ಬಾರ್ಯ: ಸರಳಿಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಬ್ಬ ಆಚರಣೆ ಮಾಡಲಾಯಿತು.
ಅಧ್ಯಕ್ಷತೆಯನ್ನು ಎಸ್‌ಡಿಎಂಸಿಯ ಅಧ್ಯಕ್ಷ ದಯಾನಂದರವರು ವಹಿಸಿದ್ದರು. ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಇನಾಸ್ ರೋಡ್ರಿಗಸ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಅಬ್ಬಾಸ್ ಸಲೀಂ, ಹಕ್ಕಿಂ ತನಲ್, ಯಯಾ, , ಶೌಕತ್ ಆಲಿ, ಮುಸ್ತಾಫ, ನೌಫಲ್, ಹಕ್ಕಿಂ ಸರಿ ಆದಂ, ಶ್ರೀಮತಿ ಸಕೀನಾ, ಶಾಲಾ ಮುಖ್ಯೋಪಾಧ್ಯಾಯರು ಶ್ರೀಮತಿ ಅನುರಾಧ, ಶಿಕ್ಷಕ ಅಭಿಷೇಕ್ ಹಾಗೂಕಾರ್ಯಕ್ರಮದ ಮೇಲ್ವಿಚಾರಣೆ ವಹಿಸಿದ್ದ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ರಾವ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಾಲೆಗೆ ಸುಣ್ಣ ಬಣ್ಣವನ್ನು ಸುಮಾರು ಒಂದುವರೆ ಲಕ್ಷ ವೆಚ್ಚದಲ್ಲಿ ಮಾಡಿಕೊಟ್ಟಂತಹ ದಾನಿ ವಜಿದ್ ಖಾನ್ ಬೆಂಗಳೂರು ಹಾಗೂ ಶಾಲೆಗೆ ದಾನ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು. ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವು ನೆರವೇರಿತು. ಎಲ್ಲಾ ಶಿಕ್ಷಕರು ಸಹಕರಿಸಿದರು. ಅಭಿಷೇಕ್ ಧನ್ಯವಾದವಿತ್ತರು.