ತೆಕ್ಕಾರು: ತೆಕ್ಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ ಸೌಭಾಗ್ಯ ಡಿ. 9ರಂದು ಶುಭಾರಂಭ ಗೊಂಡಿತು. ಕಕ್ಯಪದವು ಶ್ರೀ ಪಂಚ ದುರ್ಗಾಪರಮೇಶ್ವರಿ ದೇವಸ್ಥಾನ ಪ್ರಧಾನ ಅರ್ಚಕ ರಾಜೇಂದ್ರ ಅರ್ಭುಡತ್ತಾಯ
ರವರ ನೇತೃತ್ವದಲ್ಲಿ ವೈದಿಕ ವಿಧಿವಿಧಾನಗಳು ನೆರವೇರಿಸಿದರು.
ತೆಕ್ಕಾರು ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಬಿ. ತುಕಾರಾಂ ನಾಯಕ್ ನ್ಯಾಯ ಬೆಲೆ ಅಂಗಡಿಯನ್ನು ಉದ್ಘಾಟಿಸಿ ಮಾತನಾಡಿ ಜನ ಸೇವೆಯಿಂದ ಜೀವನ ತೃಪ್ತಿದಾಯಕ ಆಗುತ್ತದೆ. ಜೀವನದ ಹಾದಿಯಲ್ಲಿ ಇನ್ನೋಬ್ಬರಿಗೆ ಸಹಾಯ ಮಾಡಿದ್ದಲ್ಲಿ ಸಂತೋಷ ಸಿಗುತ್ತದೆ. ಜನತೆಯ ಶ್ರಮದಿಂದ ಪ್ಯಾಕ್ಸ್ ರಚನೆಗೊಂಡು ರೈತಾಪಿ ವರ್ಗದ ಜನರ ಶಕ್ತಿಯಾಗಿ ಬೆಳೆದು ನಿಂತಿದೆ. ಹೋರಾಟ ನಡೆಸಿ ಸೊಸೈಟಿ ತೆಕ್ಕಾರಿಗೆ ಬಂದಿರುವುದು ನಮ್ಮೆಲ್ಲರ ಭಾಗ್ಯ ಎಂದು ಅಭಿಪ್ರಾಯಪಟ್ಟರು.
ಬಾರ್ಯ ಪ್ಯಾಕ್ಸ್ ಅಧ್ಯಕ್ಷ ಪ್ರವೀಣ್ ರೈ ಮಾತನಾಡಿ, ತೆಕ್ಕಾರಿನಲ್ಲಿ ಒಂದು ವಿಶೇಷ ಶಕ್ತಿ ಇದೆ. ಶಾಲಾ ದಿನಗಳಿಂದಲೇ ತೆಕ್ಕಾರಿನಲ್ಲಿ ನಡೆಯುತ್ತಿದ್ದ ಹೋರಾಟಗಳು ಪ್ರೇರಣೆಯಾಗಿದೆ. ನೂತನ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ. ಪಕ್ಷ ಬೇಧವಿಲ್ಲದ ಜನನಾಯಕ ಅಬ್ದುಲ್ ರಝಾಕ್. ಅವರು ತೆಕ್ಕಾರಿಗೆ ಗ್ರಾಮ ಪಂಚಾಯತ್, ಪ್ಯಾಕ್ಸ್ ನಿರ್ಮಾಣದಲ್ಲಿ ಅವರ ಪಾತ್ರ ಅಪಾರವಾಗಿದೆ. ಸಂಘವು ಮತ್ತಷ್ಟು ಏಳಿಗೆ ಹೊಂದಲಿ ಎಂದು ಹೇಳಿದರು.
ತೆಕ್ಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅಬ್ದುಲ್ ರಝಾಕ್ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, 2019ರಲ್ಲಿ ತೆಕ್ಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಪ್ರಾರಂಭಗೊಂಡಿತು. 85 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ ಗೊಂಡಿದ್ದು 4,300 ಚದರ ವಿಸ್ತಿರ್ಣ ಹೊಂದಿದೆ. ಕಳೆದ 20 ವರ್ಷಗಳ ಕಾಲ ಬಾರ್ಯ ಸೊಸೈಟಿಯಲ್ಲಿ ವಿಲೀನ ಗೊಂಡ ಈ ಸೊಸೈಟಿ ಬಳಿಕ ಹೋರಾಟದ ನಂತರ ವಿಭಜನೆಗೊಂಡು ತೆಕ್ಕಾರಿನಲ್ಲಿ ಪ್ರಾರಂಭಗೊಂಡಿದೆ. ಕಟ್ಟಡ ನಿರ್ಮಾಣಕ್ಕೆ ಜಿಲ್ಲಾ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಅವರ ನಿದೇರ್ಶನ, ಸಹಕಾರಿ ಧುರೀಣ ದಿ. ನಿರಂಜನ್ ಬಾವಂತಬೆಟ್ಟು ಹಿರಿಯರ, ಜನರ ಸಹಕಾರದಿಂದ ನಿರ್ಮಾಣ ಗೊಂಡಿದೆ. ಬ್ಯಾಂಕ್ ನ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಸಿಇಒ ರಾಘವೇಂದ್ರ ಅಡಪರ ಪರಿಶ್ರಮವಿದೆ. ಸಿಬ್ಬಂದಿಗಳ ಪ್ರಾಮಾಣಿಕ ಸೇವೆಯಿಂದ, ಗ್ರಾಹಕರ ಸಹಕಾರದಿಂದ ಕಳೆದ ನಾಲ್ಕು ವರ್ಷಗಳಿಂದ ಸಾಧನ ಪ್ರಶಸ್ತಿ ಸಂಘಕ್ಕೆ ಲಭಿಸಿದೆ. ಆಡಳಿತ ಮಂಡಳಿಯ ಗೌರವಧನವನ್ನು ಸ್ವೀಕರಿಸದೆ, ವಿದ್ಯಾರ್ಥಿಗಳಿಗೆ ವಿದ್ಯಾ ನಿಧಿಯಾಗಿ ನೀಡುತ್ತಾ ಬಂದಿದೆ ಎಂದು ಹೇಳಿದರು.
ನಿದೇರ್ಶಕರಾದ ಶಿವಪ್ಪ ಪೂಜಾರಿ ಬೇನಪ್ಪು ಬ್ಯಾಂಕ್ ಕಚೇರಿ ಉದ್ಘಾಟಿಸಿದರು ಹಾಗೂ ಹುಸೇನ್ ಬಾಗ್ಲೋಡಿ ಭದ್ರತಾ ಕೊಠಡಿ ಉದ್ಘಾಟನೆಗೈದರು. ಕಾರ್ಯಚಟುವಟಿಕೆಯ ಕಚೇರಿಯನ್ನು ಅಜಿಲಮೊಗರು ಮಸೀದಿಯ ಮಾಜಿ ಖತೀಬರು ಅಲ್ ಜಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಕಚೇರಿ ಉದ್ಘಾಟಿಸಿದರು. ವೃತ್ತಿ ಪರ ನಿರ್ದೇಶಕ ಇನಾಸ್ ರೋಡಿಗ್ರಸ್ ಮೀಟಿಂಗ್ ಹಾಲ್ ಉದ್ಘಾಟಿಸಿದರು.
ಸನ್ಮಾನ: ಗುತ್ತಿಗೆದಾರರ ರಿತೇಶ್ ರೈ, ಗಾರೆ ಕೆಲಸದ ಸತೀಶ್ ಪೂಜಾರಿ ಬೇನಪ್ಪು, ವಿನ್ಯಾಸಗಾರ ಶರಣ್ ರೈ ಮೂಂಡೂರು , ಫ್ಯಾಭ್ರಿಕ್ರೇಷನ್ ಕೆಲಸದ ಭರತ್ ಕುಮಾರ್ ಬೇನಪ್ಪು , ತೆಕ್ಕಾರು ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಬಿ. ತುಕಾರಾಂ ನಾಯಕ್, ಬಾರ್ಯ ಪ್ಯಾಕ್ಸ್ ನ ಮಾಜಿ ಉಪಾಧ್ಯಕ್ಷ ಎಂ. ಕೃಷ್ಣ ನಾಯಕ್ , ಸಿಇಒ ರಾಘವೇಂದ್ರ ಅಡಪ ಹಾಗೂ ಸಂಘದ ಅಧ್ಯಕ್ಷ ಅಬ್ದುಲ್ ರಝಾಕ್ ಅವರನ್ನು ಸನ್ಮಾನಿಸಲಾಯಿತು. ಬಳಿಕ ಎಲ್ಲಾ ನಿದೇರ್ಶಕರನ್ನು, ಸಿಬ್ಬಂದಿಗಳನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ನಿದೇರ್ಶಕರಾದ ಜನಾರ್ದನ ಪೂಜಾರಿ, ಅಬ್ದುಲ್ ರಹಿಮಾನ್,ಶೇಖರ ಪೂಜಾರಿ, ನೆಬಿಸ, ಸಂಗೀತಾ, ರವಿ ಮತ್ತು ಅಬ್ದುಲ್ ಮುನೀರ್, ಬಾರ್ಯ ಪ್ಯಾಕ್ಸ್ ಉಪಾಧ್ಯಕ್ಷ ಶಿವರಾಮ ನಾಯ್ಕ ಹಾಗೂ ಶಾಖಾ ವ್ಯವಸ್ಥಾಪಕ ಶಶಿಧರ್ ಅಡಪ, ತೆಕ್ಕಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪುಷ್ಪಾ , ನವೋದಯ ಪ್ರೇರಕ ಲೋಕೇಶ್ , , ಬಶೀರ್ ಸಹಿತ ಮತ್ತಿತರರು ಉಪಸ್ಥಿತರಿದ್ದರು.
ಸಿಬ್ಬಂದಿಗಳಾದ ನಮಿತಾ, ಸಾಹಿದಾಬಾನು, ನವೀಶ, ಉಸ್ಮಾನ್, ಶಿವರಾಮ ನಿಕ್ಷೀತ್ ಹಾಗೂ ಪಿಗ್ಮಿ ಸಂಗ್ರಹಕ ಹೈದರ್ ಸಹಕರಿಸಿದರು. ನಿದೇರ್ಶಕ ಇನಾಸ್ ರೋಡಿಗ್ರಸ್ ಸ್ವಾಗತಿಸಿ ವಂದಿಸಿದರು. ಲೆಕ್ಕಿಗೆ ಪ್ರೇಮಾ ನಿರೂಪಿಸಿದರು.