September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ವೇಣೂರು ಸ. ಪ.ಪೂ. ಕಾಲೇಜಿಗೆ ಹಳೆವಿದ್ಯಾರ್ಥಿಗಳಿಂದ ಹೊಸ ಪ್ರೊಜೆಕ್ಟರ್ ಕೊಡುಗೆ

ವೇಣೂರು ಸರಕಾರಿ ಪದವಿ ಪೂರ್ವ ಕಾಲೇಜು ಇಲ್ಲಿನ 1999-2001 ಸಾಲಿನಲ್ಲಿ ಪಿಯುಸಿ ವ್ಯಾಸಂಗ ಮಾಡಿದ ಹಳೆ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದ ತರಗತಿ ಕೊಠಡಿಗೆ ಕೊಡುಗೆಯಾಗಿ ನೀಡಿದ ಹೊಸ ಪ್ರೊಜೆಕ್ಟ್ಟರನ್ನು ಕಾಲೇಜಿನ ವಾರ್ಷಿಕೋತ್ಸವದ ದಿನ ಕಾಲೇಜಿನ ಪ್ರಾಚಾರ್ಯರು, ಮುಖ್ಯ ಅತಿಥಿಗಳು, ಉಪನ್ಯಾಸಕ ವೃಂದದವರು , ವಿದ್ಯಾರ್ಥಿಗಳ ಸಮ್ಮುಖದಲ್ಲಿ ಹಳೆ ವಿದ್ಯಾರ್ಥಿಗಳಾದ ನವೀನ್ ಪೂಜಾರಿ ಪಚ್ಚೆರಿ, ಜಗನ್ನಾಥ ದೇವಾಡಿಗ ವೇಣೂರು, ಲೋಕೇಶ್ ಪೂಜಾರಿ ಗುಂಡೂರಿ, ಶ್ರೀಮತಿ ವೀಣಾ ಎಸ್ ಹೆಗ್ಡೆ ಕಾರ್ಕಳ ರವರು ಅನಾವರಣಗೊಳಿಸಿದರು.


ಸಂಸ್ಥೆಯ ಪ್ರಾಚಾರ್ಯರಾದ ಗಂಗಾಧರ್ ಹಳೆ ವಿದ್ಯಾರ್ಥಿಗಳು ನೀಡಿದ ಕೊಡುಗೆಯನ್ನು ಸ್ಮರಿಸುತ್ತಾ ವಿಜ್ಞಾನ ವಿಭಾಗದ ಪ್ರಸಕ್ತ ಹಾಗೂ ಮುಂದೆ ವ್ಯಾಸಾಂಗ ಮಾಡಲಿರುವ ಅಸಂಖ್ಯಾತ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗೆ ಅನುಕೂಲವಾಗಲಿದೆ ಎಂದರು.


ಸಮಾರಂಭದಲ್ಲಿ ಪ್ರೊಜೆಕ್ಟರ್ ಕೊಡುಗೆ ನೀಡಿದ ಹಳೆ ವಿದ್ಯಾರ್ಥಿಗಳಿಗೆ ವಾರ್ಷಿಕೋತ್ಸವ ಸಮಾರಂಭದಲ್ಲಿ ಕಾಲೇಜಿನ ವತಿಯಿಂದ ಪ್ರಾಚಾರ್ಯರು, ಅತಿಥಿಗಳು ಶಾಲು ಹೊದಿಸಿ ಅಭಿನಂದಿಸಿದರು.
ಹಳೆ ವಿದ್ಯಾರ್ಥಿಗಳ ಪರವಾಗಿ ಮಾತನಾಡಿದ ಜಗನ್ನಾಥ ದೇವಾಡಿಗ ಈ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮುಗಿಸಿ 23 ವರ್ಷಗಳ ನಂತರ ನಾವೆಲ್ಲ ಹಳೆ ವಿದ್ಯಾರ್ಥಿಗಳು ಒಟ್ಟು ಸೇರಿ ಸಂಸ್ಥೆಗೆ ಏನಾದರು ನೀಡಬೇಕೆಂದು ಆಲೋಚಿಸಿ ವಿದ್ಯಾರ್ಥಿಗಳಿಗೆ ಅವರ ವಿದ್ಯಾರ್ಜನೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರೊಜೆಕ್ಟರ್ ರನ್ನು ಕೊಡುಗೆಯಾಗಿ ನೀಡಿರುತ್ತೇವೆ. ಸಹಕಾರ ನೀಡಿದ ನಮ್ಮ ಸಹಪಾಠಿಗಳಾದ ಮಹಮ್ಮದ್ ಶಬ್ಬೀರ್ ದುಬೈ ವೇಣೂರು, ಶ್ರೀಮತಿ ಸುಜಾತ ಆಸ್ಟ್ರೇಲಿಯಾ , ಶ್ರೀಮತಿ ಅರ್ಚನಾ ಅನೂಪ್ ಶೆಟ್ಟಿ ಮಂಗಳೂರು, ರಾಜೇಶ್ ಪೈ ವೇಣೂರು, ಶ್ರೀಮತಿ ದಿವ್ಯ ಪಿ ರೈ ಪುತ್ತೂರು, ಶ್ರೀಮತಿ ಕುಶಲತಾ ಮಂಗಳೂರು, ಶ್ರೀಮತಿ ಪೂರ್ಣಿಮಾ ಮಡಂತ್ಯಾರ್, ಶ್ರೀಮತಿ ಶ್ಯಾಮಲಾ ಅಂಡಿಂಜೆ, ಸುಧಾಕರ ಕುಲಾಲ್ ಪೆರ್ಮುಡ, ಶ್ರೀಮತಿ ಜಯಶ್ರೀ ಸಾಂಗ್ಲಿ ಯವರಿಗೆ ಕೃತಜ್ಞತೆ ಸಲ್ಲಿಸಿದರು.

Related posts

ವೆನ್ಲಾಕ್ ಮತ್ತು ಲೇಡಿಗೋಷನ್ ಆಸ್ಪತ್ರೆಯ 175 ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವಿರೇಂದ್ರ ಹೆಗ್ಗಡೆಯವರನ್ನು ಭೇಟಿಯಾದ ವೆನ್ಲಾಕ್ ರಕ್ಷಾ ಸಮಿತಿ

Suddi Udaya

ಪರಸ್ಪರ ಯುವಕ ಮಂಡಲ ಈದು-ನಾರಾವಿ ನೇತೃತ್ವದಲ್ಲಿ ನಡೆಯುವ ಮಹಾಚಂಡಿಕಾ ಯಾಗದ ಪೋಸ್ಟರ್ ಬಿಡುಗಡೆ

Suddi Udaya

ಖ್ಯಾತ ಹೃದ್ರೋಗ ತಜ್ಞ ಡಾ. ರಾಮಯ್ಯ ಗೌಡ ದಂಪತಿ ಉಜಿರೆಯ ಎಸ್‌ಡಿಎಂ ಆಸ್ಪತ್ರೆಗೆ ಭೇಟಿ

Suddi Udaya

ಕನ್ಯಾಡಿ I ಗ್ರಾಮದ ಚೆನ್ನಲ್ಲಿಕೆ ಮನೆಯ ಸಂಜೀವ ನಾಯ್ಕ್ ನಿಧನ

Suddi Udaya

ಎಕ್ಸೆಲ್ ಕಾಲೇಜಿನಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ

Suddi Udaya

ಬಳಂಜ ಸರ್ವೋದಯ ಫ್ರೆಂಡ್ಸ್ ಅಟ್ಲಾಜೆ ಇದರ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ

Suddi Udaya
error: Content is protected !!