ಮಚ್ಚಿನ: ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿಯ ಷಷ್ಠಿ ಮಹೋತ್ಸವದಂದು ಡಿ.6ರಂದು ಬೆಳಿಗ್ಗೆ ಶ್ರೀ ದೇವರ ಪೂಜೆಯೊಂದಿಗೆ ಕೊಪ್ಪರಿಗೆ ಮುಹೂರ್ತಗೊಂಡು ಭಕ್ತಾದಿಗಳಿಂದ ಅಂಗಪ್ರದಕ್ಷಣೆ ನಡೆಯಿತು.
ಶ್ರೀ ದೇವರಿಗೆ ನೂತನವಾಗಿ ನಿರ್ಮಿಸಿದ ಸ್ವರ್ಣಮಯ ಅಟ್ಟೆ ಪ್ರಭಾವಳಿಯ ಮೆರವಣಿಗೆಯು ಭಜನೆ, ಬ್ಯಾಂಡ್, ವಾಲಗದೊಂದಿಗೆ ಭವ್ಯ ಮೆರವಣಿಗೆ ಮಹಾದ್ವಾರದಿಂದ ದೇವಾಲಯದ ವರೆಗೆ ಸಾಗಿ ಶ್ರೀ ದೇವರಿಗೆ ಸ್ವರ್ಣ ಅಟ್ಟೆ ಪ್ರಭಾವಳಿ ಸಮರ್ಪಿಸಲಾಯಿತು.
ಮಧ್ಯಾಹ್ನ ಮಹಾಪೂಜೆ ಹಾಗೂ ಅನ್ನಸಂತರ್ಪಣೆಯು ನಡೆಯಿತು. ಈ ವೇಳೆ ದೇವಾಲಯದ ಆಡಳಿತ ಮೊಕ್ತೇಸರರಾದ ಹರ್ಷ ಸಂಪಿಗೆತ್ತಾಯ ಹಾಗೂ ಊರ ಪರ ಊರ ಭಕ್ತಾದಿಗಳು ಉಪಸ್ಥಿತರಿದ್ದರು.
ರಾತ್ರಿ ರಂಗ ಪೂಜೆ, ಪಂಚಮಿ ಉತ್ಸವ, ಅನ್ನ ಸಂತರ್ಪಣೆ ನಡೆಯಲಿದೆ.