
ಶಿರ್ಲಾಲು ಗ್ರಾಮದ ನಾಪುದಡಿ ನಿವಾಸಿ, ಕೃಷಿಕ ಶಿವಪ್ಪ ಪೂಜಾರಿ (80ವ) ರವರು ವಯೋಸಹಜ ಅಲ್ಪಕಾಲದ ಅಸೌಖ್ಯದಿಂದ ನ26 ರಂದು ಸ್ವಗೃಹದಲ್ಲಿ ನಿಧನರಾದರು.
ಇವರು ದೈವದ ಆರಾಧನೆಯಲ್ಲಿ ತೊಡಗಿಸಿಕೊಂಡು, ಪುರುಷರಾಯ ಬೈರವಕಲ್ಲು ನೇಮೋತ್ಸವದ ಜವಾಬ್ದಾರಿ ವಹಿಸಿ ಕೆಲಸ ಮಾಡುತ್ತಿದ್ದರು. ಸುಗ್ಗಿಯ ಹುಣ್ಣಿಮೆಯ ಪುರುಷರ ಕಟ್ಟುವುದರಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಮೃತರು ಪತ್ನಿ ಚಿಕ್ಕಮ್ಮ,ಒರ್ವ ಪುತ್ರ, 5 ಮಂದಿ ಪುತ್ರರನ್ನು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.