September 6, 2026
Uncategorized

ರಹ್ಮಾನಿಯಾ ಜುಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಕಾಜೂರು ಕಾಜೂರು ಜಂಇಯ್ಯತುಲ್ ಉಲಮಾ ಸಮಿತಿ ರಚನೆ

ಕಾಜೂರು : ಇತಿಹಾಸ ಪ್ರಸಿದ್ಧ ಧಾರ್ಮಿಕ ಶ್ರದ್ದಾ ಕೇಂದ್ರ ಹಝ್ರತ್ ಹಯಾತುಲ್ ಔಲಿಯಾ ದರ್ಗಾ ಶರೀಫ್ ಕಾಜೂರು ಆಡಳಿತ ಸಮಿತಿಯ ಸಹಕಾರದೊಂದಿಗೆ ಜಮಾಅತ್‌ನ ಧಾರ್ಮಿಕ – ಶರೀಅತ್ ವಿಷಯದಲ್ಲಿ ಕಾರ್ಯಾಚರಿಸುವ ಗುರಿಯೊಂದಿಗೆ ರಚನೆಗೊಂಡ ಕಾಜೂರು ಜಂಇಯ್ಯತುಲ್ ಉಲಮಾ ಸಮಿತಿಯನ್ನು ಕರ್ನಾಟಕ ಜಂಇಯ್ಯತುಲ್ ಉಲಮಾ ಮುಶಾವರ ಸದಸ್ಯರಾದ ಅಲ್ ಹಾಜಿ ಕೆ.ಎಮ್ ಉಮರ್ ಸಖಾಫಿ ಉಸ್ತಾದ್ ರವರ ನೇತೃತ್ವದೊಂದಿಗೆ ಕಾಜೂರು ರಹ್ಮಾನಿಯಾ ಮಸೀದಿಯಲ್ಲಿ ಅಂಗೀಕಾರ ಮಾಡಲಾಯಿತು.

ಕಾಜೂರು ಜಂಇಯ್ಯತುಲ್ ಉಲಮಾ ಸಮಿತಿಯು ದೀನೀ ದಅವತ್ ಮಾಡಲು ಅನುಮತಿ ಹಾಗೂ ಅನುಮೋದನಾ ಸಭೆಯು ಡಿ.05 ರಂದು ರಹ್ಮಾನಿಯಾ ಜುಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಕಚೇರಿಯಲ್ಲಿ ನಡೆಯಿತು. ಪ್ರಸ್ತುತ ಸಭೆಯಲ್ಲಿ ಕಾಜೂರು ದರ್ಗಾ ಸಮಿತಿಯ ಗೌರವಾನ್ವಿತ ಅಧ್ಯಕ್ಷರಾದ ಕೆ.ಯು ಇಬ್ರಾಹಿಂ ರವರು ಮಾತನಾಡಿ, ಈ ಉಲಮಾ ಒಕ್ಕೂಟವು ಕಾಜೂರು ಕೇಂದ್ರ ಆಡಳಿತ ಸಮಿತಿಯ ಸಹಕಾರದಲ್ಲಿ ಕಾರ್ಯಾಚರಿಸುತ್ತಿದ್ದು, ಜಮಾಅತಿನ ಧಾರ್ಮಿಕ- ಶರೀಅತ್ ವಿಷಯದಲ್ಲಿ ಸಲಹೆ ಮತ್ತು ನಿರ್ದೇಶನಗಳನ್ನು ನೀಡಬೇಕೆಂದೂ, ಯಾವುದಾದರೂ ಸಮಸ್ಯೆ ಬರುವಾಗ ಉಲಮಾ-‌ ಉಮರಾ ಜತೆಗೂಡಿ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿ ನೂತನ ಸಮಿತಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದಿಕ್ ಜೆ.ಹೆಚ್, ಕೋಶಾಧಿಕಾರಿ ಮಹಮ್ಮದ್ ಕಮಾಲ್ ಹಾಗೂ ದರ್ಗಾ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.

ಕಾಜೂರು ಜಂಇಯ್ಯತುಲ್ ಉಲಮಾ ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಅಲ್ ಹಾಜ್ ಕೆ.ಎಂ ಉಮರ್ ಸಖಾಫಿ ಕಾಜೂರು, ಅಧ್ಯಕ್ಷರಾಗಿ ಮುಹಮ್ಮದ್ ಬಶೀರ್ ಅಹ್ಸನಿ ಕಾಜೂರು ಉಪಾಧ್ಯಕ್ಷರುಗಳಾಗಿ ಕೆ ಯು ಮಹಮ್ಮದ್ ಸಖಾಫಿ ಕಾಜೂರು, ಅಬ್ದುಲ್ಲತೀಫ್ ಮದದಿ ಕಾಜೂರು ಪ್ರ.ಕಾರ್ಯದರ್ಶಿಯಾಗಿ ಹಮೀದ್ ಮುಸ್ಲಿಯಾರ್ ಕುಕ್ಕಾವು ಜೊತೆ ಕಾರ್ಯದರ್ಶಿಗಳಾಗಿ ಸವಾದ್ ಹಿಕಮಿ ದಿಡುಪೆ, ಮಹಮ್ಮದ್ ಫಾಳಿಲಿ ದಿಡುಪೆ ಕೋಶಾಧಿಕಾರಿಯಾಗಿ ಹಮೀದ್ ಸಅದಿ ಕುಕ್ಕಾವು ನಿರ್ದೇಶಕರು ಶಂಸುದ್ದೀನ್ ಝುಹ್ರಿ ಇಸ್ಮಾಯಿಲ್ ಮುಸ್ಲಿಯಾರ್ ದಿಡುಪೆ ಸದಸ್ಯರುಗಳಾಗಿ ಕೆ.ಕೆ.ಉಸ್ಮಾನ್ ಮುಸ್ಲಿಯಾರ್, ಕೆ.ಎಂ.ಹಕೀಂ ಮುಸ್ಲಿಯಾರ್, ಶರೀಫ್ ಸಅದಿ ದಿಡುಪೆ ಅಲ್ಫಾಝ್ ಸಅದಿ ಕುಕ್ಕಾವು,ಶರ್ವಾನ್ ಸಅದಿ ಕಾಜೂರು.

Related posts

ಧರ್ಮಸ್ಥಳ: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ: ವಾರೀಸುದಾರರು ಧರ್ಮಸ್ಥಳ ಠಾಣೆಯನ್ನು ಸಂಪರ್ಕಿಸುವಂತೆ ಮನವಿ

Suddi Udaya

ಪುಂಜಾಲಕಟ್ಟೆ ಪ್ರ.ದ. ಕಾಲೇಜು: ಯೂತ್ ಹೆಲ್ತ್ ಮತ್ತು ನ್ಯೂಟ್ರಿಷನ್ ವಿಶೇಷ ಉಪನ್ಯಾಸ

Suddi Udaya

ಇಳಂತಿಲ ಗ್ರಾ.ಪಂ. ಉಪಚುನಾವಣೆ: ಬಿಜೆಪಿ ಬೆಂಬಲಿತ ಅಭ್ಯರ್ಥಿ ಶ್ರೀಮತಿ ಮೀನಾಕ್ಷಿ ಯವರ ಪರವಾಗಿ ಮನೆ ಮನೆ ಭೇಟಿ ಅಭಿಯಾನ

Suddi Udaya

ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಾಧನೆಗೆ ಸಾಧನಾ ಪ್ರಶಸ್ತಿಯ ಗೌರವ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ ವೇಣೂರು ಇಲ್ಲಿನ ಹಳೆ ವಿದ್ಯಾರ್ಥಿ ಸಂಘ ಪ್ರತಿ ವರ್ಷದಂತೆ ದೀಪಾವಳಿಯ ನರಕ ಚತುರ್ದಶಿಯಂದು ಆಯೋಜಿಸಿರುವ ವಾರ್ಷಿಕ ಕ್ರೀಡಾಕೂಟ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ

Suddi Udaya

ಧರ್ಮಸ್ಥಳ : ಮಹಿಳೆಯ ರೂ. 2 ಲಕ್ಷ ಮೌಲ್ಯದ ಮಾಂಗಲ್ಯ ಸರ ಇರಿಸಿದ್ದ ಪರ್ಸ್ ಕಳವು: ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya
error: Content is protected !!