September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಗೇರುಕಟ್ಟೆ: ಕೊರಂಜ ಸ.ಉ.ಪ್ರಾ. ಶಾಲೆಯ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆ

ಗೇರುಕಟ್ಟೆ: ಕೊರಂಜ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಮುಂದಿನ ಮೂರು ವರ್ಷದ ಅವಧಿಗೆ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆಯು ಗ್ರಾ.ಪಂ. ಅಧ್ಯಕ್ಷರಾದ ದಿವಾಕರ ಎಮ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.


ಮುಂದಿನ ಮೂರು ವರ್ಷದ ಅವಧಿಗೆ ವಿದ್ಯಾರ್ಥಿಗಳ ಅನುಪಾತದಂತೆ ಪರಿಶಿಷ್ಟ ಜಾತಿ/ಪಂಗಡ,ಅಲ್ಪಸಂಖ್ಯಾತ, ಮಹಿಳಾ ಮತ್ತು ಸಾಮಾನ್ಯ ಮೀಸಲಾತಿಯಂತೆ 18 ಜನ ಪೋಷಕ ಪ್ರತಿನಿಧಿಗಳನ್ನು ಪೋಷಕರು ಆಯ್ಕೆ ಮಾಡಿ, ಪೋಷಕ ಪ್ರತಿನಿಧಿಗಳ ಪೈಕಿ ಒಬ್ಬರು ಅಧ್ಯಕ್ಷರು, ಉಪಾದ್ಯಕ್ಷರು ಆಯ್ಕೆ ಮಾಡಲಾಯಿತು.


ಅಧ್ಯಕ್ಷ ಸ್ಥಾನಕ್ಕೆ ಹರೀಶ್ ಕುಮಾರ್ ಮತ್ತು ಸತೀಶ್ ಭಂಡಾರಿ ಇಬ್ಬರು ಆಕಾಂಕ್ಷಿಗಳು ಸ್ಪರ್ಧಿಸಿದ್ದರು. ಅಧ್ಯಕ್ಷರ ಆಯ್ಕೆಯನ್ನು ಪೋಷಕ ಪ್ರತಿನಿಧಿಗಳು ಕೈ ಎತ್ತುವ ಮೂಲಕ ಆಯ್ಕೆ ಮಾಡಿದರು. ಹರೀಶ್ ಕುಮಾರ್ ರವರಿಗೆ 14 ಬೆಂಬಲಿತರು ಸತೀಶ್ ಭಂಡಾರಿಯವರಿಗೆ 4 ಮಂದಿ ಬೆಂಬಲಿತರು ಕೈ ಎತ್ತಿ ಬಹುಮತದಂತೆ ಹರೀಶ್ ಕುಮಾರ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಮುನೀರಾ ಬಟ್ಟೆಮಾರು ಅವಿರೋಧ ಆಯ್ಕೆಯಾದರು.


ಸಭೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಕರೀಮ್, ಶ್ರೀಮತಿ ಶ್ವೇತಾ,ನಾಳ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಭುವನೇಶ್ ಜಿ, ಮಾಜಿ ಶಾಲಾಭಿವೃದ್ದಿ ಸಮಿತಿ ಸದಸ್ಯರು,ಪೋಷಕರು, ಶಾಲಾ ಶಿಕ್ಷಕರು ಹಾಜರಿದ್ದರು. ಮುಖ್ಯೋಪಾದ್ಯಾಯರಾದ ಶ್ರೀಮತಿ ಶಾಂತ ಎಸ್ ಶಾಲಾಭಿವೃದ್ದಿ ಸಮಿತಿಯ ರಚನಾ ನಡವಳಿಯನ್ನು ಸಭೆಗೆ ತಿಳಿಸಿದರು .ಶಿಕ್ಷಕ ಕೃಷ್ಣಪ್ರಸಾದ್ ಸ್ವಾಗತಿಸಿ, ದೈಹಿಕ ಶಿಕ್ಷಕ ರವಿರಾಜ್ ಕಾರ್ಯಕ್ರಮ ನಿರ್ವಹಿಸಿ, ಶಿಕ್ಷಕಿ ಶ್ರೀಮತಿ ಅನುರಾಧ ಬಿ.ಸಿ. ವಂದಿಸಿದರು.

Related posts

ಗ್ರಾ.ಪಂ. ಮಟ್ಟದ ಸಂಜೀವಿನಿ ಮುಖ್ಯಪುಸ್ತಕ ಬರಹಗಾರರು ಹಾಗೂ ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಮಹಾ ಒಕ್ಕೂಟದಿಂದ ಬೆಂಗಳೂರುನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ

Suddi Udaya

ಪಟ್ಟೂರು ಶ್ರೀರಾಮ ವಿದ್ಯಾ ಸಂಸ್ಥೆಯ ಕನ್ನಡ ವಿಭಾಗದಿಂದ ವ್ಯಾಕರಣ ಮಾಲಿಕೆ ಕಾರ್ಯಾಗಾರ

Suddi Udaya

ಮಲವಂತಿಗೆ: ಪಾಮಾಜಿ -ಕೊಲ್ಲಿ ರಸ್ತೆಗೆ ಶಾಸಕ ಹರೀಶ್ ಪೂಂಜರಿಂದ ಶಿಲಾನ್ಯಾಸ

Suddi Udaya

ಶ್ರೀ ಸೌತಡ್ಕ ಕ್ಷೇತ್ರದಲ್ಲಿ ಇಜ್ಜಾವು ಮನೆಯವರಿಂದ ಸೇವಾರ್ಥ ಮೂಡಪ್ಪ ಸೇವೆ

Suddi Udaya

ಮ್ಯಾಟ್ರಿಮೋನಿ ಆ್ಯಪ್‌ ಮೂಲಕ  ಪರಿಚಯವಾದ ಯುವತಿಯಿಂದ ಕೊಯ್ಯೂರಿನ ಉದ್ಯಮಿಗೆ ರೂ.87 ಲಕ್ಷ ವಂಚನೆ: ಪ್ರಕರಣ ದಾಖಲು

Suddi Udaya

ಮಿತ್ತಬಾಗಿಲು: ಮನೆಯ ಬೀಗ ಮುರಿದು ನಗದು ಕಳ್ಳತನ

Suddi Udaya
error: Content is protected !!