ಕುತ್ಲೂರು: ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಪುನರ್ವಸತಿ ಹೊಂದಿರುವ ಕುಟುಂಬದ ಸದಸ್ಯರಿಗೆ ಅಡಿಕೆ ಬೆಳೆ ಕೊಳೆರೋಗ ನಿಯಂತ್ರಿಸುವ ಬಗ್ಗೆ ಎಲೆಚುಕ್ಕಿ ರೋಗದ ಬಗ್ಗೆ ಬಯೊಗ್ಯಾಸ್ ಅಳವಡಿಸುವ ಬಗ್ಗೆ ಮಾಹಿತಿ ಕಾರ್ಯಕ್ರಮವು ಕುತ್ಲೂರಿನ ಶ್ರೀ ದೇವಿ ಕೃಪಾದಲ್ಲಿ ನಡೆಯಿತು.
ಡಬ್ಲ್ಯೂಸಿ ಸಂಸ್ಥೆಯ ಕ್ಷೇತ್ರಾಧಿಕಾರಿಯಾದ ಕೆ.ರಾಮಚಂದ್ರಭಟ್ ಸ್ವಾಗತಿಸಿ ಸಂಸ್ಥೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ದಲ್ಲಿ ಸಂಸ್ಥೆಯ ಮುಖಾಂತರ ಉಚಿತವಾಗಿ ಹತ್ತುಫಲಾನುಭವಿಗಳಿಗೆ ವಾಹನ ಚಾಲನ ತರಬೇತಿ ಕೊಡಿಸಿ ವಾಹನ ಚಾಲನ ಪರವಾನಿಗೆ ವಿತರಿಸಲಾಯಿತು. ಆಯ್ದ ಫಲನುಭವಿಗಳಿಗೆ ಎರಡು ಸಾವಿರ ಅಡಿಕೆ ಗಿಡ ತೆಂಗಿನ ಗಿಡ ನೂರು ಐನೂರು ಕೊಕೊ ಗಿಡಗಳನ್ನು ಉಚಿತವಾಗಿ ನೀಡಲಾಯಿತು. ಅಡಿಕೆಬೆಳೆಗಳಿಗೆ ತಗಲುವ ರೋಗಗಳ ಮತ್ತು ಅದರ ನಿಯಂತ್ರಿಸುವ ಮಾಹಿತಿ ಹಾಗೂ ಬಯೊಗ್ಯಾಸ್ ಅಳವಡಿಸುವ ಬಗ್ಗೆಲ್ಲ ಪ್ರಗತಿಪರ ಕೃಷಿಕರಾದ ಶೈಲೇಂದ್ರ ಮರಾಠೆ ಈದು ಮಾಹಿತಿ ನೀಡಿದರು.
ವೇಣೂರಿನ ಲಯನ್ಸ್ ಕ್ಲಬ್ ನ ನಿಕಟ ಪೂರ್ವ ಅಧ್ಯಕ್ಷ ನಿರಂಜನ ವಾಹನ ಚಾಲನ ಬಗ್ಗೆಲ್ಲ ವಿವರಿಸಿದರು. ಪ್ರಮಿಳಾ ಆರ್ ಭಟ್ ಧನ್ಯವಾದವಿತ್ತರು. ಸುಮಾರು ಎಂಬತ್ತು ರೈತರು ಭಾಗವಹಿಸಿದ್ದರು.,