ಬೆಳ್ತಂಗಡಿ: ಸೈಂಟ್ ಮಿಲಾಗ್ರೀಸ್ ಕ್ರೆಡಿಟ್ ಸೌಹಾರ್ಧ ಕೋ ಆಫ್ (ಲಿ) ಕಾರವಾರ, ಬೆಳ್ತಂಗಡಿ ಶಾಖೆಯಿಂದ ಸಾಲ ಪಡೆದು ಮರು ಪಾವತಿಗಾಗಿ ನೀಡಿದ ಚೆಕ್ ಅಮಾನ್ಯಗೊಂಡ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ವಿಧಿಸಿ ಬೆಳ್ತಂಗಡಿ ಪ್ರಧಾನ ಹಿರಿಯ ಸಿವಿಲ್ ಮತ್ತು ಜೆ ಎಮ್ ಎಫ್ ಸಿ ನ್ಯಾಯಾಧೀಶರಾದ ಮನು ಬಿ ಕೆ ರವರು ತೀರ್ಪು ನೀಡಿದ್ದಾರೆ.
ಆರೋಪಿ ಲಾಯಿಲ ನಿವಾಸಿ ಸಾಜಿಲ್ ಎಂಬವರು ರೂ 3,12,533/- ವನ್ನು ಪರಿಹಾರವಾಗಿ ಹಾಗೂ ರೂ 3,000/- ವನ್ನು ದಂಡವನ್ನು ಪಿರ್ಯಾದಿದಾರರಿಗೆ ಪಾವತಿಸುವಂತೆ ತಪ್ಪಿದಲ್ಲಿ 6 ತಿಂಗಳ ಸಾದಾ ಶಿಕ್ಷೆ ಅನುಭವಿಸುವಂತೆ ತೀರ್ಪು ನೀಡಿದ್ದಾರೆ.
ಪಿರ್ಯಾದಿದಾರರ ಪರವಾಗಿ ನ್ಯಾಯಾವಾದಿಗಳಾದ ಸಂತೋಷ್ ಕುಮಾರ್ ಲಾಯಿಲ ಹಾಗೂ ಸುಶಾಂತ್ ಫೆರ್ನಾಂಡಿಸ್ ವಾದ ಮಂಡಿಸಿದ್ದರು..