ಬೆಳ್ತಂಗಡಿ: ಸುಲ್ಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿಲ್ಲಿಸಿದ್ದ ವಾಹನಗಳಿಂದ ಬ್ಯಾಟರಿ ಕಳವು ಮಾಡಿದ ಘಟನೆ ಡಿ.13 ರಂದು ಬೆಳಕಿಗೆ ಬಂದಿದೆ.
ಯು.ಎಸ್.ಕೆ ಕನಸ್ಟ್ರಕ್ಷನ್ ಅವರಿಂದ ಅಳದಂಗಡಿಯಿಂದ ನಾರಾವಿಯವರೆಗೆ ರಾಜ್ಯ ಹೆದ್ದಾರಿಯ ರಸ್ತೆ ಕಾಮಗಾರಿ ಕೆಲಸ ನಡೆಯುತ್ತಿದ್ದು,ಅವರು ಸುಲ್ಕೇರಿ ಗ್ರಾಮ ಪಂಚಾಯತ್ ಎದರು ಮೈದಾನದಲ್ಲಿ ವಾಹನ ನಿಲ್ಲಿಸಿದ್ದರು. ನಿಲ್ಲಿಸಲಾಗಿದ್ದ ಟಿಪ್ಪರ್ ನ ಬ್ಯಾಟರಿ ಜೋಡಿಸುವ ಲಾಕರ್ ಮುರಿದು ಬ್ಯಾಟರಿ ಕಳವು ಮಾಡಲಾಗಿದೆ. ವಯರ್ ಕಟ್ ಮಾಡಿ ವಿಕೃತಿ ಮೆರೆಯಲಾಗಿದೆ. ಕುದ್ಯಾಡಿ ರಸ್ತೆ ಬದಿ ನಿಲ್ಲಿಸಿದ್ದ ಹಿಟಾಚಿಯ 2 ಬ್ಯಾಟರಿ ಕಳವಾಗಿದೆ. ಇತ್ತಿಚೆಗೆ ಸ್ಥಳಿಯ ಶಾಲೆಯಲ್ಲಿ ಕಾರ್ಯಕ್ರಮ ನಡೆದಾಗ ಜನರೇಟರ್ ನ ಬ್ಯಾಟರಿ ಕಳವು ಮಾಡಲಾಗಿದೆ.ಸಿದ್ದಿ ವಿನಾಯಕ ಅರ್ಥ್ ಮೂವರ್ಸ್ ನ ಬ್ಯಾಟರಿ ಕೂಡ ಕಳವಾಗಿದೆ.ಈ ಸಂಬಂಧ ವೇಣೂರು ಪೋಲಿಸ್ ಠಾಣೆಗೆ ದೂರು ನೀಡಲಾಗಿದೆ.
ಕಳವಾದ ಬ್ಯಾಟರಿಗಳ ಮೌಲ್ಯ ರೂ. 50 ಸಾವಿರ ಎಂದು ಅಂದಾಜಿಸಲಾಗಿದೆ. ಸುಲ್ಕೇರಿ, ಕುದ್ಯಾಡಿ, ಕುತ್ಲೂರು, ಪಿಲ್ಯ ಪರಿಸರದ ರಸ್ತೆ ಬದಿ ವಾಹನ ನಿಲ್ಲಿಸುವರು ಜಾಗ್ರತೆ ವಹಿಸುವುದು ಮುಖ್ಯ. ವಾಹನದ ಬ್ಯಾಟರಿ ಕಳ್ಳರಿದ್ದಾರೆ ಎಚ್ಚರಿಕೆ ಎಂದು ತಿಳಿಸಿದ್ದಾರೆ.