ಧರ್ಮಸ್ಥಳ: ಬೆಂಗಳೂರಿನ ದಾಸರಹಳ್ಳಿ ಊರಿನ ಮಹಿಳೆ ಮನೆಯಲ್ಲಿ ಜಗಳವಾಡಿ ಡಿ. 7ರಂದು ರಾತ್ರಿ ಬಸ್ಸು ಹತ್ತಿ ಧರ್ಮಸ್ಥಳಕ್ಕೆ ಬಂದ ಮಹಿಳೆ ಡಿ. 8ರಂದು ಬೆಳಗ್ಗೆ ಸಾರ್ವಜನಿಕರೋವ೯ರ ಮೊಬೈಲಿನಲ್ಲಿ ತನ್ನ ಪತಿಗೆ ಕರೆ ಮಾಡಿ ನಾನು ನೇತ್ರಾವತಿ ನದಿಗೆ ಬಿದ್ದು ಸಾಯುತ್ತೇನೆ ಎಂದು ತಿಳಿಸಿದ್ದರು.
ತಕ್ಷಣ ಮಹಿಳೆಯ ಪತಿ ಗೋವಿಂದ್ ರಾಜ್ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಮಾಸ್ಟರ್ ಸ್ನೇಕ್ ಪ್ರಕಾಶ್’ ರವರಿಗೆ ಕರೆ ಮಾಡಿ ತಿಳಿಸಿದರು. ಅದರಂತೆ ಸ್ನೇಕ್ ಪ್ರಕಾಶ್’ ಮತ್ತು ನಳಿನ್ ಕುಮಾರ್ ಬೇಕಲ್ ಇಬ್ಬರು ಸತತ ಮೂರು ಗಂಟೆಗಳ ಕಾಲ ಹುಡುಕಾಡಿ ಮಹಿಳೆಯನ್ನು ಪತ್ತೆ ಹಚ್ಚಿ ಅವರಿಗೆ ಸಮಾಧಾನ ಹೇಳಿ, ಅವರಿಗೆ ಬೆಳಗಿನ ಉಪಹಾರ ನೀಡಿ ಅವರನ್ನು ಧರ್ಮಸ್ಥಳ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ಅವರ ಮನೆಯವರಿಗೆ ಮಾಹಿತಿಯನ್ನು ತಿಳಿಸಿದರು. ಮನೆಯವರು ಬಂದು ಮಹಿಳೆಯನ್ನು ತಮ್ಮ ಜೊತೆಗೆ ಕರೆದುಕೊಂಡು ಹೋಗಿದ್ದಾರೆ.