂರಾತಿ ಪತ್ರ ಮತ್ತು ಸಲಕರಣೆಯನ್ನು ವಿತರಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅನಿಲ್ ಕುಮಾರ್ ಎಸ್‌.ಎಸ್‌. ಸಾಧಕರನ್ನು ಸನ್ಮಾನಿಸಿದರು.

ಮುಖ್ಯ ಅತಿಥಿಗಳಾಗಿ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಪ್ರಶಾಂತ್ ಜೈನ್, ಬೆಳ್ತಂಗಡಿ ಕೇಂದ್ರ ಒಕ್ಕೂಟ ಅಧ್ಯಕ್ಷ ಸೀತಾರಾಮ್ ಆ‌ರ್ ಉಪಸ್ಥಿತರಿದ್ದರು.

ಈ ವೇಳೆ 17 ಒಕ್ಕೂಟಗಳಿಂದ ಜವಾಬ್ದಾರಿಯನ್ನು (ನಿಕಟಪೂರ್ವ ಪದಾಧಿಕಾರಿಗಳಿಂದ ನೂತನ ಪದಾಧಿಕಾರಿಗಳಿಗೆ ) ಡಾ . ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಹಸ್ತಾಂತರಿಸಲಾಯಿತು. ಪೂಜಾ ಸಮಿತಿಯಿಂದ ಕೇಂದ್ರ ಒಕ್ಕೂಟದಿಂದ ಹಾಗೂ ಸಂಘ ಸಂಸ್ಥೆಗಳಿಂದ ಡಾ| ಡಿ. ಹೆಗ್ಗಡೆಯವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸತ್ಯನಾರಾಯಣ ಪೂಜಾ ಸಮಿತಿ ಪದಾಧಿಕಾರಿಗಳು, ಉಜಿರೆ ಧರ್ಮಸ್ಥಳ ವಲಯದ ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಯೋಜನಾಧಿಕಾರಿಗಳು, ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಉಜಿರೆ, ಧರ್ಮಸ್ಥಳ ವಲಯದ ನಿಕಟಪೂರ್ವ ಹಾಗೂ ನೂತನ ಅಧ್ಯಕ್ಷರು ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಲತಾ ಪ್ರಾರ್ಥಿಸಿ, ಯೋಜನಾಧಿಕಾರಿ ಸುರೇಂದ್ರ ಸ್ವಾಗತಿಸಿ, ಉಜಿರೆ ಮೇಲ್ವಿಚಾರಕಿ ವನಿತಾ ವರದಿ ವಾಚಿಸಿದರು., ಕೃಷಿ ನಿರ್ದೇಶಕ ರಾಮ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Related posts

ಬೆಳ್ತಂಗಡಿ: ಬಜರಂಗದಳ ಸಂಘಟನೆ ಹಾಗೂ ಶರಣ್ ಪಂಪುವೆಲ್ ರವರ ಮೇಲೆ ಅವಮಾನಕರ ಪೋಸ್ಟ್ ಮತ್ತು ವಿಡೀಯೋ ಹಾಕಿರುವ ಬಗ್ಗೆ ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರಿಗೆ ಮನವಿ

Suddi Udaya

ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನಲ್ಲಿ ಕೆಸರಲ್ಲಿ ಕಸರತ್ತು – ವಿಶೇಷ ಸ್ಪರ್ಧೆಗಳ ಆಯೋಜನೆ

Suddi Udaya

ಧರ್ಮಸ್ಥಳ ಗ್ರಾ.ಪಂ. ಯಿಂದ ಏಕಬಳಕೆ ಪ್ಲಾಸ್ಟಿಕ್ ನಿಷೇಧವಾಗಿರುವ ಬಗ್ಗೆ ಪರಿಸರ ಅಧಿಕಾರಿಯವರ ಕಾರ್ಯಾಚರಣೆ ಸಭೆ

Suddi Udaya

ವಾಣಿ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾಗಿ ಮೋಹನ್ ಗೌಡ, ಉಪಾಧ್ಯಕ್ಷರಾಗಿ ಶ್ರೀಮತಿ ಲತಾ ಶೆಟ್ಟಿ ಆಯ್ಕೆ

Suddi Udaya

ಅಪಾಯದಂಚಿನಲ್ಲಿರುವ ತೋಟತ್ತಾಡಿಯ ಸೇತುವೆ: ದುರಸ್ತಿಗೊಳಿಸುವಂತೆ ಗ್ರಾಮಸ್ಥರ ಆಗ್ರಹ

Suddi Udaya

ಹೆದ್ದಾರಿ ಅವಾಂತರ ಕೈಗಾರಿಕಾ ವಸಾಹತಿನ ಉದ್ಯಮಿಗಳ ಪ್ರತಿಭಟನೆ: ತಾ.ಪಂಕಾರ್ಯನಿರ್ವಹಣಾಧಿಕಾರಿ ಭೇಟಿ

Suddi Udaya
error: Content is protected !!