ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಅಂಗವಾಗಿ ಶ್ರೀ ಧ.ಮಂ. ಪ್ರೌಢ ಶಾಲಾ ವಠಾರದಲ್ಲಿ ಏಪ೯ಡಿಸಲಾದ ರಾಜ್ಯ ಮಟ್ಟದ ವಸ್ತು ಪ್ರದರ್ಶನದ ಉದ್ಘಾಟನೆಯು ನ.26 ರಂದು ಜರುಗಿತು.
ರಾಜ್ಯ ಮಟ್ಟದ ವಸ್ತು ಪ್ರದರ್ಶನವನ್ನು ಯೂನೆಸೆಫ್ ಹೈದರಾಬಾದ್ ಮುಖ್ಯಸ್ಥರಾದ ಡಾ. ಝೆಲಾಲೆಮ್ ಬಿರಹಾನು ಟಾಫ್ಸಿ ಉದ್ಘಾಟನೆ ನೆರವೇರಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ದೀಪ ಬೆಳಗಿಸಿದರು.
ಈ ಸಂದರ್ಭದಲ್ಲಿ ಯೋಜನೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್, ಹಿರಿಯರಾದ ಎಂ.ಜಿ ಶೆಟ್ಟಿ, ರಾಮಕೃಷ್ಣ ಗೌಡ, ವೀರೂ ಶೆಟ್ಟಿ, ಡಾ. ಕುಮಾರ್ ಹೆಗ್ಡೆ, ಡಾ. ದಿವಾ ಕೊಕ್ಕಡ, ಎಂಡಿಎಂ ಆಸ್ಪತ್ರೆಯ ಜನಾರ್ದನ,
ಡಾ.ಜಯಕೀತಿ೯ ಜೈನ್, ಕನಾ೯ಟಕ ಬ್ಯಾಂಕ್ ವೆಂಕಟೇಶ್ವರನ್, ಅಂಚೆ ಅಧೀಕ್ಷಕ ಹರೀಶ್, ವೆಂಕಟೇಶ ಅರಳಿಕಟ್ಟೆ, ನಿರ್ದೇಶಕ ಆನಂದ್ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು. ಉಜಿರೆ ಕಾಲೇಜನ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ಭಟ್ ಕಾರ್ಯಕ್ರಮ ನಿರೂಪಿಸಿದರು.