ಬೆಳ್ತಂಗಡಿ : ನಲಿಕೆಯವರ ಸಮಾಜ ಸೇವಾ ಸಂಘ (ರಿ) ಬೆಳ್ತಂಗಡಿ ಇದರ ಕೊಯ್ಯೂರು ಶಾಖೆಯ ಅಧ್ಯಕ್ಷರಾಗಿ ಸಮುದಾಯದ ಮಾರ್ಗದರ್ಶಕರಾಗಿ ಎರಡು ವರ್ಷದ ಹಿಂದೆ ನಿಧನರಾದ ದಿ.ವೀರಪ್ಪ ನಲ್ಕೆ ಇವರ ಎರಡನೇ ವರ್ಷದ ಪುಣ್ಯ ಸ್ಮರಣಾರ್ಥವಾಗಿ ಇಲ್ಲಿನ ಬೊಳ್ಳುಕಲ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಬರೆಯುವ ಪುಸ್ತಕ ಹಾಗೂ ಲೇಖನಿ ವಿತರಿಸಲಾಯಿತು. ಈ ಸಂದರ್ಭದಲ್ಲಿ
ಬೆಳ್ತಂಗಡಿ ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘದ ಸಂಘದ ಅಧ್ಯಕ್ಷ ಎಸ್.ಪ್ರಭಾಕರ, ವಿಟ್ಲ ವಿಠಲ ಅನುದಾನಿತ ಪ್ರೌಡ ಶಾಲಾ ಶಿಕ್ಷಕ ರಮೇಶ್ ಬಿ. ಕೆ., ನಲಿಕೆಯವರ ಸಮಾಜ ಸೇವಾ ಸಂಘದ ತಾಲೂಕು ಸಮಿತಿ ಸದಸ್ಯ ವಿನಯ್ ಕೊಯ್ಯೂರು , ಶೇಖರ ಶಾಂತಿಕೋಡಿ , ಹಾಗೂ ಶಾಲಾ ಶಿಕ್ಷಕಿ ಉಪಸ್ಥಿತರಿದ್ದರು. ದಿ. ವೀರಪ್ಪರವರ ಪುತ್ರ ವಿನಯ್ ಕೊಯ್ಯೂರು ಪುಸ್ತಕ , ಪೆನ್ನು ಪ್ರಾಯೋಜಿಸಿದ್ದರು.