ಬೆಳ್ತಂಗಡಿ: ಹಾವೇರಿಯಲ್ಲಿ ನಡೆದ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ವಿಭಾಗದ ರಾಜ್ಯಮಟ್ಟದ ಬಾಲಕರ ಟೆಕ್ವಾಂಡೋ ಸ್ಪರ್ಧೆಯಲ್ಲಿ ಮಾಜಿ ಶಾಸಕ ಕೀರ್ತಿಶೇಷ ದಿ.ವಸಂತ ಬಂಗೇರರವರ ಸ್ಥಾಪಕತ್ವದ ಶ್ರೀ ಗುರುದೇವ ಪದವಿಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿ ಕೀರ್ತೇಶ್ ತೃತೀಯ ಸ್ಥಾನ ಪಡೆದಿರುತ್ತಾರೆ.
ಕಾಲೇಜು ವಿದ್ಯಾರ್ಥಿ ನಾಯಕರಾಗಿರುವ ಕೀರ್ತೆಶ್ ಅವರ ಸಾಧನೆಗೆ ಕಾಲೇಜು ಆಡಳಿತ ಸಮಿತಿ ಅಭಿನಂದಿಸಿದೆ.