ತೆಂಕಕಾರಂದೂರು :ಇಲ್ಲಿಯ ತಾರೆದೊಟ್ಟು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಮಕ್ಕಳ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ಮಕ್ಕಳು ಹಾಗು ಅತಿಥಿಗಳು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಸಭಾಧ್ಯಕ್ಷತೆಯನ್ನು ಪಂಚಾಯತ್ ಸದಸ್ಯೆ ಪದ್ಮಾವತಿ ವಹಿಸಿದ್ದರು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದ ನಂತರ ಕಳೆದ ಬಾರಿ ಶಾಲೆಗೆ ಸೇರಿದ ಮಕ್ಕಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಸಲಾಯಿತು. ಬಳಿಕ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ ಪುಟಾಣಿಗಳಿಗೆ ಬಹುಮಾನ ವಿತರಿಸಲಾಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿಯವರು ಮಾತನಾಡಿ ಬಾಲ್ಯದಲ್ಲಿಯೆ “ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳಿಸಿ ಮಕ್ಕಳನ್ನು ಸತ್ ಪ್ರಜೆಗಳನ್ನಾಗಿ ಮಾಡಿ” ಮಕ್ಕಳ ಮೊಬೈಲ್ ಬಳಕೆಯನ್ನು ಕಮ್ಮಿ ಮಾಡಿ ಉತ್ತಮ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಪೋಷಕರ ಕರ್ತವ್ಯ ಎಂದು ಹೇಳಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಪಂಚಾಯತ್ ಅಧ್ಯಕ್ಷೆ ಶೋಭ ಕುಲಾಲ್, ಪಂಚಾಯತ್ ಸದಸ್ಯರಾದ ಹೇಮಂತ್, ಮುಖ್ಯ ಅಥಿತಿಗಳಾದ ಅನಿಲ್ ಕುಮಾರ್ ಮಾಳಿಗೆ ಮನೆ, ರಾಮಚಂದ್ರ ರಾವ್ ಅಮಣ ಬೈಲು, ವಿಶ್ವನಾಥ ಲಿಂಗಾಯಿತ, ಚಂದ್ರ ಪೂಜಾರಿ, ಅಬ್ದುಲ್ ಖಾದರ್ ಕರಂಬಾರು, ಬಾಲವಿಕಾಸ ಸಮಿತಿ ಅಧ್ಯಕ್ಷೆ ವೇದಾವತಿ, ಸಲಹಾ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಉಪಸ್ಥಿತರಿದ್ದರು.
ಈ ಸಂದರ್ಭ ಚಾರ್ವಿ ಮಗುವಿನ ಹೆಸರಲ್ಲಿ ಪೋಷಕರು, ಹತ್ತು ಕುರ್ಚಿಗಳನ್ನು ಕೊಡುಗೆಯಾಗಿ ನೀಡಿದರು. ಕಾರ್ಯಕ್ರಮದಲ್ಲಿ ಮಕ್ಕಳ ಪೋಷಕರು, ತಾಯಂದಿರು, ಹಳೆ ವಿದ್ಯಾರ್ಥಿಗಳು, ಊರವರು, ಸ್ವಚ್ಛತಾ ಸೇನಾನಿಗಳಾದ ಭಾರತಿ ಮತ್ತು ಸುಮಲತಾ, ಸ್ತ್ರೀ ಶಕ್ತಿ, ಸಂಜೀವಿನಿ, ಸ್ವಸಹಾಯ ಸಂಘದವರು ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಮನಿತಾ ಸಿ ಶೆಟ್ಟಿ ನಿರೂಪಿಸಿ ವಂದಿಸಿದರು. ಸಹಾಯಕಿ ಸುನಂದ, ಉಷಾ ಬಿ, ಶಶಿಕುಮಾರಿ, ಸೋನಾ ಆಗಸ್ತಿನ್, ಅರುಣ ಮೆಹೆಂದಳೆ, ಉಷಾ ವಿ, ಶ್ರುತಿ ಎ ಸಹಕರಿಸಿದರು.