ಧರ್ಮಸ್ಥಳ: ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನ ನಿತ್ಯಾನಂದ ನಗರ, ಧರ್ಮಸ್ಥಳ ಇದರ ಶಾಖಾ ಮಠ ಉತ್ತರಖಂಡ ಹರಿದ್ವಾರ ಸಾಧನಾ ಕುಠಿರದ 8 ನೇ ವಾರ್ಷಿಕೋತ್ಸವ ಮಹಾ ಸಂಸ್ಥಾನದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ನ. 25 ರಂದು ವೈದಿಕ ವಿಧಿ ವಿಧಾನಗಳೊಂದಿಗೆ ನಡೆಯಿತು.
ಇದರ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಹಂತ್ ವಿದ್ಯಾನಂದ ಸರಸ್ವತಿ ಮಹಾರಾಜ್, ಮಹಾಮಂಡಲೇಶ್ವರ 1008 ಶ್ರೀ ಸ್ವಾಮಿ ಆನಂದ ಚೈತನ್ಯ ಸರಸ್ವತಿ ಮಹಾರಾಜ್, ಮಹಾಮಂಡಲೇಶ್ವರ 1008 ಶ್ರೀ ಸ್ವಾಮಿ ರಾಮೇಶ್ವರಾನಂದ ಸರಸ್ವತಿ ಮಹಾರಾಜ್, ಮಹಾಮಂಡಲೇಶ್ವರ 1008 ಶ್ರೀ ಸ್ವಾಮಿ ಶಿವ ಪ್ರೇಮಾನಂದಪುರಿ ಮಹಾರಾಜ್, ಮಹಾಮಂಡಲೇಶ್ವರ್ 1008 ಶ್ರೀ ಸ್ವಾಮಿ ಲಲಿತಾನಂದ ಗಿರಿ ಮಹಾರಾಜ್, ಶ್ರೀ ಮಹಂತ್ ದೇವಾನಂದ ಸರಸ್ಕೃತಿ ಮಹಾರಾಜ್, ಶ್ರೀ ಮಹಂತ್ ಇಂದ್ರಾನಂದ ಸರಸ್ವತಿ, ಮಹಂತ್ ಮಾಧವಾನಂದ ಸರಸ್ಕೃತಿ, ಮಹಂತ್ ಜ್ಞಾನಪ್ರೇಮಾನಂದ ಪುರಿ ಮಹಾರಾಜ್, ಕರ್ನಾಟಕ ಸರಕಾರದ ಮೀನುಗಾರಿಕೆ ಸಚಿವ ಮಂಕಾಳ್ ಎಸ್. ವೈದ್ಯ, ಹರಿದ್ವಾರ ಶಾಸಕ ಮದನ್ ಕೌಶಿಕ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಮಂಗಳೂರು ಕಾರ್ಪೋರೇಟರ್ ಕಿರಣ್ ಕುಮಾರ್, ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ಅಧ್ಯಕ್ಷ ಪಿ. ಕೆ. ರಾಜು ಪೂಜಾರಿ ಕಾಶಿಪಟ್ನ, ಬೆಯರಿನ್ ಬಿಲ್ಲವ ಸಂಘದ ಅಧ್ಯಕ್ಷ ಹರೀಶ್, ಭಟ್ಕಳದ ಕೃಷ್ಣ ನಾಯ್ಕ, ಗೋವಿಂದ ನಾಯ್, ಈಶ್ವರ ನಾಯ್, ಗಣೇಶ್ ನೇತ್ರಾಣಿ, ಗಂಗಾಧರ್ ಬೆಂಗಳೂರು, ರಮೇಶ್ ಸಾಲಿಯಾನ್ ದೆಹಲಿ, ಜೀತೇಶ್ ಉಡುಪಿ, ಮಠದ ಟ್ರಷ್ಟಿ ತುಕಾರಾಮ ಸಾಲಿಯಾನ್, ರವೀಂದ್ರ ಪೂಜಾರಿ ಆರ್ಲ ಮೊದಲಾದವರು ಹಾಜರಿದ್ದರು. ಬಳಿಕ ಸ್ವಾಮಿಜಿಯವರ ನೇತೃತ್ವದಲ್ಲಿ ಪವಿತ್ರ ಗಂಗಾ ನದಿಯಲ್ಲಿ ಗಂಗಾ ಸ್ನಾನ, ಗಂಗಾ ಆರತಿ ನಡೆಯಿತು.