ಬೆಂಗಳೂರು: ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘ ಬೆಂಗಳೂರು ವತಿಯಿಂದ ಪಂಚಾಯತ್ ನೌಕರರ ಮೂಲ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೆಂಗಳೂರು ಫ್ರೀಡಂ ಪಾರ್ಕ್ ನಲ್ಲಿ ಅನಿರ್ದಿಷ್ಟಾವಧಿ ಬೃಹತ್ ಪ್ರತಿಭಟನೆಯು ನ. 27 ರಂದು ಪ್ರಾರಂಭಗೊಂಡಿತು.
ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯತ್ ಬಿಲ್ ಕಲೇಕ್ಟರ್, ಕ್ಲರ್ಕ್ / ಕ್ಲರ್ಕ್ ಕಮ್ ಡಿಇಓ, ಡಾಟ ಎಂಟ್ರಿ ಅಪರೇಟರ್ ಹುದ್ದೆಗಳನ್ನು ಸಿ ಗ್ರೇಡ್‌ಗೆ, ವಾಟರ್ ಮ್ಯಾನ್, ಶುಚಿತ್ವ ನೌಕರ, ಅಟೆಂಡರ್ ಹುದ್ದೆಗಳನ್ನು ಡಿ ಗ್ರೇಡ್‌ಗೆ ಮೇಲ್ದರ್ಜೆಗೇರಿಸಿ, ಸಿ ಮತ್ತು ಡಿ ಗ್ರೇಡ್ ವೇತನ ಶ್ರೇಣಿ ನಿಗಧಿಪಡಿಸಿ, ಸಿ ಮತ್ತು ಡಿ ದರ್ಜೆಯ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿದ್ದರು.
ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮ ಪಂಚಾಯತ್ ನೌಕರರು ಭಾಗಿಯಾದರು.