ಮಡಂತ್ಯಾರು: ಇಲ್ಲಿಯ ಬಳ್ಳಮಂಜ ಹೋಗುವ ರಸ್ತೆಯು ತೀರ ಹದಗೆಟ್ಟಿದ್ದು ದುರಸ್ತಿಗೊಳಿಸುವಂತೆ ಆಟೋ ಚಾಲಕ ಮಾಲಕರ ಸಂಘದಿಂದ ಒತ್ತಾಯಿಸಿದ್ದಾರೆ.
ಬಳ್ಳಮಂಜ ಶ್ರೀ ಅನಂತೇಶ್ವರ ದೇವರ ಜಾತ್ರಾ ಮಹೋತ್ಸವವು ಡಿ. 6,7,8.ರಂದು ನಡೆಯಲಿದ್ದು ಹೆಚ್ಚಿನ ಭಕ್ತರು ಬರುವುದರಿಂದ ಈ ರಸ್ತೆಯಲ್ಲಿ ಹಾಗೂ ರಸ್ತೆಯ ತಿರುವಿನಲ್ಲಿ ಗುಂಡಿ ಬಿದ್ದು ಹಾಗೂ ಪೊದೆ, ಮರಗಿಡಗಳು ರಸ್ತೆಗೆ ಬಾಗಿದ್ದು ಇದರಿಂದ ರಸ್ತೆಯ ತಿರುವಿನಲ್ಲಿ ಎದುರುಗಡೆ ಯಿಂದ ಬರುವ ವಾಹನಗಳು ಕಾಣುವುದಿಲ್ಲ. ಈ ಗುಂಡಿ ತಪ್ಪಿಸಲು ಹೋಗಿ ವಾಹನಗಳು ಆಪಘಾತ ಆಗುವ ಮುಂಚೆ ಈ ರಸ್ತೆಯನ್ನು ಸಂಬಂಧಪಟ್ಟ ಪಿಡಬ್ಲ್ಯೂಡಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಅಧಿಕಾರಿಗಳು ಆದಷ್ಟು ಬೇಗ ದುರಸ್ತಿಗೊಳಿಸುವಂತೆ, ಮಡಂತ್ಯಾರು ವಲಯ ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರು ವಿನಂತಿಸಿದ್ದಾರೆ.