
ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜ ರವರ ಅಧ್ಯಕ್ಷತೆಯಲ್ಲಿ ನಾರಾವಿ ಗ್ರಾಮ ಪಂಚಾಯತ್ ಮಟ್ಟದ ಜನಸ್ಪಂದನಾ ಸಭೆ ಡಿ.7 ರಂದು ಶ್ರೀ ವೇಣುಗೋಪಾಲಕೃಷ್ಣ ಸಭಾಭವನ ಕಾಶಿಮಠ ನಾರಾವಿಯಲ್ಲಿ ಆರಂಭಗೊಂಡಿದೆ.

ತಹಶೀಲ್ದಾರ್ ಪೃಥ್ವಿ ಸಾನಿಕಮ್ , ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ , ನಾರಾವಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜವರ್ಮ ಜೈನ್, ಉಪಾಧ್ಯಕ್ಷೆ ಶ್ರೀಮತಿ ಸುಮಿತ್ರ , ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಬಸಪ್ಪ, ತೋಟಗಾರಿಕಾ

ಇಲಾಖೆಯ ಚಂದ್ರಶೇಖರ್, ಸಿಡಿಪಿಓ ಪ್ರಿಯಾ ಆಗ್ನೇಸ್, ತಾ.ಪಂ. ಲೆಕ್ಕ ಅಧೀಕ್ಷಕ ಗಣೇಶ್ ಪೂಜಾರಿ, ಬಿ.ಸಿ.ಎಂ. ಇಲಾಖೆಯ ಜೋಸೆಫ್, ತಾ.ಪಂ. ಸಂಯೋಜಕ ಜಯಾನಂದ , ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಉದಯ ಹೆಗ್ಡೆ, ಗ್ರಾ.ಪಂ ಸದಸ್ಯರು, ಪಿಡಿಒ, ಕಾರ್‍ಯದರ್ಶಿಗಳು, ವಿವಿಧ ಇಲಾಖಾಧಿಕಾರಿಗಳು ಭಾಗವಹಿಸಿದರು.
