24.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ಪಡಂಗಡಿಯಲ್ಲಿ ಎನ್.ಐ.ಎ ಅಧಿಕಾರಿಗಳ ಕಾರ್ಯಾಚರಣೆ: ನೌಷದ್ ತಂಗಿ, ತಾಯಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಚೈನೈನಿಂದ ಬಂದ ಡಿವೈಎಸ್ಪಿ ವಿಘ್ನೇಶ್ ನೇತೃತ್ವದ ತಂಡ

ಬೆಳ್ತಂಗಡಿ : ಬೆಳ್ಳಾರೆ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ನಾಪತ್ತೆಯಾಗಿರುವ ನೌಷದ್ (27) ಗಾಗಿ ಎರಡನೇ ಬಾರಿ ಎನ್.ಐ.ಎ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ದಾಳಿ ವೇಳೆ ನೌಷದ್ ಪತ್ನಿ, ತಂಗಿ, ತಾಯಿ ಮನೆಗೆ ಬೀಗ ಹಾಕಿ ತೆರಳಿದ್ದು. ಬಳಿಕ ತಂಗಿ, ತಾಯಿ ವಶಕ್ಕೆ ಪಡೆದುಕೊಂಡು ಮನೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದ್ದಾರೆ .

ಪಡಂಗಡಿ ಗ್ರಾಮದ ಪೊಯ್ಯಗುಡ್ಡೆ ಕಾಲೋನಿಯಲ್ಲಿರುವ ನೌಷದ್ ಮನೆಗೆ ಡಿ.5 ರಂದು ಬೆಳಗ್ಗೆ 5:30 ಗಂಟೆಗೆ ಚೆನೈನಿಂದ ಬಂದ ಎನ್.ಐ.ಎ ಡಿವೈಎಸ್ಪಿ ವಿಘ್ನೇಶ್ ಮತ್ತು ಅಧಿಕಾರಿಗಳ ತಂಡ ದಾಳಿ ಮಾಡಿತ್ತು. ಈ ದಾಳಿ ವೇಳೆ ಮನೆಗೆ ಬೀಗ ಹಾಕಿ ನೌಷದ್‌ ತಂಗಿ ತಫಾ ಮತ್ತು ತಾಯಿ ತುಲೈಕಾ ತೆರಳಿದ್ದರು.

ಸತತ ಐದು ಗಂಟೆಗಳ ಬಳಿಕ ಎನ್.ಐ.ಎ ಅಧಿಕಾರಿಗಳು ತಂಗಿ ಮತ್ತು ತಾಯಿಯನ್ನು 12 ಗಂಟೆ ಸುಮಾರಿಗೆ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಮದಡ್ಕ ಮನೆಯೊಂದರಲ್ಲಿರುವ ಬಗ್ಗೆ ಮಾಹಿತಿ ಆಧಾರಿಸಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದುಕೊಂಡು ಇನೋವಾ ಕಾರಿನಲ್ಲಿ ನೌಷದ್ ಪೊಯ್ಯಗುಡ್ಡೆ ಮನೆಗೆ ಕರೆತಂದು ಬೀಗ ತೆರೆಸಿ ಮನೆಯೊಳಗೆ ಪರಿಶೀಲನೆ ನಡೆಸಿ, ವಿಚಾರಣೆ ನಡೆಸಿದ್ದಾರೆ.
ಎನ್.ಐ.ಎ ದಾಳಿ ಮುಕ್ತಾಯವಾಗಿದ್ದು ,ಮಹಜರು ಮಾಡಿ ಚೈನೈನಿಂದ ಬಂದ ಡಿವೈಎಸ್ಪಿ ವಿಘ್ನೇಶ್ ಮತ್ತು ಇತರ ಇಬ್ಬರು ಸಿಬ್ಬಂದಿಗಳು ಸ್ಥಳದಿಂದ ತೆರಳಿದ್ದಾರೆ.

ಬೆಳ್ತಂಗಡಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಪಾಲಣಿವೇಲು, ಆನಂದ್ ಗೌಡ, ಸುಕನ್ಯ ಸಹಕರಿಸಿದ್ದರು.

Related posts

ಶಿರ್ಲಾಲು ಕೆನರಾ ಬ್ಯಾಂಕ್ ಸಹಭಾಗಿತ್ವದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

Suddi Udaya

ಬೆಳ್ತಂಗಡಿ ನಗರದ ಬೂತ್ ಸಂಖ್ಯೆ 105, 106 ಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ

Suddi Udaya

ಹೊಸಪಟ್ಣ: ಸಾಮೂಹಿಕ ಸತ್ಯನಾರಾಯಣ ಪೂಜೆ, ಧಾರ್ಮಿಕಸಭೆ

Suddi Udaya

ನಡ -ಕನ್ಯಾಡಿ ಕಾಂಗ್ರೆಸ್ ಗ್ರಾಮ ಸಮಿತಿ ರಚನೆ: ಅಧ್ಯಕ್ಷರಾಗಿ ಜಾಕೀರ್ ಹುಸೇನ್

Suddi Udaya

ಉರುವಾಲು ಕಾರಿಂಜ ಬಾಕಿಮಾರು ದೈವಸ್ಥಾನದ “ಕಾರಿಂಜ ಶ್ರೀ ಕಲ್ಕುಡ” ಧ್ವನಿ ಸುರುಳಿ ಬಿಡುಗಡೆ

Suddi Udaya

ಬೆಂದ್ರಾಳ ಸೈಂಟ್ ಸಾವಿಯೋ ಆಂಗ್ಲ ಮಾಧ್ಯಮ ಶಾಲೆಗೆ ಸತತ 11 ನೇ ಬಾರಿಗೆ ಶೇ. 100 ಫಲಿತಾಂಶ

Suddi Udaya
error: Content is protected !!